ದೆಹಲಿ: ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute Of India) ತನ್ನ ಕೊವಿಡ್ -19 ಲಸಿಕೆ(Covid-19 Vaccine) ಕೊವಿಶೀಲ್ಡ್‌ನ (Covishield( ಸಂಪೂರ್ಣ ಅನುಮೋದನೆಗಾಗಿ ದೇಶದ ಔಷಧ ನಿಯಂತ್ರಕ ಮತ್ತು ಆರೋಗ್ಯ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕರು ಶುಕ್ರವಾರ ತಿಳಿಸಿದ್ದಾರೆ. ಕೊವಿಶೀಲ್ಡ್ ಎಂಬ ಬ್ರಾಂಡ್‌ನಡಿಯಲ್ಲಿ ಅಸ್ಟ್ರಾಜೆನೆಕಾದ ಕೊವಿಡ್-19 ಲಸಿಕೆಯನ್ನು ಉತ್ಪಾದಿಸುವ ಸೆರಮ್ ಇನ್‌ಸ್ಟಿಟ್ಯೂಟ್, ಭಾರತದಲ್ಲಿ 1.25 ಬಿಲಿಯನ್ ಡೋಸ್‌ಗಳ ಲಸಿಕೆ ಅನ್ನು ಪೂರೈಸಿದೆ. ಸಂಪೂರ್ಣ ಮಾರುಕಟ್ಟೆ ಅಧಿಕಾರವನ್ನು ಪರಿಗಣಿಸಲು ಭಾರತ ಸರ್ಕಾರವು ಈಗ ಸಾಕಷ್ಟು ಡೇಟಾವನ್ನು ಹೊಂದಿದೆ ಎಂದು ಸೆರಮ್ ಇನ್‌ಸ್ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲಾ(Adar Poonawalla) ಟ್ವೀಟ್ ಮಾಡಿದ್ದಾರೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಕರೂ ಆಗಿರುವ ಸೀರಮ್ ಇನ್‌ಸ್ಟಿಟ್ಯೂಟ್‌ಗೆ ವರ್ಷದ ಆರಂಭದಲ್ಲಿ ಭಾರತದಲ್ಲಿ ಕೊವಿಶೀಲ್ಡ್‌ನ ತುರ್ತು ಬಳಕೆಗೆ ಅನುಮೋದನೆ ನೀಡಲಾಯಿತು. ದೇಶದ ಲಸಿಕೆ ಅಭಿಯಾನದಲ್ಲಿ ಇದುವರೆಗೆ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ನಿಂದ ಪ್ರಾಬಲ್ಯ ಸಾಧಿಸಿದೆ.
Supplies of the COVISHIELD vaccine in India, have exceeded 1.25 billion doses. The government of India now has enough data for full market authorisation, and therefore @SerumInstIndia has applied to the @CDSCO_INDIA_INF (DCGI) and @MoHFW_INDIA for this permission.
— Adar Poonawalla (@adarpoonawalla) December 31, 2021
ಸೆರಮ್ ಇನ್‌ಸ್ಟಿಟ್ಯೂಟ್ ತನ್ನ ಮಾಸಿಕ ಸಾಮರ್ಥ್ಯವನ್ನು 240 ಮಿಲಿಯನ್ ಡೋಸ್‌ಗಳಿಗೆ ನಾಲ್ಕು ಪಟ್ಟು ಹೆಚ್ಚಿಸಿದೆ ಮತ್ತು ಜನವರಿಯಿಂದ “ದೊಡ್ಡ ಪ್ರಮಾಣದಲ್ಲಿ” ರಫ್ತು ಮಾಡಲು ಸಿದ್ಧವಾಗಿದೆ ಎಂದು ಪೂನಾವಾಲಾ ಅಕ್ಟೋಬರ್‌ನಲ್ಲಿ ಹೇಳಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.
ಆದಾಗ್ಯೂ, ಕೇಂದ್ರ ಸರ್ಕಾರದಿಂದ ಕೊವಿಶೀಲ್ಡ್‌ಗೆ ಸಾಕಷ್ಟು ಬೇಡಿಕೆಗಳಿಲ್ಲದ ಕಾರಣ, ಸೆರಮ್ ಇನ್‌ಸ್ಟಿಟ್ಯೂಟ್ ಲಸಿಕೆಗಳ ಮಾಸಿಕ ಉತ್ಪಾದನೆಯನ್ನು ಕನಿಷ್ಠ 50 ಪ್ರತಿಶತದಷ್ಟು ಕಡಿತಗೊಳಿಸಲು ನೋಡುತ್ತಿದೆ ಎಂದು ಪೂನಾವಾಲಾ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.
“ನಾನು ಊಹಿಸಿರದಂತಹ ಸಂದಿಗ್ಧತೆಯಲ್ಲಿದ್ದೇನೆ. ನಾವು ತಿಂಗಳಿಗೆ 250 ಮಿಲಿಯನ್ ಡೋಸ್‌ಗಳನ್ನು ಉತ್ಪಾದಿಸುತ್ತಿದ್ದೇವೆ ಆದರೆ ಒಳ್ಳೆಯ ಸುದ್ದಿ ಏನೆಂದರೆ ಭಾರತವು ತನ್ನ ಜನಸಂಖ್ಯೆಯ ಹೆಚ್ಚಿನ ಭಾಗವನ್ನು ಆವರಿಸಿದೆ. ನಾವು ಒಂದು ವಾರದಲ್ಲಿ ಆರೋಗ್ಯ ಸಚಿವಾಲಯಕ್ಕೆ ನಮ್ಮ ಎಲ್ಲಾ ಆರ್ಡರ್ ಗಳನ್ನು ಪೂರ್ಣಗೊಳಿಸಿದ್ದೇವೆ. ” ಎಂದು ಸಿಎನ್‌ಬಿಸಿ-ಟಿವಿ 18 ಗೆ ನೀಡಿದ ಸಂದರ್ಶನದಲ್ಲಿ ಪೂನಾವಾಲಾ ಹೇಳಿದರು.
ಅವರ ಭವಿಷ್ಯದ ಉತ್ಪಾದನಾ ಕಾರ್ಯತಂತ್ರದ ಕುರಿತು ಮಾತನಾಡಿದ ಅವರು “ಕೈಯಲ್ಲಿ ಬೇರೆ ಯಾವುದೇ ಆರ್ಡರ್‌ಗಳಿಲ್ಲದ ಕಾರಣ ನಾನು ಉತ್ಪಾದನೆಯನ್ನು ಕನಿಷ್ಠ 50 ಪ್ರತಿಶತದಷ್ಟು ಕಡಿಮೆ ಮಾಡಲಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: CM Basavaraj Bommai: ಒಮಿಕ್ರಾನ್ ಬಗ್ಗೆ ಮಾತನಾಡುವಾಗಲೇ ಕೆಮ್ಮಿದ ಸಿಎಂ ಬೊಮ್ಮಾಯಿ!