President Droupadi Murmu: ಇಂದಿನಿಂದ ದ್ರೌಪದಿ ಮುರ್ಮು ತ್ರಿಪುರಾ ಪ್ರವಾಸ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ತ್ರಿಪುರಾ ಜಿಲ್ಲೆಯ ನರಸಿಂಗ್‌ಗಢ್‌ನಲ್ಲಿ ಪುಷ್ಬಂತ ಪ್ಯಾಲೇಸ್ ಮ್ಯೂಸಿಯಂ ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಶಂಕುಸ್ಥಾಪನೆಯನ್ನು ರಾಷ್ಟ್ರಪತಿ ಮುರ್ಮು ಅವರು ನೆರವೇರಿಸಲಿದ್ದಾರೆ.

President Droupadi Murmu: ಇಂದಿನಿಂದ ದ್ರೌಪದಿ ಮುರ್ಮು ತ್ರಿಪುರಾ ಪ್ರವಾಸ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ದ್ರೌಪದಿ ಮುರ್ಮು
Follow us
TV9 Web
| Updated By: ಆಯೇಷಾ ಬಾನು

Updated on:Oct 12, 2022 | 7:22 AM

ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಇಂದಿನಿಂದ 2 ದಿನದ ತ್ರಿಪುರಾ(Tripura) ಪ್ರವಾಸ ಕೈಗೊಂಡಿದ್ದಾರೆ. ಬುಧವಾರ ಬೆಳಗ್ಗೆ 11.15ಕ್ಕೆ ತ್ರಿಪುರಾದ ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣದಲ್ಲಿ(Maharaja Bir Bikram Airport) ಬಂದಿಳಿಯಲಿದ್ದಾರೆ. ರಾಷ್ಟ್ರಪತಿಯಾದ ನಂತರ ಇದು ರಾಜ್ಯಕ್ಕೆ ಮುರ್ಮು ಅವರ ಮೊದಲ ಭೇಟಿಯಾಗಿದೆ. ತ್ರಿಪುರಾಕ್ಕೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ರಾಷ್ಟ್ರಪತಿಗಳು ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಮುರ್ಮು ಅವರ 2 ದಿನದ ಭೇಟಿಯ ಸಮಯದಲ್ಲಿ, ಮುರ್ಮು ಗುವಾಹಟಿಯಿಂದ ಕೋಲ್ಕತ್ತಾ ಎಕ್ಸ್‌ಪ್ರೆಸ್ ಅನ್ನು ಅಗರ್ತಲಾ ಮತ್ತು ಅಗರ್ತಲಾ-ಜಿರಿಬಾಮ್-ಅಗರ್ತಲಾ ಜನ್ ಸತಾಬ್ದಿ ಎಕ್ಸ್‌ಪ್ರೆಸ್ ಅನ್ನು ಖೋಂಗ್‌ಸಾಂಗ್ (ಮಣಿಪುರ) ವರೆಗೆ ಹೊಸ LHB ರೇಕ್ ಮತ್ತು ವಿಸ್ಟಾಡೋಮ್ ಕೋಚ್​ಗೆ ಚಾಲನೆ ನೀಡಲಿದ್ದಾರೆ. ರಾಜ್ಯ ರಾಜಧಾನಿಯಿಂದ ಆರು ಕಿ.ಮೀ ದೂರದಲ್ಲಿರುವ ಇಂಡೋ-ಬಾಂಗ್ಲಾ ರೈಲ್ವೆ ಯೋಜನೆಯ ಕ್ರಾಸಿಂಗ್ ಪಾಯಿಂಟ್ ನಿಶ್ಚಿಂತಪುರದಲ್ಲಿ ನಿರ್ಮಿಸಲಾದ ಟ್ರಾನ್ಸ್-ಶಿಫ್ಟ್‌ಮೆಂಟ್ ಯಾರ್ಡ್ ಅನ್ನು ಅವರು ವಿಡಿಯೋ ಲಿಂಕ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಜೊತೆಗೆ ಪಶ್ಚಿಮ ತ್ರಿಪುರಾ ಜಿಲ್ಲೆಯ ನರಸಿಂಗ್‌ಗಢ್‌ನಲ್ಲಿ ಪುಷ್ಬಂತ ಪ್ಯಾಲೇಸ್ ಮ್ಯೂಸಿಯಂ ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಶಂಕುಸ್ಥಾಪನೆಯನ್ನು ರಾಷ್ಟ್ರಪತಿ ಮುರ್ಮು ಅವರು ನೆರವೇರಿಸಲಿದ್ದಾರೆ. 1917 ರಲ್ಲಿ ಮಹಾರಾಜ ಬೀರೇಂದ್ರ ಕಿಶೋರ್ ಮಂಕ್ಯ ಬಹದ್ದೂರ್ ನಿರ್ಮಿಸಿದ ಪುಷ್ಬಂತ ಅರಮನೆಯನ್ನು ಡಿಜಿಟಲ್ ಮ್ಯೂಸಿಯಂ ಆಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ ಅವರು ತ್ರಿಪುರಾಕ್ಕೆ ಭೇಟಿ ನೀಡಿದ್ದಾಗ ಇದೇ ಅರಮನೆಯಲ್ಲಿ ತಂಗಿದ್ದರು. ಪುಷ್ಬಂತ ಅರಮನೆಯು ಏಪ್ರಿಲ್ 2018 ರವರೆಗೆ ರಾಜ್ಯಪಾಲರ ಅಧಿಕೃತ ನಿವಾಸವಾಗಿತ್ತು. ಇದನ್ನೂ ಓದಿ: Karnataka Rain: ಬೆಂಗಳೂರು, ಚಿಕ್ಕಮಗಳೂರು, ಕೊಡಗು ಸೇರಿ ಬಹುತೇಕ ಕಡೆ ಇಂದು ಗುಡುಗು ಸಹಿತ ಭಾರೀ ಮಳೆ

