ಕೇಂದ್ರ ಸರ್ಕಾರದ ವೈಜ್ಞಾನಿಕ ಸಲಹೆಗಾರರ ಸಮಿತಿಗೆ ವೈರಾಣು ತಜ್ಞ ಶಾಹಿದ್ ಜಮೀಲ್ ರಾಜೀನಾಮೆ

|

Updated on: May 17, 2021 | 3:59 PM

Shahid Jameel: ಇಂಡಿಯನ್ ಸಾರ್ಸ್‌-ಕೋವಿಡ್‌-2 ಜಿನೊಮಿಕ್ಸ್ ಕನ್ಸೊರ್ಟಿಯಂ (INSACOG) ಎಂದು ಕರೆಯಲ್ಪಡುವ ವೇದಿಕೆಯ ವೈಜ್ಞಾನಿಕ ಸಲಹಾ ಗುಂಪಿನ ಅಧ್ಯಕ್ಷರಾದ ಶಾಹಿದ್ ಜಮೀಲ್ ಅವರು ರಾಜೀನಾಮೆ ನೀಡಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.

ಕೇಂದ್ರ ಸರ್ಕಾರದ ವೈಜ್ಞಾನಿಕ ಸಲಹೆಗಾರರ ಸಮಿತಿಗೆ ವೈರಾಣು ತಜ್ಞ ಶಾಹಿದ್ ಜಮೀಲ್ ರಾಜೀನಾಮೆ
ಡಾ ಶಾಹಿದ್ ಜಮೀಲ್ (ಕೃಪೆ: commons.wikimedia.org)
Follow us on

ದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹೊಸ ತಳಿಗಳ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ರಚಿಸಿದ್ದ ವೈಜ್ಞಾನಿಕ ಸಲಹೆಗಾರರ ಸಮಿತಿಗೆ ಖ್ಯಾತ ವೈರಾಣು ತಜ್ಞ ಶಾಹಿದ್ ಜಮೀಲ್ ರಾಜೀನಾಮೆ ನೀಡಿದ್ದಾರೆ. ಇಂಡಿಯನ್ ಸಾರ್ಸ್‌-ಕೋವಿಡ್‌-2 ಜಿನೊಮಿಕ್ಸ್ ಕನ್ಸೊರ್ಟಿಯಂ (INSACOG) ಎಂದು ಕರೆಯಲ್ಪಡುವ ವೇದಿಕೆಯ ವೈಜ್ಞಾನಿಕ ಸಲಹಾ ಗುಂಪಿನ ಅಧ್ಯಕ್ಷರಾದ ಶಾಹಿದ್ ಜಮೀಲ್ ಅವರು ರಾಜೀನಾಮೆ ನೀಡಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.

ರಾಜೀನಾಮೆಗೆ ಕಾರಣವನ್ನು ನೀಡಲು ನನಗೆ ಯಾವುದೇ ನಿರ್ಬಂಧಗಳಿಲ್ಲಎಂದು ಅವರು ರಾಯಿಟರ್ಸ್ ಸುದ್ದಿಸಂಸ್ಥೆಗೆ ನೀಡಿದ ಪಠ್ಯ ಸಂದೇಶದಲ್ಲಿ ತಿಳಿಸಿದ್ದಾರೆ. ಜಮೀಲ್ ಅವರು ಶುಕ್ರವಾರ ಪ್ರಸ್ತುತ ಸ್ಥಾನ ತ್ಯಜಿಸಿದ್ದಾರೆ. INSACOG ನ ಮೇಲ್ವಿಚಾರಣೆಯ ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್ ಅವರು ಪ್ರತಿಕ್ರಿಯೆಯ ಕೋರಿಕೆಗೆ ತಕ್ಷಣ ಸ್ಪಂದಿಸಲಿಲ್ಲ.

