ಶಶಿ ತರೂರ್ ಪಕ್ಷದ ಆಸ್ತಿ, ಅವರನ್ನು ಹೊರಗಿಡುವುದಿಲ್ಲ: ಕೇರಳ ಕಾಂಗ್ರೆಸ್ ಅಧ್ಯಕ್ಷ ಸುಧಾಕರನ್

| Updated By: ರಶ್ಮಿ ಕಲ್ಲಕಟ್ಟ

Updated on: Dec 12, 2022 | 1:13 PM

ಕೊಚ್ಚಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರನ್, ಶಶಿ ತರೂರ್ ಅವರು ಪಕ್ಷದ ಚೌಕಟ್ಟಿನೊಳಗೆ ಕೆಲಸ ಮಾಡಿದ್ದಾರೆ. ಅವರನ್ನು ಯಾರೂ ಹೊರಗಿಡಲು ಸಾಧ್ಯವಿಲ್ಲ. ತರೂರ್ ಅವರ ಸಾಮರ್ಥ್ಯವೇ ಪಕ್ಷದ ಆಸ್ತಿ. ತರೂರ್ ಮತ್ತು ಪಕ್ಷ ಒಗ್ಗಟ್ಟಾಗಿದೆ. ಅವರು ಯಾವಾಗಲೂ ಕಾಂಗ್ರೆಸ್ ಪಕ್ಷಕ್ಕೆ ಆಸ್ತಿಯಾಗಿದ್ದಾರೆ ಎಂದಿದ್ದಾರೆ.

ಶಶಿ ತರೂರ್ ಪಕ್ಷದ ಆಸ್ತಿ, ಅವರನ್ನು ಹೊರಗಿಡುವುದಿಲ್ಲ: ಕೇರಳ ಕಾಂಗ್ರೆಸ್ ಅಧ್ಯಕ್ಷ ಸುಧಾಕರನ್
ಶಶಿ ತರೂರ್
Follow us on

