ನಾನು ಮಚಲಿ ಗ್ಯಾಂಗ್ ಮೆಂಬರ್, ಹಿಂದೂ ಯುವತಿಯರನ್ನು ಗರ್ಭಿಣಿಯರನ್ನಾಗಿ ಮಾಡುವುದೇ ನನ್ನ ಪ್ಯಾಷನ್: ಶಾದ್ ಸಿದ್ದಿಖಿ

ಸಚಿನ್ ಎಂಬ ಹಿಂದೂ ಹೆಸರಿಟ್ಟುಕೊಂಡು ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಿಕೊಂಡು ಗರ್ಭಿಣಿಯರನ್ನಾಗಿ ಮಾಡುತ್ತಿದ್ದ ಶಾದ್ ಸಿದ್ದಿಖಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ. ನಾನು ಮಚಲಿ ಗ್ಯಾಂಗ್​​ನ ಸದಸ್ಯ, ಹಿಂದೂ ಹುಡುಗಿಯರನ್ನು ಗರ್ಭಿಣಿಯರನ್ನಾಗಿ ಮಾಡುವುದೇ ನನ್ನ ಪ್ಯಾಷನ್ ಎಂದು ಹೇಳಿದ್ದಾನೆ.ಶಾದ್ ಸಿದ್ದಿಖಿ ಎಂಬ ಮುಸ್ಲಿಂ ಯುವಕನ ಮೇಲೆ'ಸಚಿನ್' ಎಂಬ ಹಿಂದೂ ಹೆಸರು ಇಟ್ಟುಕೊಂಡು 26 ವರ್ಷದ ಹಿಂದೂ ಮಹಿಳೆಯೊಂದಿಗೆ ಸಂಬಂಧ ಬೆಳೆಸಿ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸಲಾಗಿದೆ.

ನಾನು ಮಚಲಿ ಗ್ಯಾಂಗ್ ಮೆಂಬರ್, ಹಿಂದೂ ಯುವತಿಯರನ್ನು ಗರ್ಭಿಣಿಯರನ್ನಾಗಿ ಮಾಡುವುದೇ ನನ್ನ ಪ್ಯಾಷನ್: ಶಾದ್ ಸಿದ್ದಿಖಿ
ಶಾದ್
Image Credit source: Google

Updated on: Oct 05, 2025 | 11:02 AM

ಇಂದೋರ್, ಅಕ್ಟೋಬರ್ 05: ಸಚಿನ್ ಎಂಬ ಹಿಂದೂ ಹೆಸರಿಟ್ಟುಕೊಂಡು ಹಿಂದೂ(Hindu) ಯುವತಿಯರನ್ನು ಬಲೆಗೆ ಬೀಳಿಸಿಕೊಂಡು ಗರ್ಭಿಣಿಯರನ್ನಾಗಿ ಮಾಡುತ್ತಿದ್ದ ಶಾದ್ ಸಿದ್ದಿಖಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ. ನಾನು ಮಚಲಿ ಗ್ಯಾಂಗ್​​ನ ಸದಸ್ಯ, ಹಿಂದೂ ಹುಡುಗಿಯರನ್ನು ಗರ್ಭಿಣಿಯರನ್ನಾಗಿ ಮಾಡುವುದೇ ನನ್ನ ಪ್ಯಾಷನ್ ಎಂದು ಹೇಳಿದ್ದಾನೆ.

ಶಾದ್ ಸಿದ್ದಿಖಿ ಎಂಬ ಮುಸ್ಲಿಂ ಯುವಕನ ಮೇಲೆ’ಸಚಿನ್’ ಎಂಬ ಹಿಂದೂ ಹೆಸರು ಇಟ್ಟುಕೊಂಡು 26 ವರ್ಷದ ಹಿಂದೂ ಮಹಿಳೆಯೊಂದಿಗೆ ಸಂಬಂಧ ಬೆಳೆಸಿ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸಲಾಗಿದೆ.

