Shoking News: ಮಕ್ಕಳನ್ನು ವಾಶ್‌ರೂಮ್‌ನಲ್ಲಿ ಆಟವಾಡಲು ಬಿಡಬೇಡಿ, ಮನೆಯವರ ಅಜಾಗರೂಕತೆಯಿಂದ ಮಗು ಸಾವು
ವಾಶ್‌ರೂಮ್‌ನಲ್ಲಿ ಆಟವಾಡುತ್ತಿದ್ದ ಒಂದು ವರ್ಷದ ಮಗು ಆಕಸ್ಮಿಕವಾಗಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರ ವಿರುಗಂಬಾಕ್ಕಂನಲ್ಲಿ ನಡೆದಿದೆ.
ಚೆನ್ನೈ: ವಾಶ್‌ರೂಮ್‌ನಲ್ಲಿ ಆಟವಾಡುತ್ತಿದ್ದ ಒಂದು ವರ್ಷದ ಮಗು ಆಕಸ್ಮಿಕವಾಗಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರ ವಿರುಗಂಬಾಕ್ಕಂನಲ್ಲಿ ನಡೆದಿದೆ. ಅವರ ಮಗುವಿನ ತಾಯಿ ಅಡುಗೆಮನೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು ಮತ್ತು ಮನೆಯಲ್ಲಿದ್ದ ಇತರರು ಟಿವಿ ವೀಕ್ಷಿಸುತ್ತಿದ್ದರು. ಮಗುವನ್ನು ಎ ಇಳಮಾರನ್ ಎಂದು ಗುರುತಿಸಲಾಗಿದೆ. ಇಳಮಾರನ್ ಅವರ ತಾಯಿ ದೇವಕಿ ಗೃಹಿಣಿ ಮತ್ತು ಅವರ ತಂದೆ ಅರುಣ್‌ಕುಮಾರ್ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ವಿರುಗಂಬಾಕ್ಕಂನಲ್ಲಿ ವರ್ತಕರ ಸಂಘದ ಪದಾಧಿಕಾರಿಯಾಗಿದ್ದಾರೆ. ಈ ಬಗ್ಗೆ ಮನೆಯವರು ಆತಂಕಗೊಂಡು ಮನೆಯೆಲ್ಲ ಹುಡುಕಾಟ ನಡೆಸಿದ್ದಾರೆ. ಕೊನೆಗೆ ವಾಶ್‌ರೂಮ್‌ನಲ್ಲಿ ಬಕೆಟ್‌ನಲ್ಲಿ ಮಗು ಪತ್ತೆಯಾಗಿದೆ.
ಕೂಡಲೇ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ತಪಾಸಣೆ ನಡೆಸಿದ ವೈದ್ಯರು ಮಗು ಬರುವಷ್ಟರಲ್ಲಿ ಮೃತಪಟ್ಟಿದೆ ಎಂದು ಹೇಳಿದ್ದಾರೆ. ವಿರುಗಂಬಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. 2019 ರಲ್ಲಿ ನಡೆದ ಇಂತಹುದೇ ಘಟನೆಯಲ್ಲಿ 11 ತಿಂಗಳ ಮಗುವೊಂದು ಬಕೆಟ್ ನೀರಿಗೆ ಬಿದ್ದು ಚೆನ್ನೈನ ಮೈಲಾಪುರದಲ್ಲಿ ಸಾವನ್ನಪ್ಪಿತ್ತು. ಧನುಷ್ಕಾ ಎಂದು ಗುರುತಿಸಲಾಗಿದೆ, ಮಗು ಬಕೆಟ್‌ನೊಳಗೆ ಬಿದ್ದಿದ್ದರಿಂದ ಉಸಿರಾಡಲು ಕಷ್ಟವಾಗಿದ್ದು ತಕ್ಷಣ ಮನೆಯವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಗು ಸಾವನ್ನಪ್ಪಿದೆ.
ಇದನ್ನು ಓದಿ:Crime News: ದೆಹಲಿಯ ಬುರಾರಿ ರೀತಿಯಲ್ಲೇ ಪುಣೆಯಲ್ಲಿ ನಿಗೂಢ ಸಾವು; ಮನೆಯೊಳಗೆ ನಾಲ್ವರು ಶವವಾಗಿ ಪತ್ತೆ
ಡೆಕ್ಕನ್ ಕ್ರಾನಿಕಲ್ ಪ್ರಕಾರ, ಮಗುವಿನ ತಂದೆ ವಿಮಲ್ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದರ ನಿವಾಸದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಡೆಕ್ಕನ್ ಕ್ರಾನಿಕಲ್ ವರದಿಯಲ್ಲಿ ವಿಮಲ್ ಬಟ್ಟೆ ತೊಳೆಯಲು ಎರಡು ಬಕೆಟ್ ನೀರು ತುಂಬಿದ್ದರು ಆಗಾ ಧನುಷ್ಕಾ ಆಕಸ್ಮಿಕವಾಗಿ ಒಂದು ಬಕೆಟ್ನ ಒಳಗೆ ಬಿದ್ದಿದ್ದಾರೆ ಎಂದು ಹೇಳಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