ಕೊಚ್ಚಿ(ಕೇರಳ): ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಯಾವತ್ತೂ ಕಾಂಗ್ರೆಸ್ ಪಕ್ಷದ ಆಸ್ತಿ, ಅವರನ್ನು ಯಾವತ್ತೂ ದೂರ ಸರಿಸಲಾಗುವುದಿಲ್ಲ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ(KPCC) ಅಧ್ಯಕ್ಷ ಕೆ. ಸುಧಾಕರನ್ (K Sudhakaran) ಹೇಳಿದ್ದಾರೆ. ಕೇರಳ ಕಾಂಗ್ರೆಸ್ ರಾಜ್ಯ ಘಟಕದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಸುಧಾಕರನ್ ಈ  ರೀತಿ ಹೇಳಿದ್ದಾರೆ. ಶಶಿ ತರೂರ್ ಧಾರ್ಮಿಕ, ಮತ್ತು ರಾಜಕೀಯ ನಾಯಕರೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ಕಾರಣ ಕಾಂಗ್ರೆಸ್ ಪಕ್ಷದೊಳಗೆ ತರೂರ್ ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂಬ ಗುಸುಗುಸು ಕೇಳಿ ಬಂದಿತ್ತು. ಕೋಟ್ಟಯಂ ಮತ್ತು ಪತ್ತನಂತಿಟ್ಟ ಜಿಲ್ಲೆಯ ಕಾಂಗ್ರೆಸ್ ನಾಯಕರು  ಇತ್ತೀಚೆಗೆ ಶಶಿ ತರೂರ್ ಅವರು ಭಾಗವಹಿಸುತ್ತಿದ್ದ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದರು. ಆದರೆ ಆದರೆ ಕೆಪಿಸಿಸಿ ಅಧ್ಯಕ್ಷರು ದೆಹಲಿಯಲ್ಲಿ ಅವರೊಂದಿಗೆ ಮಾತನಾಡಿದ್ದು, ತರೂರ್‌ಗೆ ಸಂಬಂಧಿಸಿದಂತೆ ಯಾವುದೇ ವಿವಾದವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊಚ್ಚಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಶಿ ತರೂರ್ ಅವರು ಪಕ್ಷದ ಚೌಕಟ್ಟಿನೊಳಗೆ ಕೆಲಸ ಮಾಡಿದ್ದಾರೆ. ಅವರನ್ನು ಯಾರೂ ಹೊರಗಿಡಲು ಸಾಧ್ಯವಿಲ್ಲ. ತರೂರ್ ಅವರ ಸಾಮರ್ಥ್ಯವೇ ಪಕ್ಷದ ಆಸ್ತಿ. ತರೂರ್ ಮತ್ತು ಪಕ್ಷ ಒಗ್ಗಟ್ಟಾಗಿದೆ. ಅವರು ಯಾವಾಗಲೂ ಕಾಂಗ್ರೆಸ್ ಪಕ್ಷಕ್ಕೆ ಆಸ್ತಿಯಾಗಿದ್ದಾರೆ ಎಂದಿದ್ದಾರೆ.  ಐದು ತಿಂಗಳ ಬಳಿಕ ಕೆಪಿಸಿಸಿಯ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಭಾನುವಾರ ಕೊಚ್ಚಿಯಲ್ಲಿ ನಡೆದ ಬಳಿಕ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಆ ಸಭೆಯಲ್ಲಿ ತರೂರ್ ಕುರಿತ ವಿವಾದಗಳ ಕುರಿತು ಚರ್ಚೆ ನಡೆಸಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ರಾಜಕೀಯದ ವಿರುದ್ಧ ಮಾತನಾಡಲು ಪಕ್ಷದ ವೇದಿಕೆಯನ್ನು ನಿರಾಕರಿಸಿದ ನಂತರ ಶಶಿ ತರೂರ್ ಅವರ ಉತ್ತರ ಕೇರಳ ರಾಜಕೀಯ ಪ್ರಭಾವ ಕಾರ್ಯಕ್ರಮವು ಇತ್ತೀಚೆಗೆ ಪಕ್ಷದಲ್ಲಿ ಕೋಲಾಹಲವನ್ನು ಸೃಷ್ಟಿಸಿತ್ತು. ಈ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಯಾವುದೇ ಮಾಹಿತಿ ಇಲ್ಲ ಎಂದು ಹಿರಿಯ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಅದರ ನಂತರ, ಕೋಟ್ಟಯಂ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷ ನಟ್ಟಕಂ ಸುರೇಶ್ ಅವರು ತರೂರ್ ವಿರುದ್ಧ ಬಹಿರಂಗವಾಗಿ ಕಿಡಿ ಕಾರಿದ್ದಾರೆ.ನಿಲುವಳಿ ಸೂಚನೆಯಂತೆ ತರೂರ್ ಜಿಲ್ಲಾ ನಾಯಕತ್ವಕ್ಕೆ ಈ ಕಾರ್ಯಕ್ರಮದ ಬಗ್ಗೆ ತಿಳಿಸಿರಲಿಲ್ಲ. ಮತ್ತೊಂದೆಡೆ, ಕೆಪಿಸಿಸಿ ಅಧ್ಯಕ್ಷರು ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆಯ ಬಗ್ಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಅದರ ಯುವ ಸಂಘಟನೆಯಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (DYFI) ವಿರುದ್ಧ ವಾಗ್ದಾಳಿ ನಡೆಸಿದರು. ಶಾಲಾ ಮಕ್ಕಳೂ ಮಾದಕ ವ್ಯಸನಿಯಾಗಿದ್ದಾರೆ. ಡ್ರಗ್ಸ್ ದಂಧೆಕೋರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.ರಾಜ್ಯದಲ್ಲಿ ಡ್ರಗ್ಸ್ ಹಿಂದೆ ಡಿವೈಎಫ್‌ಐ ಕೈವಾಡವಿದೆ. ಸಿಪಿಐಎಂ ಕೈದಿಗಳಿರುವ ಜೈಲುಗಳಲ್ಲಿ ಮಾದಕ ದ್ರವ್ಯ ಬಳಕೆಯಾಗುತ್ತದೆ . ಸಿಪಿಐಎಂ ಕ್ರಿಮಿನಲ್‌ಗಳು ಜೈಲು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.ಕಾಂಗ್ರೆಸ್ ಮಾದಕ ವಸ್ತುಗಳ ವಿರುದ್ಧ ರಾಜ್ಯಮಟ್ಟದ ಮಾದಕ ದ್ರವ್ಯ ವಿರೋಧಿ ಅಭಿಯಾನ ನಡೆಸಲಿದೆ. ಇಂಥಾ ಅನೈತಿಕ ಅಭ್ಯಾಸವನ್ನು ನಿಲ್ಲಿಸಬೇಕು ಎಂದು ಸುಧಾಕರನ್ ಹೇಳಿದ್ದಾರೆ.

