Shoking News: ನಾಯಿಯನ್ನು “ನಾಯಿ” ಎಂದು ಕರೆದಿದ್ದಕ್ಕೆ ಬಿತ್ತು ರೈತನ ಹೆಣ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2023 | 3:51 PM

ರೈತನೊಬ್ಬ ತನ್ನ ನೆರೆಮನೆಯ ಸಾಕುನಾಯಿಯನ್ನು 'ನಾಯಿ' ಎಂದು ಕರೆದಕ್ಕೆ ಜಗಳ ನಡೆದು ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.

Shoking News: ನಾಯಿಯನ್ನು ನಾಯಿ ಎಂದು ಕರೆದಿದ್ದಕ್ಕೆ ಬಿತ್ತು ರೈತನ ಹೆಣ
ಸಾಂದರ್ಭಿಕ ಚಿತ್ರ
Follow us on

ತಮಿಳುನಾಡಿನ (Tamil Nadu) ದಿಂಡಿಗಲ್ ಜಿಲ್ಲೆಯ ತಾಡಿಕೊಂಬು ಪಟ್ಟಣದಲ್ಲಿ 65 ವರ್ಷದ ರೈತನೊಬ್ಬ ತನ್ನ ನೆರೆಮನೆಯ ಸಾಕುನಾಯಿಯನ್ನು ‘ನಾಯಿ(Dog) ಎಂದು ಕರೆದಕ್ಕೆ ಜಗಳ ನಡೆದು ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ. ರಾಯಪ್ಪ ಎಂಬ ರೈತ ತನ್ನ ನೆರೆಹೊರೆಯವರ ನಾಯಿಗಳು ತುಂಬಾ ಸಮಸ್ಯೆಯನ್ನು ಮಾಡುತ್ತಿತ್ತು. ನಾಯಿ ಮಾಲಿಕರಾದ ಡೇನಿಯಲ್ ಮತ್ತು ವಿನ್ಸೆಂಟ್ ಅವರ ಶ್ವಾನವು ದಾರಿಯಲ್ಲಿ ಹಾದುಹೋಗುವ ಜನರ ಮೇಲೆ ದಾಳಿ ನಡೆಸುತ್ತದೆ ಎಂದು ಅವರು ಹಲವಾರು ಬಾರಿ ಪೊಲೀಸರಿಗೆ ದೂರು ನೀಡಿದ್ದರು.

ಆದರೆ ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ, ಇದೀಗ ಡೇನಿಯಲ್ ಮತ್ತು ವಿನ್ಸೆಂಟ್ ಅವರ ಶ್ವಾನವನ್ನು ರಾಯಪ್ಪ ಹೆಸರಿಟ್ಟು ಕರೆಯಲು ನಿರಾಕರಿಸಿ, ನಾಯಿಗಳನ್ನು ಸಾಯಿಸಬೇಕು ಎಂದು ಹೇಳಿದ್ದಕ್ಕೆ ದೊಡ್ಡ ಜಗಳವೂ ಇವರ ಮಧ್ಯೆ ಶುರುವಾಗಿದೆ.

ಇದನ್ನು ಓದಿ:Shoking News: ಮಕ್ಕಳನ್ನು ವಾಶ್‌ರೂಮ್‌ನಲ್ಲಿ ಆಟವಾಡಲು ಬಿಡಬೇಡಿ, ಮನೆಯವರ ಅಜಾಗರೂಕತೆಯಿಂದ ಮಗು ಸಾವು

ನಂತರ ಇವರು ನಡುವಿನ ಜಗಳ ಕೈಮೀರಿತು, ವಾಗ್ವಾದದ ಸಂದರ್ಭದಲ್ಲಿ ರಾಯಪ್ಪ ನಾಯಿಗಳನ್ನು ಹೊಡೆಯಲು ಕೋಲು ಹುಡುಕಲು ಶುರು ಮಾಡಿದ್ದಾರೆ. ಈ ಸಮಯದಲ್ಲಿ ಕೋಪಗೊಂಡ ವಿನ್ಸೆಂಟ್ ಮತ್ತು ಡೇನಿಯಲ್ ರಾಯಪ್ಪನಿಗೆ ಹೊಡೆದಿದ್ದಾರೆ. ಇದರ ಪರಿಣಾಮ ರಾಯಪ್ಪ ಪ್ರಜ್ಞೆ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ತಾಡಿಕೊಂಬು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ. ಹೆಚ್ಚಿನ ತನಿಖೆಯನ್ನು ಪೊಲೀಸ್ ಅಧಿಕಾರಿಗಳು ನಡೆಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