ಮಾನವೀಯತೆ ಇಲ್ಲದ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ: ಅಖಿಲೇಶ್ ಯಾದವ್ ಟೀಕೆ
ದೆಹಲಿ ಚಲೋ ಚಳುವಳಿಯಲ್ಲಿ ಭಾಗಿಯಾದ ಮತ್ತೋರ್ವ ರೈತ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅವರ ಸಾವನ್ನು ಎದುರಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿವೆ.
ಲಖನೌ: 2021ರ ಮೊದಲ ದಿನವೇ 57 ವರ್ಷದ ರೈತರ ಮರಣದ ಸುದ್ದಿ ಕೇಳಿದೆ.. ದೆಹಲಿಯಲ್ಲಿ ಅಪರಿಮಿತ ಚಳಿ, ಮಂಜಿದೆ. ಗಡಿಯ ರಸ್ತೆಗಳಲ್ಲೇ ಪಂಜಾಬ್ನ ರೈತರು ತಿಂಗಳಿಂದ ವಾಸ್ತವ್ಯ ಹೂಡಿದ್ದಾರೆ. ಆದರೆ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಅವರ ಮೇಲೆ ದಯೆಯೇ ಹುಟ್ಟಿಲ್ಲ. ಇಷ್ಟು ನಿರ್ದಯಿ ಹೃದಯದ ಸರ್ಕಾರವನ್ನು ಈವರೆಗೆ ಕಂಡಿಲ್ಲ, ಕೇಳಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಮಾನವೀಯತೆಯಿದ್ದಿದ್ದರೆ ಪಂಜಾಬ್ ರೈತರನ್ನು ದೆಹಲಿಯ ಕೊರೆಯುವ ಚಳಿಯಲ್ಲಿ ಕಷ್ಟ ಅನುಭವಿಸಲು ಬಿಡುತ್ತಿರಲಿಲ್ಲ.ಕೇಂದ್ರ ಸರ್ಕಾರ ಮಾನವೀಯಯತೆ ಮರೆತಿದೆ ಎಂದು ಅವರು ಟೀಕಿಸಿದ್ದಾರೆ.
नव वर्ष के पहले दिन ही किसान आंदोलन में ग़ाज़ीपुर बार्डर पर एक किसान की शहादत की ख़बर विचलित करनेवाली है। घने कोहरे व ठंड में किसान लगातार अपने जीवन का बलिदान कर रहे हैं लेकिन सत्ताधारी हृदयहीन बने बैठे हैं।
भाजपा जैसा सत्ता का इतना दंभ व इतनी निष्ठुरता अब तक कभी नहीं देखी गयी।
— Akhilesh Yadav (@yadavakhilesh) January 2, 2021
ಚಳುವಳಿಯಲ್ಲಿ ಭಾಗವಹಿಸಿ ಮೃತಪಟ್ಟ ಎಲ್ಲ ರೈತರಿಗೂ ‘ಹುತಾತ್ಮ’ ಪಟ್ಟ ಉತ್ತರ ಪ್ರದೇಶದ ಬಘ್ಪತ್ ಜಿಲ್ಲೆಯ ಭಗ್ವಾನ್ಪುರ ನಂಗಲ್ ಗ್ರಾಮದ ನಿವಾಸಿ ಮೋಹನ್ ಸಿಂಗ್ ಚಳುವಳಿಯಲ್ಲಿ ನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಭಾರತೀಯ ಕಿಸಾನ್ ಯೂನಿಯನ್ನ ಉತ್ತರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ರಾಜ್ಬಿರ್ ಸಿಂಗ್ ಚಳುವಳಿಯಲ್ಲಿ ಭಾಗವಹಿಸಿ ಮೃತಪಟ್ಟ ಎಲ್ಲ ರೈತರಿಗೂ ‘ಹುತಾತ್ಮ’ ಪಟ್ಟ ನೀಡುವುದಾಗಿ ಘೋಷಿಸಿದ್ದಾರೆ. ಜನವರಿ 1ರಂದು ದೆಹಲಿ ಚಲೋ ಚಳುವಳಿಯಲ್ಲಿ ಈವರೆಗೆ ಮೃತಪಟ್ಟ ಎಲ್ಲ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
Delhi Chalo: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೂಲಕ ರೈತರ ಪರೇಡ್!