ಮಧ್ಯಪ್ರದೇಶ: ಸಾಧಿಸುವ ಛಲ ಇದ್ರೆ ಸಾಧನೆ ಮಾಡುವುದಕ್ಕೆ ವಯಸ್ಸು ಅಡ್ಡಿಯಾಗಲ್ಲ ಎಂಬುದಕ್ಕೆ ವಿಮಲ್ ಚಂದ್ರ ಜೈನ್ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಗ್ವಾಲಿಯರ್‌ನ 70 ವರ್ಷದ ವಿಮಲ್ ಚಂದ್ರ ಜೈನ್ ತಮ್ಮ ವಯಸ್ಸಿಗೂ ಮೀರಿದಂತೆ ಸಾಧನೆ ಮಾಡಿ ಮಾದರಿಯಾಗಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ವಿಮಲ್ ಚಂದ್ರ ಜೈನ್ಗೆ ಈಗ 70 ವರ್ಷ ವಯಸ್ಸು. ಈ ವಯಸಲ್ಲಿ ಸಾಮಾನ್ಯವಾಗಿ ವೃದ್ಧರಿಗೆ ಕಣ್ಣು ಸರಿಯಾಗಿ ಕಾಣಿಸಲ್ಲ ಆದ್ರೆ ವಿಮಲ್ ಸುತ್ತಿಗೆ ಮತ್ತು ಉಳಿ(Chisel) ಬಳಸಿ ವಿದ್ಯುತ್ ಬಲ್ಬ್‌ಗಳಲ್ಲಿ ‘ನಮೋಕರ್ ಮಂತ್ರ'(Namokar Mantra) ಕೆತ್ತಿದ್ದಾರೆ. ಈ ವಯಸ್ಸಿನಲ್ಲೂ ಇವರ ಈ ಸಾಧನೆ ಕಂಡ ಜನ ಕೊಂಡಾಡಿದ್ದಾರೆ.
Madhya Pradesh: 70-year-old Vimal Chandra Jain from Gwalior carves 'Namokar Mantra' on electric bulbs using hammer & chisel. "It takes me about 2-3 hours for this work. My family used to carve names on utensils at our shop, and that's how I also learnt this art," he said (15.09) pic.twitter.com/ltER7b53lZ
— ANI (@ANI) September 16, 2021
ಇನ್ನು ಈ ಬಗ್ಗೆ ಮಾತನಾಡಿದ ವಿಮಲ್ ಚಂದ್ರ ಜೈನ್, “ಈ ಕೆಲಸಕ್ಕಾಗಿ ನನಗೆ ಸುಮಾರು 2-3 ಗಂಟೆಗಳು ಬೇಕಾಗುತ್ತದೆ. ನಮ್ಮ ಅಂಗಡಿಯಲ್ಲಿ ನಮ್ಮ ಕುಟುಂಬವು ಪಾತ್ರೆಗಳ ಮೇಲೆ ಹೆಸರುಗಳನ್ನು ಕೆತ್ತುತ್ತಿತ್ತು, ಮತ್ತು ನಾನು ಈ ಕಲೆಯನ್ನು ಸಹ ಕಲಿತೆ” ಇದರಿಂದ ನನಗೆ ಸ್ಪೂರ್ತಿ ಸಿಕ್ಕಿ ಬೇರೆ ಏನಾದ್ರು ಮಾಡಬೇಕು ಎಂದೆನಿಸಿ ಬಲ್ಪ್ಗಳ ಮೇಲೆ ಕೆತ್ತನೆ ಶುರು ಮಾಡಿದ್ದೇನೆ. ಇದರಿಂದ ವ್ಯಾಪಾರ ಹೆಚ್ಚಾಗುವ ಜೊತೆ ನನ್ನ ಹೆಸರು ಕೂಡ ಬೆಳೆಯುತ್ತಿದೆ ಎಂದು ತಿಳಿಸಿದ್ದಾರೆ.
ನನ್ನ ಈ ಕೆಲಸಕ್ಕಾಗಿ ನಾನು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದೇನೆ. ‘ನಮೋಕರ್ ಮಂತ್ರ’ವನ್ನು ಕೆತ್ತಿಸುವುದರ ಜೊತೆಗೆ, ನಾನು ದೇವರ ಮೊಲಾಕ್ಷರಗಳನ್ನು ಅಥವಾ ದೇವರ ಹೆಸರುಗಳನ್ನು ಕೂಡ ಬರೆಯುತ್ತೇನೆ ಎಂದು ಅವರು ಹೇಳಿದರು.
"I have received several awards for my work. Besides engraving 'Namokar Mantra', I can also inscribe Gods' initials or names," he added. pic.twitter.com/1oU17eYNA3
— ANI (@ANI) September 16, 2021
ಇದನ್ನೂ ಓದಿ: ಸದನದಲ್ಲೂ ಚರ್ಚೆ ಆಯ್ತು ಸಂಚಾರಿ ವಿಜಯ್ ಸಾಧನೆ; ಹಾಡಿ ಹೊಗಳಿದ ಸಿದ್ದರಾಮಯ್ಯ