ರಾಜ್ಯಾದ್ಯಂತ ಕೃಷಿ ಕ್ಷೇತ್ರ ರಕ್ಷಣೆಗಾಗಿ ಕಾಂಗ್ರೆಸ್ ಆಂದೋಲನ ಆರಂಭಿಸಲಿದೆ ಎಂದು ಅವರು ಹೇಳಿದ್ದಾರೆ. ಕೃಷಿ ಕ್ಷೇತ್ರ ಪ್ರಮುಖವಾಗಿ ಚರ್ಚೆಯಾಗಿದೆ, ರಾಜ್ಯ ಸರ್ಕಾರ ಅದಕ್ಷತೆ ತೋರಿಸುತ್ತಿದೆ . ಸಂಗ್ರಹಣೆ ನಡೆಸಲೂ ಸಾಧ್ಯವಾಗುತ್ತಿಲ್ಲ, ಕೃಷಿ ಕ್ಷೇತ್ರವನ್ನು ರಕ್ಷಿಸಲು ಕಾಂಗ್ರೆಸ್ ಆಂದೋಲನವನ್ನು ಪ್ರಾರಂಭಿಸುತ್ತದೆ, ನಾವು ಬೆಳೆಗಳ ಬೆಲೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ
ಕೇರಳ ಪ್ರವಾಸಕ್ಕೆ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ; ನನ್ನ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದ ಶಶಿ ತರೂರ್
ಸೆನ್ಸೇಷನಲ್ ಕ್ರೈಮ್ ಕತೆಗಳು: ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸತ್ತು 8 ವರ್ಷಗಳಾದರೂ ಸಾವಿನ ಕಾರಣ ಮಾತ್ರ ಈಗಲೂ ನಿಗೂಢ!
ಶಶಿ ತರೂರ್ ನಮ್ಮ ಮುಂದೆ ಒಂದು , ಮಾಧ್ಯಮದವರ ಮುಂದೆ ಇನ್ನೊಂದು ಮುಖ ತೋರಿಸಿದ್ದಾರೆ: ಕಾಂಗ್ರೆಸ್

ಕೆಪಿಸಿಸಿ ಪುನರ್‌ಸಂಘಟನೆ 3 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸುಧಾಕರನ್ ಸ್ಪಷ್ಟಪಡಿಸಿದ್ದಾರೆ. “ಇದನ್ನು ಎಐಸಿಸಿ ಅನುಮೋದಿಸಿದೆ. ನಿಷ್ಕ್ರಿಯವಾದವುಗಳನ್ನು ಮಾತ್ರ ಬದಲಾಯಿಸಲಾಗುವುದು. ಯಾವುದೇ ಆಮೂಲಾಗ್ರ ಬದಲಾವಣೆ ಇರುವುದಿಲ್ಲ” ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