AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ‘ನೇರ ಹರಾಜು’ ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳಿ : ಐಟಿ ಸಚಿವರಿಗೆ ಪ್ರಿಯಾಂಕಾ ಚತುರ್ವೇದಿ ಪತ್ರ

Priyanka Chaturvedi: ಎರಡು ಪ್ರಕರಣಗಳನ್ನು ವಿವರಿಸಿದ ಚತುರ್ವೇದಿ "ಕೆಲವು ತಿಂಗಳ ಹಿಂದೆ, ಯೂಟ್ಯೂಬ್ ಚಾನೆಲ್ 'ಲಿಬರಲ್ ಡೂಜೆ' ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯರ ನೇರ" ಹರಾಜನ್ನು "ನಡೆಸಿತು. ಜನರು ತಮ್ಮ ದೈಹಿಕ ನೋಟವನ್ನು ಆಧರಿಸಿ ಮಹಿಳೆಯರನ್ನು ಬಿಡ್ಡಿಂಗ್ ಮತ್ತು ರೇಟಿಂಗ್ ಮಾಡುತ್ತಿದ್ದರು

ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು 'ನೇರ ಹರಾಜು' ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳಿ : ಐಟಿ ಸಚಿವರಿಗೆ ಪ್ರಿಯಾಂಕಾ ಚತುರ್ವೇದಿ ಪತ್ರ
ಪ್ರಿಯಾಂಕಾ ಚತುರ್ವೇದಿ
TV9 Web
| Edited By: |

Updated on: Jul 30, 2021 | 8:31 PM

Share

ಮುಂಬೈ: ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ “ನಿರ್ದಿಷ್ಟ ಸಮುದಾಯದ ಮಹಿಳೆಯರ ನೇರ ಹರಾಜನ್ನು ನಡೆಸುವ ಯೂಟ್ಯೂಬ್ ಚಾನೆಲ್ ಮತ್ತು ಒಪ್ಪಿಗೆ ಇಲ್ಲದೆಯೇ ಹಲವಾರು ಮಹಿಳೆಯರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಹೆಕ್ಕಿ ತೆಗೆದು ಪೋಸ್ಟ್ ಮಾಡಿದ ಆ್ಯಪ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಪತ್ರ ಬರೆದಿದ್ದಾರೆ.

ಯಾವುದೇ ಜವಾಬ್ದಾರಿಯುತ ಸರ್ಕಾರವು ನಮ್ಮ ಸಮಾಜದ ಮಹಿಳೆಯರ ಘನತೆಯನ್ನು ರಕ್ಷಿಸಲು ತುರ್ತು ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ವಿನಂತಿಸುತ್ತೇನೆ ಎಂದು ಚತುರ್ವೇದಿ ಅವರು ವೈಷ್ಣವ್‌ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಮಹಿಳೆಯರಿಗೆ ಸುರಕ್ಷಿತ ಸೈಬರ್‌ ಸ್ಪೇಸ್ ನ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, “ಮಹಿಳೆಯ ಘನತೆಗೆ ಕಿರುಕುಳ ಮತ್ತು ಆಕ್ರಮಣ ಮಾಡಲು ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳ ದುರುಪಯೋಗವು ನಿರಾಶಾದಾಯಕವಾಗಿದೆ. ಲಿಂಗ ತಾರತಮ್ಯದಿಂದ ಮಹಿಳೆಯರು ಹೆಣಗಾಡುತ್ತಿರುವ ದೇಶದಲ್ಲಿ ವಿಶೇಷವಾಗಿ ಸೈಬರ್‌ಸ್ಪೇಸ್‌ನಲ್ಲಿ ಈ ಘಟನೆಗಳು ಮತ್ತೊಮ್ಮೆ ಮಹಿಳೆಯರ ರಕ್ಷಣೆ ಮತ್ತು ಸುರಕ್ಷತೆಯನ್ನು ಸವಾಲನ್ನು ತೋರಿಸುತ್ತವೆ.

ಎರಡು ಪ್ರಕರಣಗಳನ್ನು ವಿವರಿಸಿದ ಚತುರ್ವೇದಿ “ಕೆಲವು ತಿಂಗಳ ಹಿಂದೆ, ಯೂಟ್ಯೂಬ್ ಚಾನೆಲ್ ‘ಲಿಬರಲ್ ಡೂಜೆ’  (Liberal Doge)ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯರ ನೇರ” ಹರಾಜನ್ನು “ನಡೆಸಿತು. ಜನರು ತಮ್ಮ ದೈಹಿಕ ನೋಟವನ್ನು ಆಧರಿಸಿ ಮಹಿಳೆಯರನ್ನು ಬಿಡ್ಡಿಂಗ್ ಮತ್ತು ರೇಟಿಂಗ್ ಮಾಡುತ್ತಿದ್ದರು ಮತ್ತು ಅವಮಾನಕರವಾದ ಕಾಮೆಂಟ್‌ಗಳನ್ನು ಬರೆದರು. ತೀರಾ ಇತ್ತೀಚೆಗೆ, ಹಲವಾರು ಮಹಿಳೆಯರ ಚಿತ್ರಗಳನ್ನು ಅವರ ಅರಿವಿಲ್ಲದೆ ಅಥವಾ ಒಪ್ಪಿಗೆಯಿಲ್ಲದೇ ‘ಸುಲ್ಲಿ ಡೀಲ್ಸ್’ (Sulli Deals) ಎಂಬ ಆಪ್​​ನಲ್ಲಿ ಅಪ್​​ಲೋಡ್ ಮಾಡಲಾಗಿದೆ. ಪತ್ರಕರ್ತರು ಸೇರಿದಂತೆ ವಿವಿಧ ವೃತ್ತಿಗಳ ಹಲವಾರು ಮಹಿಳೆಯರ ಚಿತ್ರಗಳನ್ನು ಅವರ ಸಾಮಾಜಿಕ ಮಾಧ್ಯಮಗಳಿಂದ ಪಡೆಯಲಾಗಿದೆ.

