AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾಯ ತಿಳಿದಿದ್ದರೂ ಯುವಕರ ಹುಚ್ಚಾಟ; ಜಾರುವ ಬಂಡೆಗಳ ಮೇಲೆ ನಿಂತು ಸೆಲ್ಫಿ, ರೀಲ್ಸ್​ಗಾಗಿ ಮುಗಿಬಿದ್ದ ಪ್ರವಾಸಿಗರು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಬಳಿ ಇರುವ ಕೂಡುಗೆ ಫಾಲ್ಸ್​ಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.  ಡೇಂಜರಸ್ ಜಲಪಾತದಲ್ಲಿ ಪ್ರವಾಸಿಗರು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಆರ್ಭಟಿಸುತ್ತಿರುವ ಜಲಪಾತ ನೋಡಲು ಬರುತ್ತಿರುವ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ನಿಂತು ಫೋಸ್ ಕೊಡುತ್ತ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಅಪಾಯ ತಿಳಿದಿದ್ದರೂ ಯುವಕರ ಹುಚ್ಚಾಟ; ಜಾರುವ ಬಂಡೆಗಳ ಮೇಲೆ ನಿಂತು ಸೆಲ್ಫಿ, ರೀಲ್ಸ್​ಗಾಗಿ ಮುಗಿಬಿದ್ದ ಪ್ರವಾಸಿಗರು
ಯುವಕನಿಂದ ಸೆಲ್ಫಿಗೆ ಫೋಸ್, ಹರಿಯುವ ನೀರಿನಲ್ಲಿ ಬೈಕ್ ತೊಳೆಯುತ್ತಿರುವುದು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಆಯೇಷಾ ಬಾನು

Updated on:Jul 25, 2023 | 12:36 PM

ಬಾಗಲಕೋಟೆ, ಜುಲೈ 25: ರಾಜ್ಯದಲ್ಲಿ ಮುಂಗಾರು(Monsoon) ಮಳೆ ಚುರುಕುಗೊಂಡಿದೆ. ರಾಜ್ಯದ ಅನೇಕ ಕಡೆ ಭಾರಿ ಮಳೆಯಾಗಿ(Karnataka Rain) ಡ್ಯಾಂಗಳು ತುಂಬಿ ಹರಿಯುತ್ತಿವೆ. ಮನೆಗಳು, ದೇವಸ್ಥಾನಗಳು ಮುಳುಗಿವೆ. ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆದ್ರೆ ಮಳೆಯ ಪರಿಣಾಮ ಅರಿಯದ ಕೆಲ ಯುವಕರು ಪುಂಡಾಟ ಮೆರೆಯುತ್ತಿದ್ದಾರೆ. ರೀಲ್ಸ್, ಸೆಲ್ಫಿಗಾಗಿ ನದಿ ಕಿನಾರೆ, ಜಲಪಾತಗಳಿಗೆ ಭೇಟಿ ನೀಡಿ ಯಮನಿಗೆ ಆಹ್ವಾನವಿಡುತ್ತಿದ್ದಾರೆ. ನಿನ್ನೆ(ಜು.24) ಉಡುಪಿಯ ಕೊಲ್ಲೂರು ಸಮೀಪದ ಅರಿಶಿನ ಗುಂಡಿ ಜಲಪಾತದಲ್ಲಿ ರೀಲ್ಸ್ ವಿಡಿಯೋ ಮಾಡಲು ಹೋಗಿ ಯುವಕ ನೀರು ಪಾಲಾಗಿದ್ದ. ಯುವಕನ ಶವ ಇನ್ನೂ ಪತ್ತೆಯಾಗಿಲ್ಲ. ಇಷ್ಟೆಲ್ಲ ಆದರೂ ಯುವಕರು ಬುದ್ದಿ ಕಲಿಯುತ್ತಿಲ್ಲ. ಜಲಪಾತ ಸೇರಿದಂತೆ ಅಪಾಯ ಸ್ಥಳಗಳಲ್ಲಿ ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಶ್ರಮಬಿಂದುಸಾಗರ ಬ್ಯಾರೇಜ್ ಮೇಲೆ ನಿಂತು ಯುವಕರು ಸೆಲ್ಫಿ, ರೀಲ್ಸ್​ಗಾಗಿ ಮುಗಿಬಿದ್ದಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ಹೋಗಿ ಸೆಲ್ಫಿ ಹಾಗೂ ಇನ್ನಿತರೆ ಚಟುವಟಿಕೆ ಮಾಡಬೇಡಿ. ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡುತ್ತಿದ್ದೀರಿ. ನೀರಿನ ಒಳ ಹರಿವು ಹೆಚ್ಚಾಗಿರೋದರಿಂದ ಅಲ್ಲಿ ಹೋಗಿ ಸೆಲ್ಫಿ ಆಗಲಿ ಇನ್ನಿತರೆ ಚಟುವಟಿಕೆ ಮಾಡಬೇಡಿ ಎಂದು ಜಮಖಂಡಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಅವರು ಯುವಕರಿಗೆ ಸೂಚನೆ ನೀಡಿದ್ದಾರೆ. ಇನ್ನು ನದಿ ಪಾತ್ರದ ಜನರು ಜಾಗರೂಕರಾಗಿರಲು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Karnataka Rains: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ 4 ದಿನಗಳ ಕಾಲ ಭಾರಿ ಮಳೆಯ ಎಚ್ಚರಿಕೆ, ರೆಡ್ ಅಲರ್ಟ್​ ಘೋಷಣೆ

ತುಂಬಿ ಹರಿಯುತ್ತಿರುವ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಬಳಿ ಇರುವ ಕೂಡುಗೆ ಫಾಲ್ಸ್​ಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.  ಡೇಂಜರಸ್ ಜಲಪಾತದಲ್ಲಿ ಪ್ರವಾಸಿಗರು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಆರ್ಭಟಿಸುತ್ತಿರುವ ಜಲಪಾತ ನೋಡಲು ಬರುತ್ತಿರುವ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ನಿಂತು ಫೋಸ್ ಕೊಡುತ್ತ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.  ಸ್ವಲ್ಪ ಯಾಮಾರಿದ್ರು ಜೀವಕ್ಕೆ ಅಪಾಯ ಭೀತಿ ಇದ್ದರೂ ಲೆಕ್ಕಿಸದೆ ಮೋಜು-ಮಸ್ತಿಯಲ್ಲಿ ಮುಳುಗಿದ್ದಾರೆ. ಅಪಾಯ ತಿಳಿದಿದ್ದರೂ ಚಿಕ್ಕಮಗಳೂರು ಪೊಲೀಸ್ ಇಲಾಖೆ ಯಾವುದೇ ಕಡಿವಾಣ ಹಾಕಿಲ್ಲ. ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 10:45 am, Tue, 25 July 23

ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