ಮುರ್ಮು ಅವರಿಗೆ ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) ಟೌನ್ ಹಾಲ್‌ನಲ್ಲಿ ನಾಗರಿಕ ಪರವಾಗಿ ಸ್ವಾಗತಿಸಲಿದೆ. ಈ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾಣಿಕ್ ಸಹಾ, ಮೇಯರ್ ದೀಪಕ್ ಮಜುಂದಾರ್ ಮತ್ತು ಕೆಲ ಸಚಿವರು ಉಪಸ್ಥಿತರಿರುತ್ತಾರೆ. ಈ ವೇಳೆ ರಾಷ್ಟ್ರಪತಿ ಮುರ್ಮು ಅವರು ರಾಜಕೀಯ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಮುರ್ಮು ಅವರು ಅಕ್ಟೋಬರ್ 13 ರಂದು ತ್ರಿಪುರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಉದಯಪುರಕ್ಕೆ ಭೇಟಿ ನೀಡಲಿದ್ದಾರೆ. ಮತ್ತು ಮಧ್ಯಾಹ್ನ 1.10 ಕ್ಕೆ ರಾಜ್ಯದಿಂದ ಗುವಾಹಟಿಗೆ ತೆರಳಲಿದ್ದಾರೆ.

ರಾಷ್ಟ್ರಪತಿಗಳು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಗರ್ತಲಾ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. “ರಾಷ್ಟ್ರಪತಿಗಳ ಭೇಟಿಯ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ಮಾಡಲು ದೆಹಲಿಯಿಂದ ಉನ್ನತ ಮಟ್ಟದ ಭದ್ರತಾ ತಂಡವು ಈಗಾಗಲೇ ಇಲ್ಲಿಗೆ ಆಗಮಿಸಿದೆ. ಈ ತಂಡ ರಾಜ್ಯ ಪೊಲೀಸರು ಕೈಗೊಂಡ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಕಾರ್ಯಕ್ರಮದ ಸ್ಥಳಗಳಿಗೆ ಭೇಟಿ ನೀಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:22 am, Wed, 12 October 22