ಸಾಲ ಮರುಪಾವತಿ ಮಾಡದೆ ಪಲಾಯನಗೈದಿರುವ ಆರ್ಥಿಕ ಅಪರಾಧಿ ವಿಜಯ ಮಲ್ಯ ವಿರುದ್ಧ ಭಾರತದಲ್ಲಿ ಹಲವಾರು ಪ್ರಕರಣಗಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 11, 2022 | 1:00 PM

ಸಾಲ ಮಂಜೂರು ಮಾಡಿದ ಬ್ಯಾಂಕ್‌ಗೆ ವಂಚಿಸುವ ಮಲ್ಯ ಅವರ ಉದ್ದೇಶವನ್ನು ಸ್ಪಷ್ಟಪಡಿಸುವ ಮೌಖಿಕ ಮತ್ತು ಲಿಖಿತ ಪುರಾವೆಗಳು ಸಹ ಸಿಕ್ಕಿವೆ ಎಂದು ಸಿಬಿಐ ಹೇಳಿಕೊಂಡಿದೆ.

ಸಾಲ ಮರುಪಾವತಿ ಮಾಡದೆ ಪಲಾಯನಗೈದಿರುವ ಆರ್ಥಿಕ ಅಪರಾಧಿ ವಿಜಯ ಮಲ್ಯ ವಿರುದ್ಧ ಭಾರತದಲ್ಲಿ ಹಲವಾರು ಪ್ರಕರಣಗಳು!
ವಿಜಯ್ ಮಲ್ಯ
Follow us on

ಯುನೈಟೆಡ್ ಕಿಂಗ್ಡಮ್  ಹೈಕೋರ್ಟ್ ಭಾರತದಿಂದ ಪರಾರಿಯಾಗಿ ಬ್ರಿಟನ್​ನಲ್ಲಿ ನೆಲೆಸಿರುವ ಮದ್ಯದ ದೊರೆ ವಿಜಯ್ ಮಲ್ಯ (Vijay Mallya) ಅವರ ಭಾರತಕ್ಕೆ ಹಸ್ತಾಂತರಿಸುವ (extradition) ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿದ ಲಿಖಿತ ಅರ್ಜಿಯನ್ನು (written plea) ಕಳೆದ ವಾರ ತಿರಸ್ಕರಿಸಿದೆ. ಮಲ್ಯ ಅವರ ದಿವಾಳಿಯೆದ್ದಿರುವ ಉದ್ಯಮ ಕಿಂಗ್‌ಫಿಷರ್ ಏರ್‌ಲೈನ್ಸ್ ಲಿಮಿಟೆಡ್ ನಲ್ಲಿ ನಡೆದಿವೆಯೆಂದು ಆರೋಪಿಸಲಾಗಿರುವ ಅವ್ಯವಹಾರಗಳನ್ನು ಜಾರಿ ನಿರ್ದೇಶನಾಲಯ (ಇಡಿ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇತೃತ್ವದ ಭಾರತೀಯ ಬ್ಯಾಂಕ್‌ಗಳ ಒಕ್ಕೂಟದಿಂದ ಪಡೆದ ರೂ.10,000 ಕೋಟಿ ರೂ. ಗಳಿಗಿಂತ ಹೆಚ್ಚಿನ ಮೊತ್ತದ ಸಾಲ ಮರುಪಾವತಿಸದೆ ಎಸಗಿರುವ ವಂಚನೆಯನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI), ಗಂಭೀರ ಸ್ವರೂಪ ವಂಚನೆ ತನಿಖಾ ಕಚೇರಿ (SFIO), ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ತನಿಖೆ ನಡೆಸುತ್ತಿವೆ.

ವಂಚನೆ, ಕ್ರಿಮಿನಲ್ ಪಿತೂರಿ, ಮನಿ ಲಾಂಡರಿಂಗ್ ಮತ್ತು ಸಾಲದ ಹಣವನ್ನು ಬೇರೆಡೆಗೆ ವರ್ಗಾಯಿಸಿದ ಆರೋಪಗಳನ್ನು ಮಲ್ಯ ಎದುರಿಸುತ್ತಿದ್ದಾರೆ.

ಕಿಂಗ್‌ಫಿಶರ್ ಏರ್‌ಲೈನ್ಸ್ ಸೇರಿದಂತೆ ಅವರ ಕೆಲವು ಕಂಪನಿಗಳು, ಕಂಪನಿಗಳ ಕಾಯಿದೆ 2013, ಮತ್ತು ಬಂಡವಾಳ ಮಾರುಕಟ್ಟೆ ನಿಯಂತ್ರಕದಿಂದ ನಿಗದಿಪಡಿಸಿದ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪವನ್ನು ಎದುರಿಸುತ್ತಿವೆ.

ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಮತ್ತು ಅವುಗಳನ್ನು ವಿಚಾರಣೆ ನಡೆಸುತ್ತಿರುವ ತನಿಖಾ ಏಜನ್ಸಿಗಳ ವಿವರ ಕೆಳಗಿನಂತಿದೆ.

ಜಾರಿ ನಿರ್ದೇಶನಾಲಯ (ಈಡಿ)

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿ ಎಮ್ ಎಲ್ ಎ) ಸೆಕ್ಷನ್ 3 ಮತ್ತು 4 ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಮಲ್ಯ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದೆ.