ಆರೋಗ್ಯ ಸಚಿವ ಹರ್ಷವರ್ಧನ್ ಕೂಡ ಪ್ರತಿಕ್ರಿಯೆಯನ್ನು ಕೋರಿ ಪಠ್ಯ ಸಂದೇಶಕ್ಕೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಇನ್ನೊಬ್ಬ INSACOG ಸದಸ್ಯ ಜಮೀಲ್ ಮತ್ತು ಸರ್ಕಾರದ ನಡುವೆ ಯಾವುದೇ ನೇರ ಭಿನ್ನಾಭಿಪ್ರಾಯಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು.

ಹೆಸರು ಹೇಳಲಿಚ್ಛಿಸದ ವೇದಿಕೆಯ ಭಾಗವಾಗಿರುವ ಸರ್ಕಾರಿ ಉನ್ನತ ವಿಜ್ಞಾನಿಯೊಬ್ಬರು ಜಮೀಲ್ ಅವರ ರಾಜೀನಾಮೆ INSACOG ನ ವೈರಸ್ ರೂಪಾಂತರಗಳ ಮೇಲ್ವಿಚಾರಣೆಗೆ ಅಡ್ಡಿಯಾಗುತ್ತದೆ ಎಂದೆನಿಸುವುದಿಲ್ಲ ಎಂದು ಹೇಳಿದ್ದಾರೆ .

ಭಾರತೀಯ SARS-CoV-2 ಜೆನೆಟಿಕ್ಸ್ ಕನ್ಸೋರ್ಟಿಯಂನ INSACOG ಸರ್ಕಾರಿ ಅಧಿಕಾರಿಗಳು ಮಾರ್ಚ್ ಆರಂಭದಲ್ಲಿ ಕೊರೊನಾವೈರಸ್ ನ ಹೊಸ ಮತ್ತು ಹೆಚ್ಚು ಸಾಂಕ್ರಾಮಿಕ ರೂಪಾಂತರಿಗಳು ದೇಶದಲ್ಲಿ ಪ್ರಭುತ್ವ ಸಾಧಿಸಲಿವೆ ಎಂದು ಎಚ್ಚರಿಸಿರುವುದಾಗಿ ಈ ತಿಂಗಳ ಆರಂಭದಲ್ಲಿದು ರಾಯಿಟರ್ಸ್ ವರದಿ ಮಾಡಿದೆ.

ಕೊವಿಡ್ 19 ಪ್ರಕರಣಗಳಲ್ಲಿ ಭಾರತದಲ್ಲಿ ಪ್ರಸ್ತುತ ವಿಶ್ವದ ಅತ್ಯಂತ ಭೀಕರ ಉಲ್ಬಣಕ್ಕೆ ಕಾರಣವಾದ ರೂಪಾಂತರಿ ಆಗಿದೆ ಬಿ .1.617. ಸಂಶೋಧನೆಗಳಿಗೆ ಸರ್ಕಾರ ಏಕೆ ಹೆಚ್ಚು ಬಲವಾಗಿ ಸ್ಪಂದಿಸಲಿಲ್ಲ ಎಂದು ಕೇಳಿದಾಗ,  ಸರ್ಕಾರ ದೊಡ್ಡ ಕೂಟಗಳನ್ನು ನಿರ್ಬಂಧಿಸಿಲ್ಲ ಎಂದಿದ್ದ ಜಮೀಲ್, ನೀತಿಯನ್ನು ನಿಗದಿಪಡಿಸುವಾಗ ಅಧಿಕಾರಿಗಳು ಸಾಕ್ಷ್ಯಗಳ ಬಗ್ಗೆ ಸಾಕಷ್ಟು ಗಮನ ಹರಿಸುತ್ತಿಲ್ಲ ಎಂದು  ಕಳವಳ ವ್ಯಕ್ತಪಡಿಸಿದ್ದರು ಎಂದು ರಾಯಿಟರ್ಸ್ ವರದಿ ಮಾಡಿತ್ತು.

ಇದನ್ನೂ ಓದಿ : Miss Universe 2021 Winner: ಕೊವಿಡ್​ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ

Published On - 3:55 pm, Mon, 17 May 21