AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಶಿ ತರೂರ್ ನಮ್ಮ ಮುಂದೆ ಒಂದು , ಮಾಧ್ಯಮದವರ ಮುಂದೆ ಇನ್ನೊಂದು ಮುಖ ತೋರಿಸಿದ್ದಾರೆ: ಕಾಂಗ್ರೆಸ್

ಬುಧವಾರ ಮತಗಳನ್ನು ಎಣಿಕೆ ನಡೆಯುತ್ತಿದ್ದಂತೆ, ತರೂರ್ ಅವರ ಚುನಾವಣಾ ಏಜೆಂಟ್ ಸಲ್ಮಾನ್ ಸೋಝ್ ಅವರು ಮಿಸ್ತ್ರಿ ಅವರಿಗೆ ಪತ್ರ ಬರೆದು ಉತ್ತರ ಪ್ರದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಗೊಂದಲಕಾರಿ ಸಂಗತಿಗಳನ್ನು...

ಶಶಿ ತರೂರ್ ನಮ್ಮ ಮುಂದೆ ಒಂದು , ಮಾಧ್ಯಮದವರ ಮುಂದೆ ಇನ್ನೊಂದು ಮುಖ ತೋರಿಸಿದ್ದಾರೆ: ಕಾಂಗ್ರೆಸ್
ಶಶಿ ತರೂರ್- ಖರ್ಗೆ
TV9 Web
| Edited By: |

Updated on: Oct 20, 2022 | 6:06 PM

Share

ದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಚುನಾವಣೆ  (Congress president election) ಮುಗಿದಿದ್ದು, ಆಂತರಿಕ ಚುನಾವಣೆಯಲ್ಲಿ “ಅತ್ಯಂತ ಗಂಭೀರ ಅಕ್ರಮಗಳು” ನಡೆದಿದೆ ಎಂದು ಶಶಿ ತರೂರ್ (Shashi Tharoor)  ಆರೋಪಿಸಿದ್ದರು. ಈ ಬಗ್ಗೆ ತರೂರ್ ತಂಡಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ಮಧುಸೂಧನ್ ಮಿಸ್ತ್ರಿ (Madhusudhan Mistry), ನಾವು ನೀಡಿ ಉತ್ತರದಿಂದ ತೃಪ್ತರಾಗಿದ್ದೀರಿ ಎಂದು ಒಂದು ಮುಖ ನನಗೆ ತೋರಿಸಿದ್ದು, ಮಾಧ್ಯಮಗಳ ಮುಂದೆ ಆರೋಪ ಹೊರಿಸಿ ಇನ್ನೊಂದು ಮುಖವನ್ನು ತೋರಿಸಿದ್ದೀರಿ ಎಂದು ಹೇಳಲು ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ.  ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಪ್ರಚಂಡ ಬಹುಮತದಿಂದ ಸೋಲಿಸಿ 24 ವರ್ಷಗಳ ನಂತರ ಮೊದಲ ಗಾಂಧಿಯೇತರ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಬುಧವಾರ ಮತಗಳನ್ನು ಎಣಿಕೆ ನಡೆಯುತ್ತಿದ್ದಂತೆ, ತರೂರ್ ಅವರ ಚುನಾವಣಾ ಏಜೆಂಟ್ ಸಲ್ಮಾನ್ ಸೋಝ್ ಅವರು ಮಿಸ್ತ್ರಿ ಅವರಿಗೆ ಪತ್ರ ಬರೆದು ಉತ್ತರ ಪ್ರದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಗೊಂದಲಕಾರಿ ಸಂಗತಿಗಳನ್ನು ಎತ್ತಿದ್ದು, ರಾಜ್ಯದಲ್ಲಿನ ಮತಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.ಇದಾದ ನಂತರ ಆಂತರಿಕ ಪತ್ರ ಸೋರಿಕೆಯಾಗಿದೆ ಎಂದು ತರೂರ್ ವಿಷಾದ ವ್ಯಕ್ತ ಪಡಿಸಿ ಮುಂದುವರಿಯೋಣ ಎಂದಿದ್ದಾರೆ. ಆದರೆ ಕಾಂಗ್ರೆಸ್ ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದೆ.

ನಿಮ್ಮ ಕೋರಿಕೆಗೆ ನಾವು ಮನ್ನಣೆ ನೀಡಿದ್ದೇವೆ. ಅದರ ಹೊರತಾಗಿಯೂ ನೀವು ಕೇಂದ್ರ ಚುನಾವಣಾ ಪ್ರಾಧಿಕಾರವು ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿ ಮಾಧ್ಯಮದವರ ಮೊರೆ ಹೋಗಿದ್ದೀರಿ ಎಂದು ಮಿಸ್ತ್ರಿ ತರೂರ್ ವಿರುದ್ಧ ಗುಡುಗಿದ್ದಾರೆ.

“ಇಡೀ ಪ್ರಕ್ರಿಯೆಯಲ್ಲಿ ನಿಮ್ಮ ಅಭ್ಯರ್ಥಿಗೆ ಅನ್ಯಾಯವಾಗಿದೆ ಎಂದು ಅನಿಸಿಕೆ ಮೂಡಿಸುವ ಮೂಲಕ ನೀವು ಚಿಕ್ಕ ವಿಷಯವನ್ನು ಬೆಟ್ಟದಷ್ಟು ಮಾಡಲು ಪ್ರಯತ್ನಿಸಿದ್ದೀರಿ ಎಂದು ಅವರು ಹೇಳಿದರು.