ಯುವತಿಗೆ ಆತ ಮುಸ್ಲಿಂ ಎಂದು ತಿಳಿದು ಪ್ರತಿಭಟಿಸಿದಾಗ ಆತ ತಾನು ಮಚಲಿ ಗ್ಯಾಂಗ್‌ನ ಸದಸ್ಯ, ಹಿಂದೂ ಹುಡುಗಿಯರನ್ನು ಗರ್ಭಿಣಿಯನ್ನಾಗಿ ಮಾಡುವುದೇ ನನ್ನ ಗುರಿ ಎಂದು ಹೇಳಿದ್ದ ಜತೆಗೆ ಆಕೆಗೆ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಮತ್ತಷ್ಟು ಓದಿ: ಕೇರಳ: ಇದು ಅಫ್ಘಾನಿಸ್ತಾನವಾ ಅಥವಾ ಭಾರತವಾ, ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪರದೆಯ ಹಿಂದೆ ಹುಡುಗರು ಮುಂದೆ

ಈ ಸಂತ್ರಸ್ತ ಯುವತಿ ಎರಡು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಭೋಪಾಲ್‌ಗೆ ಬಂದಿದ್ದಳು. ಆಕೆಗೆ ಕೆಲಸ ಹುಡುಕುವ ನೆಪದಲ್ಲಿ ಶಾದ್ ಸಿದ್ದಿಖಿ ತನ್ನನ್ನು ಸಚಿನ್ ಎಂದು ಪರಿಚಯಿಸಿಕೊಂಡು ತನಗೆ ಹತ್ತಿರವಾಗಿದ್ದ. ನಂತರ ಆಕೆ ಇಂದೋರ್‌ಗೆ ಬಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಈ ಅವಧಿಯಲ್ಲಿ ಸಿದ್ದಿಖಿ ಆಕೆಯ ಜತೆ ಸಂಪರ್ಕ ಬೆಳೆಸಿಕೊಂಡಿದ್ದ.

ಜನವರಿ 3ರಂದು ಆತ ಯುವತಿ ಇದ್ದ ಮನೆಗೆ ಹೋಗಿದ್ದ, ಆಕೆಗೆ ಮೌತ್ ಫ್ರೆಷ್ನರ್ ಕೊಟ್ಟಿದ್ದ, ಅದನ್ನು ಬಳಸಿದ ಬಳಿಕ ಆಕೆಗೆ ತಲೆ ತಿರುಗಿದ ಅನುಭವವಾಗಿತ್ತು. ನಂತರ ಆಕೆಯ ಮೇಲೆ ಸಿದ್ದಿಖಿ ಅತ್ಯಾಚಾರವೆಸಗಿ ವಿಡಿಯೋ ರೆಕಾರ್ಡ್​ ಮಾಡಿದ್ದ. ಮಹಿಳೆ ಇದನ್ನು ವಿರೋಧಿಸಿದಾಗ ಶೀಘ್ರದಲ್ಲೇ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ಕೊಟ್ಟಿದ್ದ.

ಕೆಲವು ದಿನಗಳ ಬಳಿಕ ಆತ ಮುಸ್ಲಿಂ ಎನ್ನುವುದು ಆಕೆಯ ಗಮನಕ್ಕೆ ಬಂದಿತ್ತು. ಆಕೆ ಸಿದ್ದೀಕಿಯನ್ನು ಪ್ರಶ್ನಿಸಿದಾಗ ಅವನು ತನ್ನ ನಿಜವಾದ ಹೆಸರನ್ನು ಹೇಳಿದ್ದಾನೆ. ನಾವು ಒಟ್ಟಿಗೆ ವಾಸಿಸಬೇಕಾದರೆ, ನೀನು ಮತಾಂತರಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾನೆ. ಆಕೆಯನ್ನು ಸಿದ್ದಿಖಿ ಪದೇ ಪದೇ ಬೆದರಿಸುತ್ತಿದ್ದ.ಬುರ್ಖಾ ಹಾಕುವಂತೆಯೂ ಒತ್ತಡ ಹೇರುತ್ತಿದ್ದ.

ನಿರಂತರ ಕಿರುಕುಳದಿಂದ ಬೇಸತ್ತು ಯುವತಿ ಕರ್ಣಿ ಸೇನಾ ಕಚೇರಿಗೆ ತಲುಪಿ, ರಾಜ್ಯ ಅಧ್ಯಕ್ಷ ಶೈಲೇಂದ್ರ ಸಿಂಗ್ ಅವರಿಗೆ ಇಡೀ ಘಟನೆಯನ್ನು ವಿವರಿಸಿದರು ಮತ್ತು ನಂತರ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:02 am, Sun, 5 October 25