ಸಿಂಹದ ವಿರುದ್ಧ ಕುರಿ-ಮೇಕೆಗಳು ಹೋರಾಡಲು ಸಾಧ್ಯವಿಲ್ಲ, ಇಂಡಿಯಾ ಕೂಟಕ್ಕೆ ಟಕ್ಕರ್​​ ನೀಡಿದ ಏಕನಾಥ್ ಶಿಂಧೆ

|

Updated on: Sep 18, 2023 | 12:10 PM

Eknath Shinde: ಕುರಿ-ಮೇಕೆಗಳು ಸಿಂಹದ ವಿರುದ್ಧ ಹೋರಾಡಲು ಸಾಧ್ಯವೇ, ಖಂಡಿತ ಸಾಧ್ಯವಿಲ್ಲ ಎಂದು ಇಂಡಿಯಾ ಕೂಟದ ಸ್ಥಿತಿಯ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಟೀಕಿಸಿದ್ದಾರೆ. ಪ್ರಧಾನಿ ಮೋದಿ, ಸಿಂಹ ಅವರ ವಿರುದ್ಧ ಈ ಕುರಿ-ಮೇಕೆಗಳು ಅಂದರೆ ಇಂಡಿಯಾ ಕೂಟಗಳು ಹೋರಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಿಂಹದ ವಿರುದ್ಧ ಕುರಿ-ಮೇಕೆಗಳು ಹೋರಾಡಲು ಸಾಧ್ಯವಿಲ್ಲ, ಇಂಡಿಯಾ ಕೂಟಕ್ಕೆ ಟಕ್ಕರ್​​ ನೀಡಿದ ಏಕನಾಥ್ ಶಿಂಧೆ
ಸಾಂದರ್ಭಿಕ ಚಿತ್ರ
Follow us on

ಪುಣೆ, ಸೆ.18: ಕುರಿ-ಮೇಕೆಗಳು ಸಿಂಹದ ವಿರುದ್ಧ ಹೋರಾಡಲು ಸಾಧ್ಯವೇ, ಖಂಡಿತ ಸಾಧ್ಯವಿಲ್ಲ ಎಂದು ಇಂಡಿಯಾ ಕೂಟದ ಸ್ಥಿತಿಯ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಟೀಕಿಸಿದ್ದಾರೆ. ಪ್ರಧಾನಿ ಮೋದಿ, ಸಿಂಹ ಅವರ ವಿರುದ್ಧ ಈ ಕುರಿ-ಮೇಕೆಗಳು ಅಂದರೆ ಇಂಡಿಯಾ ಕೂಟಗಳು ಹೋರಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಇಂದು (ಸೆ.18) ಮಾತನಾಡಿದ ಅವರು ನಾನು ವಿರೋಧ ಬಣಗಳನ್ನು ರಣಹದ್ದು ಎಂದು ಕರೆಯುವುದಿಲ್ಲ. ಆದರೆ ಕಾಡಿನಲ್ಲಿರುವ ಸಿಂಹದೊಂದಿಗೆ ಹೋರಾಡಲು ಕುರಿ-ಮೇಕೆಗಳು ಒಟ್ಟಾಗಿ ಬರುವುದಿಲ್ಲ, ಸಿಂಹವು ಯಾವಾಗಲೂ ಸಿಂಹವಾಗಿರುತ್ತದೆ ಮತ್ತು ಅದೇ ಕಾಡಿನ ರಾಜನಾಗಿರುತ್ತಾನೆ ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ಇಂಡಿಯಾ ಒಕ್ಕೂಟವನ್ನು ರಚಿಸಿರುವ ಬಗ್ಗೆ ಶಿಂಧೆ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸುವ ಬಗ್ಗೆ ಮಾತ್ರ ಯೋಚಿಸಬೇಕು. ಆದರೆ ಇಲ್ಲಿ ಇವುಗಳೇ ಕಿತ್ತಾಡುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ಞೆ ತಪ್ಪಿದ ಮಹಿಳಾ ಕಾನ್​ಸ್ಟೆಬಲ್​ಗೆ ಸಹಾಯ ಮಾಡಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ; ವಿಡಿಯೋ ವೈರಲ್

ಮಹಾರಾಷ್ಟ್ರ ಈ ಬಾರಿ ಲೋಕಸಭೆಗೆ 48 ಸದಸ್ಯರನ್ನು ಕಳುಹಿಸುತ್ತದೆ, ಇನ್ನು 80 ಸಂಸದರನ್ನು ಆಯ್ಕೆ ಮಾಡುವ ಉತ್ತರ ಪ್ರದೇಶದ ನಂತರ ಹೆಚ್ಚು ಸಂಸದರನ್ನು ಆಯ್ಕೆ ಮಾಡುವ ಎರಡನೇ ರಾಜ್ಯವಾಗಲಿದೆ ಎಂದು ಹೇಳಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಶಿಂಧೆ, ಅಜಿತ್ ಪವಾರ್ ನಮ್ಮೊಂದಿಗೆ ಸೇರಲು ನಿರ್ಧರಿಸಿದ ನಂತರ, ನನ್ನ ಸರ್ಕಾರ (ಬಿಜೆಪಿ-ಶಿವಸೇನೆ-ಎನ್‌ಸಿಪಿಯ ಅಜಿತ್ ಪವಾರ್ ಬಣ) 215 ಪ್ಲಸ್ ಶಾಸಕರ ಬೆಂಬಲವನ್ನು ಹೊಂದಿದೆ. ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದ್ದಾರೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಜನರು ತಮಗೆ ಕೆಲಸ ಮಾಡುವವರು ಬೇಕೋ ಅಥವಾ ಮನೆಯಲ್ಲಿ ಕುಳಿತುಕೊಳ್ಳುವವರು ಬೇಕೋ ಎಂದು (ಉದ್ಧವ್ ಠಾಕ್ರೆ ಅವರನ್ನು ಹೆಸರಿಸದೆ) ಅವರೇ ನಿರ್ಧಾರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