ಈಗ ಕಾರ್ಯಾಚರಣೆ ಸ್ಥಗಿತಗೊಂಡು ಅಸ್ತಿತ್ವದಲ್ಲಿರದ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಯ ಮೂಲಕ ಮಲ್ಯ ತಾನು ಪಡೆದ ಸಾಲದ ಮೊತ್ತದಲ್ಲಿ ಕನಿಷ್ಟ ರೂ. 3,247 ಕೋಟಿಗಳನ್ನು ಬೇರೆಡೆ ವರ್ಗಾಯಿಸಿರುವರೆಂದು ಈಡಿ ಆರೋಪಿಸಿದೆ.

ಕಿಂಗ್‌ಫಿಷರ್ ಏರ್‌ಲೈನ್ಸ್ ಮತ್ತು ಮಲ್ಯ ವಿರುದ್ಧ ಈಡಿ ಮರೆಮಾಚುವಿಕೆ, ಸ್ವಾಧೀನ, ಸ್ವಾಧೀನ ಮತ್ತು ಅಪರಾಧ ಮೂಲಕ ಪಡೆದ ಆದಾಯದ ಬಳಕೆ, ಆರೋಪಗಳನ್ನು ಮಾಡಿದೆ.

ಕೇಂದ್ರ ತನಿಖಾ ದಳ (ಸಿಬಿಐ)

ಸಿಬಿಐ ವಿಜಯ್ ಮಲ್ಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 420 (ವಂಚನೆ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (1) (ಡಿ) ಮತ್ತು 13 (2) ಅಡಿಯಲ್ಲಿ ಆರೋಪ ಹೊರಿಸಿದೆ.

ಕಿಂಗ್‌ಫಿಶರ್ ಏರ್‌ಲೈನ್ಸ್, ಅದರ ಕಾರ್ಪೊರೇಟ್ ಗ್ಯಾರಂಟರ್, ಯುನೈಟೆಡ್ ಬ್ರೆವರೀಸ್ ಹೋಲ್ಡಿಂಗ್ಸ್ ಮತ್ತು ವೈಯಕ್ತಿಕ ಗ್ಯಾರಂಟರ್ ಮಲ್ಯ ಅವರು ಸಾಲದಾತರಿಗೆ ‘ಮೇಲುನೋಟಕ್ಕೆ ಗೋಚರಿಸುವ ತಪ್ಪು ಮತ್ತು ಸುಳ್ಳು ಮಾಹಿತಿಯನ್ನು ಸಾಲ ನೀಡಿದ ಸಂಸ್ಥೆಗೆ,’ ನೀಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಸಾಲ ಮಂಜೂರು ಮಾಡಿದ ಬ್ಯಾಂಕ್‌ಗೆ ವಂಚಿಸುವ ಮಲ್ಯ ಅವರ ಉದ್ದೇಶವನ್ನು ಸ್ಪಷ್ಟಪಡಿಸುವ ಮೌಖಿಕ ಮತ್ತು ಲಿಖಿತ ಪುರಾವೆಗಳು ಸಹ ಸಿಕ್ಕಿವೆ ಎಂದು ಸಿಬಿಐ ಹೇಳಿಕೊಂಡಿದೆ.

ಸೆಬಿ (SEBI)

ಬಂಡವಾಳ ಮಾರುಕಟ್ಟೆ ನಿಯಂತ್ರಕ, ಸೆಬಿ, ಮಲ್ಯ ಅವರನ್ನು ಜನವರಿ 2021 ರವರೆಗೆ ಸೆಕ್ಯುರಿಟೀಸ್ ಮಾರುಕಟ್ಟೆಗೆ ಪ್ರವೇಶಿಸುವುದನ್ನು ನಿಷೇಧಿಸಿದೆ, ಅನುಮನಾಸ್ಪದ ಮತ್ತು ಮರೆಮಾಚುವ ಹಣಕಾಸು ಹೇಳಿಕೆಗಳು, ಪ್ರೊಜೆಕ್ಷನ್‌ಗಳು ಅಥವಾ ಸುಳ್ಳು ಖಾತೆ ಪುಸ್ತಕಗಳ ಮೂಲಕ ಲಿಸ್ಟೆಡ್ ಕಂಪನಿಯಲ್ಲಿ ನಡೆಸಲಾದ ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ,’ ಎಂದು ಸೆಬಿ ಆರೋಪಿಸಿದೆ.

ಪಲಾಯನಗೈದಿರುವ ಆರ್ಥಿಕ ಅಪರಾಧಿ

ಜನೆವರಿಯಲ್ಲಿ ಮುಂಬೈನ ವಿಶೇಷ ನ್ಯಾಯಾಲಯವೊಂದು ವಿಜಯ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ (ಎಫ್ ಈ ಓ) ಕಾಯ್ದೆ 2018ರ ಅಡಿ ದೇಶದಿಂದ ಪಲಾಯನಗೈದಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಿದೆ.

ಇದನ್ನೂ ಓದಿ:   Vijay Mallya: ವಿಜಯ್​ ಮಲ್ಯ ಶಿಕ್ಷೆ ಪ್ರಮಾಣ ಇಂದು ಪ್ರಕಟ; ಏಕನಾಥ್ ಶಿಂದೆ, ವರವರ ರಾವ್ ಪ್ರಕರಣಗಳ ತೀರ್ಪು ಸಾಧ್ಯತೆ