ಪಾಟ್ನಾ: ಬಿಹಾರದ ಚಾಪ್ರಾ-ಸಿವಾನ್ ಹೆದ್ದಾರಿಯಲ್ಲಿ ಇಂದು (ಬುಧವಾರ) ಬೆಳಗ್ಗೆ ಬಿಹಾರ ಪೊಲೀಸ್ (Bihar Police) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಈ ಅಪಘಾತದ (Accident) ನಂತರ ಬಸ್‌ನ ಇಂಧನದ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಬಸ್‌ಗೆ ಬೆಂಕಿ (Fire Accident) ಹೊತ್ತಿಕೊಂಡಿತು. ಆ ಬಸ್‌ನ ಕೆಳಗೆ ಬಿದ್ದ ಓರ್ವ ಬೈಕ್ ಸವಾರನ ಮೈಗೂ ಬೆಂಕಿ ಹೊತ್ತಿಕೊಂಡು ಆತ ಸುಟ್ಟು ಕರಕಲಾಗಿದ್ದಾನೆ. ಇನ್ನಿಬ್ಬರು ಸವಾರರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಡಿಯೋರಿಯಾ ಗ್ರಾಮದ ಬಳಿ ಬೈಕ್‌ನಲ್ಲಿ ಬಂದ ಮೂವರು ಪೊಲೀಸ್ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರರೊಬ್ಬರು ತಮ್ಮ ಬೈಕ್ ಸಹಿತ ಬಸ್‌ನಡಿ ಸಿಲುಕಿ 100 ಮೀಟರ್ವರೆಗೆ ಎಳೆದೊಯ್ದ ಪರಿಣಾಮ ಬಸ್‌ನ ಇಂಧನ ಟ್ಯಾಂಕ್ ಸ್ಫೋಟಗೊಂಡು ಬೈಕ್ ಸವಾರ ಸಜೀವ ದಹನಗೊಂಡಿದ್ದಾನೆ.
ಇದನ್ನೂ ಓದಿ: Crime News: ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ ಕೊಂದ ಯುವಕ!
ಅಪಘಾತದ ನಂತರ ಬಸ್ ಬೆಂಕಿಗೆ ಆಹುತಿಯಾಗಿದ್ದು, ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್ ಅಧಿಕಾರಿಗಳು ಬಸ್‌ನಿಂದ ಇಳಿದು ಓಡಿಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
छपरा-सीवान हाईवे पर आज सुबह पुलिस के जवानों को ले जा रही एक बस की चपेट में आने से तीन बाइक सवारों की मौत हो गई. हादसे के बाद बस के फ्यूल टैंक में विस्फोट होने से बस में भी आग लग गई.#Chapra pic.twitter.com/kNHrHR7FK4
— Kumar Abhishek (@active_abhi) October 12, 2022
ಸಿತಾಬ್ದಿಯಾರಾದಲ್ಲಿ ರಾಜಕೀಯ ನಾಯಕ ದಿವಂಗತ ಜಯಪ್ರಕಾಶ್ ನಾರಾಯಣ್ ಅವರ 120ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಪೊಲೀಸರನ್ನು ಹೊತ್ತು ಬಸ್ ಹಿಂತಿರುಗುತ್ತಿತ್ತು. ಆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿದ್ದರು. ಅಲ್ಲಿಂದ ವಾಪಾಸ್ ಬರುವಾಗ ಪೊಲೀಸ್ ಬಸ್ ಅಪಘಾತಕ್ಕೀಡಾಗಿದೆ.
Published On - 9:57 am, Wed, 12 October 22