ಮತ ಎಣಿಕೆ ಪ್ರಾರಂಭವಾದ ಕೂಡಲೇ ತರೂರ್ ಅವರ ತಂಡವು ಉತ್ತರ ಪ್ರದೇಶದ ಚುನಾವಣಾ ಪ್ರಕ್ರಿಯೆಯಲ್ಲಿ “ಗೊಂದಲಕಾರಿ ಸಂಗತಿಗಳು” ಇವೆ ಎಂದು ಆರೋಪಿಸಿದ್ದು ಅಲ್ಲಿನ ಮತಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ನಾವು ಎಂದಿನಂತೆ ವ್ಯವಹಾರವನ್ನು ಸ್ವೀಕರಿಸಲು ಈ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಎಂದು ತರೂರ್ ತಂಡ ಹೇಳಿದೆ. ನಾವು ಮಧುಸೂದನ್ ಮಿಸ್ತ್ರಿ ಅವರ ಕಚೇರಿಯೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದೇವೆ, ವಿವಿಧ ವಿಷಯಗಳ ಬಗ್ಗೆ ಅವರಿಗೆ ತಿಳಿಸಿದ್ದೇವೆ, ಅವರಿಂದ ಸದ್ಯ ಪ್ರತಿಕ್ರಿಯೆ ಲಭಿಸಿಲ್ಲ” ಎಂದು ತರೂರ್ ಅವರ ಚುನಾವಣಾ ಏಜೆಂಟ್ ಸಲ್ಮಾನ್ ಸೋಝ್ ಹೇಳಿದ್ದಾರೆ.

ಮಿಸ್ತ್ರಿ ಅವರಿಗೆ ಬರೆದ ಪತ್ರದಲ್ಲಿ ತರೂರ್ ತಂಡವು ಹೀಗೆ ಹೇಳಿದೆ: “ಉತ್ತರ ಪ್ರದೇಶದ ಚುನಾವಣೆಯ ನಡವಳಿಕೆಯಲ್ಲಿನ ಅತ್ಯಂತ ಗಂಭೀರ ಅಕ್ರಮಗಳನ್ನು ನಿಮ್ಮ ಗಮನಕ್ಕೆ ತರಲು ನಾವು ಬಯಸುತ್ತೇವೆ. ನೀವು ನೋಡುವಂತೆ ಉತ್ತರ ಪ್ರದೇಶದಲ್ಲಿನ ಚುನಾವಣಾ ಪ್ರಕ್ರಿಯೆ ವಿಶ್ವಾಸಾರ್ಹತೆ ಮತ್ತು ಸಮಗ್ರತೆಯನ್ನು ಹೊಂದಿಲ್ಲ.

ಉತ್ತರ ಪ್ರದೇಶದಲ್ಲಿ ನಡೆದಿರುವುದು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಿಗರು ಹೇಗೆ ಚುನಾವಣಾ ಅವ್ಯವಹಾರ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಖರ್ಗೆ ಅವರಿಗೆ ತಿಳಿದಿದೆ ಎಂಬುದಕ್ಕೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ನಾವು ಒತ್ತಿಹೇಳಲು ಬಯಸುತ್ತೇವೆ. ಅವರಿಗೆ ಅರಿವಿದ್ದರೆ ಉತ್ತರ ಪ್ರದೇಶದಲ್ಲಿ ಏನು ನಡೆದಿದೆಯೋ ಅದಕ್ಕೆ ಅವರು ರು ಎಂದಿಗೂ ಅನುಮತಿಸುವುದಿಲ್ಲ ಎಂದು ನಮಗೆ ಖಚಿತವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ತುಂಬಾ ಮುಖ್ಯವಾದ ಚುನಾವಣೆಗೆ ಕಳಂಕ ತರಲು ಅವರು ಅಮತಿಸುವುದಿಲ್ಲ ಎಂದು ತರೂರ್ ತಂಡ ಹೇಳಿದೆ.

ಮತಪೆಟ್ಟಿಗೆಗಳಿಗೆ ಅನಧಿಕೃತ ಮುದ್ರೆಗಳು, ಮತಗಟ್ಟೆಗಳಲ್ಲಿ ಅನಧಿಕೃತ ಜನರ ಉಪಸ್ಥಿತಿ ಮತ್ತು ಮತದಾನದ ದುರ್ಬಳಕೆಯಂತಹ ಸಮಸ್ಯೆಗಳನ್ನು ತರೂರ್ ತಂಡ ಎತ್ತಿ ತೋರಿಸಿದೆ.

“ಉತ್ತರ ಪ್ರದೇಶದ ಕಲುಷಿತ ಪ್ರಕ್ರಿಯೆ ನಿಲ್ಲಲು ಅವಕಾಶ ನೀಡಿದರೆ ಈ ಚುನಾವಣೆಯನ್ನು ಹೇಗೆ ಮುಕ್ತ ಮತ್ತು ನ್ಯಾಯಯುತವೆಂದು ಪರಿಗಣಿಸಬಹುದು ಎಂಬುದನ್ನು ನಾವು ನೋಡುತ್ತಿಲ್ಲ. ಆದ್ದರಿಂದ ಉತ್ತರ ಪ್ರದೇಶದ ಎಲ್ಲಾ ಮತಗಳನ್ನು ಅಮಾನ್ಯವೆಂದು ಪರಿಗಣಿಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.