ಕೊವಿಶೀಲ್ಡ್​ ಲಸಿಕೆಗೆ ದರ ನಿಗದಿ.. ಕೇಂದ್ರ ಸರ್ಕಾರದ ಜೊತೆ ಒಪ್ಪಂದಕ್ಕೆ ಸೆರಮ್ ಸಿದ್ಧ.. ಬಳಕೆಯಾಗುತ್ತಾ ಪಿಎಂ ಕೇರ್ಸ್​ ನಿಧಿ?

| Updated By: ರಾಜೇಶ್ ದುಗ್ಗುಮನೆ

Updated on: Jan 02, 2021 | 2:45 PM

ಸೆರಮ್​ ಸಂಸ್ಥೆ 2 ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ₹225ಕ್ಕೆ ನೀಡಲು ಸಿದ್ಧವಿದೆ. ಇತ್ತ ಪ್ರತಿಸ್ಪರ್ಧಿ ಸಂಸ್ಥೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಗೆ ₹350 ದರ ನಿಗದಿ ಪಡಿಸುವ ಸಾಧ್ಯತೆ ಇದೆ. ಲೆಕ್ಕಾಚಾರದ ಪ್ರಕಾರ ಕೊವ್ಯಾಕ್ಸಿನ್​ಗಿಂತ ಕಡಿಮೆ ದರದಲ್ಲಿ ಕೊವಿಶೀಲ್ಡ್ ಸಿಗಲಿದೆ.

ಕೊವಿಶೀಲ್ಡ್​ ಲಸಿಕೆಗೆ ದರ ನಿಗದಿ.. ಕೇಂದ್ರ ಸರ್ಕಾರದ ಜೊತೆ ಒಪ್ಪಂದಕ್ಕೆ ಸೆರಮ್ ಸಿದ್ಧ.. ಬಳಕೆಯಾಗುತ್ತಾ ಪಿಎಂ ಕೇರ್ಸ್​ ನಿಧಿ?
ಕೊವಿಶೀಲ್ಡ್​ ಲಸಿಕೆ
Follow us on

ದೆಹಲಿ: ಭಾರತೀಯ ಔಷಧ ನಿಯಂತ್ರಣಾ ಮಂಡಳಿ ಒಪ್ಪಿಗೆ ನೀಡಿದರೆ 10 ಕೋಟಿ ಕೊರೊನಾ ಲಸಿಕೆ ವಿತರಿಸಲು ಸಿದ್ಧ ಎಂದು ಸೆರಮ್​ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ (SII) ಸಂಸ್ಥೆ ಹೇಳಿದೆ. ಕೊವಿಶೀಲ್ಡ್ ಲಸಿಕೆಗೆ DCGI ಅಧಿಕೃತ ಒಪ್ಪಿಗೆ ಮಾತ್ರ ಬಾಕಿ ಇದೆ. ಒಪ್ಪಿಗೆ ಸಿಕ್ಕರೆ ಈ ತಿಂಗಳಿನಲ್ಲಿಯೇ ಲಸಿಕೆ ಪೂರೈಸಲಿದ್ದೇವೆ ಎಂದು ಸೆರಮ್​ ಸಂಸ್ಥೆ ಮಾಹಿತಿ ನೀಡಿದೆ.

ಜುಲೈ-ಆಗಸ್ಟ್​ ವೇಳೆಗೆ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಕೇಂದ್ರ ಸರ್ಕಾರದ ಮುಂದಿದೆ. ಅದರಲ್ಲಿ ಮೊದಲ 10 ಕೋಟಿ ಡೋಸ್​ ಲಸಿಕೆಯ ವೆಚ್ಚವನ್ನು ಪಿಎಂ ಕೇರ್ಸ್ ನಿಧಿಯಿಂದ ಭರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಕೇಂದ್ರ ಸರ್ಕಾರ ಇನ್ನೂ ಸೆರಮ್ ಸಂಸ್ಥೆಯ ಜೊತೆ ಲಸಿಕೆ ಖರೀದಿಸುವ ಒಪ್ಪಂದ ಮಾಡಿಕೊಂಡಿಲ್ಲ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ SII ತಾನು ಒಪ್ಪಂದಕ್ಕೆ ಸಿದ್ಧ ಎಂದು ಹೇಳಿದೆ.

ಇದನ್ನೂ ಓದಿ: ಮೊದಲ 30 ಕೋಟಿ ಮಂದಿಗೆ ಲಸಿಕೆ: ಪ್ರತಿ ಭಾರತೀಯ 100 ರೂ ಖರ್ಚು ಮಾಡಬೇಕು.. ಲಸಿಕೆಗೆ ಬಳಕೆಯಾಗುತ್ತಾ PM Cares Fund? ಲೆಕ್ಕಾಚಾರ ಏನು?

ಇನ್ನೊಂದೆಡೆ ಕೊರೊನಾ ಲಸಿಕೆಗೆ ತಗುಲುವ ವೆಚ್ಚದ ಕುರಿತು ಕೆಲ ಮಾಹಿತಿ ಲಭ್ಯವಾಗಿದೆ. ಸೆರಮ್​ ಸಂಸ್ಥೆ 2 ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ₹225ಕ್ಕೆ ನೀಡಲು ಸಿದ್ಧವಿದೆ. ಇತ್ತ ಪ್ರತಿಸ್ಪರ್ಧಿ ಸಂಸ್ಥೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಗೆ ₹350 ದರ ನಿಗದಿ ಪಡಿಸುವ ಸಾಧ್ಯತೆ ಇದೆ. ಲೆಕ್ಕಾಚಾರದ ಪ್ರಕಾರ ಕೊವ್ಯಾಕ್ಸಿನ್​ಗಿಂತ ಕಡಿಮೆ ದರದಲ್ಲಿ ಕೊವಿಶೀಲ್ಡ್ ಸಿಗಲಿದೆ.

ಇಂದು ನಡೆಯುತ್ತಿರೋದು ತಾಲೀಮು ಪ್ರಕ್ರಿಯೆ.. ಕೊರೊನಾ ಲಸಿಕೆ ವಿತರಣೆ ಅಲ್ಲ.. ಅಲ್ಲ.. ಅಲ್ಲ