ಬೆಂಗಳೂರು: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ದಾಖಲೆ ಕಂಡು ಬಂದಿದೆ. ಷೇರುಪೇಟೆ ಸೂಚ್ಯಂಕ 50 ಸಾವಿರದ ಗಡಿ ದಾಟಿದೆ. ಕೊವಿಡ್ ಹೊಡೆತದ ನಡುವೆಯೂ ಷೇರುಪೇಟೆ ಹೊಸ ಮೈಲುಗಲ್ಲು ದಾಟಿದೆ.
ಮಹಾಮಾರಿ ಕೊರೊನಾ ನಡುವೆಯೂ ಷೇರುಪೇಟೆ ಸೂಚ್ಯಂಕ 50 ಸಾವಿರದ ಗಡಿ ದಾಟುವ ಮೂಲಕ ದಾಖಲೆ ಬರೆದಿದೆ. ಷೇರುಪೇಟೆ ಸೂಚ್ಯಂಕ 50,096ಕ್ಕೆ ಏರಿಕೆಯಾಗಿದ್ದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ನರೇಂದ್ರ ಮೋದಿ 2019ರಲ್ಲಿ ಅಧಿಕಾರಕ್ಕೇರಿದಾಗ 38,000 ಸೂಚ್ಯಂಕ ಇತ್ತು. ಈಗ ಕೊವಿಡ್ ಸಂಕಟದ ಮಧ್ಯೆಯೂ ಷೇರುಪೇಟೆ ಚಿಗುರಿದೆ.
ಜೋ ಬೈಡೆನ್ ಅತ್ತ ಅಮೆರಿಕಾದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇಂದು ಭಾರತೀಯ ಷೇರು ಪೇಟೆಯಲ್ಲಿ ನವ ಚೈತನ್ಯ ಪುಟಿದೆದ್ದಿದೆ. ಜೋ ಬೈಡೆನ್ ಅಧ್ಯಕ್ಷರಾಗುವ ಮೂಲಕ ಅಮೆರಿಕದಲ್ಲಿ ಅಸ್ಥಿರತೆ ದೂರವಾಗಿದ್ದು, ಹೊಸ ಯುಗಕ್ಕೆ ನಾಂದಿ ಹಾಡಿದಂತಿದೆ. ಇದೂ ಭಾರತದ ಷೇರುಪೇಟೆ ಮೇಲೆ ಪರಿಣಾಮ ಬೀರಿದೆ.
ಇದೇ ವೇಳೆ ನಿಫ್ಟಿ NIFTY ಸೂಚ್ಯಂಕ ಸಹ ಏರಿದ್ದು, 14,700ಕ್ಕೆ ಜಿಗಿದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಪೋಸಿಸ್ ಕಂಪನಿಯ ಷೇರುಗಳು ಇದರ ಹೆಚ್ಚಿನ ಲಾಭ ಪಡೆದುಕೊಂಡಿವೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ
Published On - 9:33 am, Thu, 21 January 21