ಆಪ್​​ನಲ್ಲಿ ಫೋಟೊ ಪ್ರಕಟವಾಗಿರುವ ಮಹಿಳೆಯರು ಬೆದರಿಕೆಗಳು, ಮುಜುಗರ ಮತ್ತು ಕಿರುಕುಳಗಳನ್ನು ಎದುರಿಸುತ್ತಿದ್ದಾರೆ ಎಂದು ಚತುರ್ವೇದಿ ಗಮನಸೆಳೆದರು ಮತ್ತು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಕೀಳಾಗಿಸುವುದು ಮತ್ತು ಅವಮಾನಿಸುವುದು ಈ ಅಪ್ಲಿಕೇಶನ್‌ನ ಉದ್ದೇಶವಾಗಿದೆ ಎಂದು ಹೇಳಿದರು.

ದೆಹಲಿ ಮತ್ತು ನೋಯ್ಡಾ ಪೊಲೀಸರು ಪ್ರಕರಣಗಳನ್ನು ದಾಖಲಿಸಿದರೂ “ಇಲ್ಲಿಯವರೆಗೆ ಯಾವುದೇ ಬೆಳವಣಿಗೆ ಸಾಧಿಸಿಲ್ಲ” ಎಂದು ಅವರು ಆರೋಪಿಸಿದ್ದಾರೆ.

“ಅಂತಹ ಪ್ರಕರಣಗಳಿಗೆ ಕಠಿಣವಾದ ಪರಿಣಾಮಕಾರಿ ತಡೆಗಟ್ಟುವ ಕಾನೂನುಗಳು ಮತ್ತು ಶಿಕ್ಷೆಗಳ ಕೊರತೆಯು ಅಪರಾಧಿಗಳನ್ನು ಮಾತ್ರ ಪ್ರೇರೇಪಿಸುತ್ತದೆ” “ಈ ಪ್ರಕರಣದ ಗಂಭೀರತೆಯ ಹೊರತಾಗಿಯೂ ಯಾವುದೇ ಚಳುವಳಿಯನ್ನು ಇಲ್ಲಿಯವರೆಗೆ ಆಗಿಲ್ಲ ಎಂದು ನನಗೆ ನೋವಾಗಿದೆ ಎಂದಿದ್ದಾರೆ ಚತುರ್ವೇದಿ.

ದೆಹಲಿ ಮತ್ತು ನೋಯ್ಡಾದಲ್ಲಿ ಪೊಲೀಸರಿಗೆ ಸಲ್ಲಿಸಿದ ದೂರುಗಳ ಪ್ರಕಾರ, ಹಲವಾರು ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಅವರ ಒಪ್ಪಿಗೆಯಿಲ್ಲದೆ ಅಪ್‌ಲೋಡ್ ಮಾಡಲಾಗಿದೆ. ಇದನ್ನು ಹಲವಾರು ಓಪನ್ ಸೋರ್ಸ್ ಕೋಡ್‌ಗಳೊಂದಿಗೆ ಜನಪ್ರಿಯ ಹೋಸ್ಟಿಂಗ್ ವೇದಿಕೆಯಾದ ಗಿಟ್‌ಹಬ್‌ನಲ್ಲಿ ರಚಿಸಲಾಗಿದೆ. ಬಳಕೆದಾರರು ಹೋಮ್ ಸ್ಕ್ರೀನ್‌ನಲ್ಲಿ “ದಿನದ ಒಪ್ಪಂದ” (deal of the day) ಆಯ್ಕೆಯನ್ನು ಆರಿಸಿದಾಗ, ಅದು ಮಹಿಳೆಯ ಚಿತ್ರವನ್ನು ಪ್ರದರ್ಶಿಸುತ್ತದೆ.

ಈ ಹಿಂದೆ ಕಾಂಗ್ರೆಸ್ ಸಂಸದ ಎಂಡಿ ಜಾವೈದ್ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಲ್ಲಿ ‘ಸುಲ್ಲಿ ಡೀಲ್ಸ್’ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿರುವ ಮಹಿಳೆಯರ ಫೋಟೋಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ತಪ್ಪಿತಸ್ಥರೆಂದು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪಕ್ಷದ ವ್ಯಾಪ್ತಿಯಲ್ಲಿ 56 ಸಂಸದರು ತಮ್ಮ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: Uttara Kannada Flood: ಕಳಚೆಯ ಕೂಸುಗಳ ಪುನರ್ವಸತಿ: ಆಡಳಿತದ ಮುಂದಿದೆ ಕಳಚೆ ಕಲ್ಲಿನಷ್ಟೇ ಬೃಹತ್ ಸವಾಲು

ಇದನ್ನೂ ಓದಿ:  ನೀರಾವರಿ ಯೋಜನೆಗಳು, ಲಸಿಕೆ ಕೊರತೆ, ಕೊರೊನಾ ನಿಯಂತ್ರಣ: ದೆಹಲಿ ಭೇಟಿ ಬಗ್ಗೆ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ

(Shiv Sena MP Priyanka Chaturvedi writes to IT Minister Ashwini Vaishnaw seeking action against Sulli Deals Liberal Doge YouTube channel)

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