Ram Mandir Inauguration: ರಾಮ ಮಂದಿರದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ, ಸ್ವಲ್ಪ ದಿನದ ಬಳಿಕ ಹೋಗ್ತೀನಿ ಎಂದ ಶರದ್ ಪವಾರ್

|

Updated on: Jan 17, 2024 | 10:08 AM

ಅಯೋಧ್ಯೆ(Ayodhya)ಯಲ್ಲಿ ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್(Sharad Pawar) ಹೇಳಿದ್ದಾರೆ. ಆದರೆ ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ಜನರ ಸಂಖ್ಯೆಯೂ ಕೊಂಚ ಕಡಿಮೆಯಾಗುತ್ತದೆ ಆಗ ದೇವರ ದರ್ಶನ ಪಡೆಯುವುದು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.

Ram Mandir Inauguration: ರಾಮ ಮಂದಿರದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ, ಸ್ವಲ್ಪ ದಿನದ ಬಳಿಕ ಹೋಗ್ತೀನಿ ಎಂದ ಶರದ್ ಪವಾರ್
ಶರದ್​ ಪವಾರ್
Image Credit source: The New Indian Express
Follow us on

ಅಯೋಧ್ಯೆ(Ayodhya)ಯಲ್ಲಿ ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್(Sharad Pawar) ಹೇಳಿದ್ದಾರೆ. ಆದರೆ ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ಜನರ ಸಂಖ್ಯೆಯೂ ಕೊಂಚ ಕಡಿಮೆಯಾಗುತ್ತದೆ ಆಗ ದೇವರ ದರ್ಶನ ಪಡೆಯುವುದು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.

ರಾಮನು ಪ್ರಪಂಚದಾದ್ಯಂತ ಕೋಟ್ಯಂತರ ಜನರ ನಂಬಿಕೆ ಮತ್ತು ಭಕ್ತಿಯ ಸಂಕೇತವಾಗಿದೆ. ಅಯೋಧ್ಯೆಯಲ್ಲಿ ನಡೆಯುವ ಈ ಕಾರ್ಯಕ್ರಮದ ಬಗ್ಗೆ ರಾಮ ಭಕ್ತರಲ್ಲಿ ಅಪಾರ ಉತ್ಸಾಹವಿದೆ. ರಾಮ ಮಂದಿರದಲ್ಲಿ ರಾಮಲಲ್ಲಾ ಮಹಾಮಸ್ತಕಾಭಿಷೇಕದ ದಿನ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ವಾಕ್ಚಾತುರ್ಯವೂ ಹೆಚ್ಚಾಗುತ್ತಿದೆ.

ಬಿಜೆಪಿ ಮೇಲೆ ವಿರೋಧ ಪಕ್ಷಗಳು ಒಂದರ ಹಿಂದೆ ಒಂದರಂತೆ ‘ಬಾಣ’ ಬಿಡುತ್ತಿದ್ದರೆ, ಆಡಳಿತಾರೂಢ ಬಿಜೆಪಿಯಿಂದ ಪ್ರತಿದಾಳಿ ನಡೆಯುತ್ತಿದೆ. ಇನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ರಾಜೀವ್ ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದಾಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Ram Mandir Inauguration: ರಾಮಮಂದಿರ ನಿರ್ಮಾಣವೇ ಕನಸು, ಒಂದು ರೂಪಾಯಿಯನ್ನೂ ಪಡೆಯದೆ ಹೋರಾಡಿದ ವಕೀಲರ ಕುಟುಂಬ

ಲೋಕಸಭೆ ಚುನಾವಣೆಗಾಗಿ ರಚಿಸಲಾದ ಇಂಡಿಯಾ ಮೈತ್ರಿಕೂಟದ ಹಲವು ಘಟಕಗಳು ಆಹ್ವಾನವನ್ನು ತಿರಸ್ಕರಿಸಿವೆ, ಆದರೆ ಶರದ್ ಪವಾರ್ ಇನ್ನೂ ಆಹ್ವಾನವನ್ನು ಸ್ವೀಕರಿಸಿಲ್ಲ. ಆದರೆ, ಶರದ್ ಪವಾರ್ ಅವರು ಜನವರಿ 22 ರ ನಂತರ ರಾಮಲಲ್ಲಾ ದರ್ಶನ ಪಡೆಯಲು ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ.

ಇಲ್ಲಿಯವರೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ ಮತ್ತು ಎಡಪಕ್ಷಗಳು ಆಹ್ವಾನವನ್ನು ತಿರಸ್ಕರಿಸಿವೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಖಾಸಗಿ ಕಾರ್ಯಕ್ರಮ ಎಂದು ಕಾಂಗ್ರೆಸ್ ಹೇಳಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:07 am, Wed, 17 January 24