ಕೊರೊನಾ ವಾರಿಯರ್ಸ್​ಗೆ ಸೇನೆಯಿಂದ ಪುಷ್ಪವೃಷ್ಟಿ

ದೆಹಲಿ: ಹಗಲು ರಾತ್ರಿಯೆನ್ನದೆ ದೇಶಾದ್ಯಂತ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಗೌರವ ಸಲ್ಲಿಸಲು ಭಾರತೀಯ ವಾಯುಸೇನೆ ಸಜ್ಜಾಗಿದೆ. ಭಾರತೀಯ ವಾಯುಪಡೆ ಸುಖೋಯ್, ಮಿಗ್-29, ಜಾಗ್ವಾರ್ ಯುದ್ಧ ವಿಮಾನಗಳು ಇಂದು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಮೇಲೆ ಹೂವಿನ ಸುರಿಮಳೆ ಗೈದಿವೆ. ದೆಹಲಿ ಪೊಲೀಸ್ ಸ್ಮಾರಕಕ್ಕೆ ವಾಯುಪಡೆ ಹೆಲಿಕಾಪ್ಟರ್ ಮೂಲಕ ಪುಷ್ಪನಮನ ಸಲ್ಲಿಸಿದೆ. ಜಮ್ಮು-ಕಾಶ್ಮೀರ, ದೆಹಲಿ, ಮುಂಬೈ, ಗೋವಾ, ಬೆಂಗಳೂರು, ಲಖನೌ, ಕೊಚ್ಚಿ ಸೇರಿದಂತೆ ದೇಶಾದ್ಯಂತ ದಣಿವರಿಯದ ವೈದ್ಯಕೀಯ ಸಿಬ್ಬಂದಿಗೆ ಭೂಸೇನೆ, ವಾಯುಸೇನೆ, ನೌಕಾಸೇನೆಯಿಂದ ಗೌರವ ವಂದನೆ […]

ಕೊರೊನಾ ವಾರಿಯರ್ಸ್​ಗೆ ಸೇನೆಯಿಂದ ಪುಷ್ಪವೃಷ್ಟಿ
ಸಾಧು ಶ್ರೀನಾಥ್​

Updated on: May 03, 2020 | 11:15 AM

ದೆಹಲಿ: ಹಗಲು ರಾತ್ರಿಯೆನ್ನದೆ ದೇಶಾದ್ಯಂತ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಗೌರವ ಸಲ್ಲಿಸಲು ಭಾರತೀಯ ವಾಯುಸೇನೆ ಸಜ್ಜಾಗಿದೆ. ಭಾರತೀಯ ವಾಯುಪಡೆ ಸುಖೋಯ್, ಮಿಗ್-29, ಜಾಗ್ವಾರ್ ಯುದ್ಧ ವಿಮಾನಗಳು ಇಂದು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಮೇಲೆ ಹೂವಿನ ಸುರಿಮಳೆ ಗೈದಿವೆ.

ದೆಹಲಿ ಪೊಲೀಸ್ ಸ್ಮಾರಕಕ್ಕೆ ವಾಯುಪಡೆ ಹೆಲಿಕಾಪ್ಟರ್ ಮೂಲಕ ಪುಷ್ಪನಮನ ಸಲ್ಲಿಸಿದೆ. ಜಮ್ಮು-ಕಾಶ್ಮೀರ, ದೆಹಲಿ, ಮುಂಬೈ, ಗೋವಾ, ಬೆಂಗಳೂರು, ಲಖನೌ, ಕೊಚ್ಚಿ ಸೇರಿದಂತೆ ದೇಶಾದ್ಯಂತ ದಣಿವರಿಯದ ವೈದ್ಯಕೀಯ ಸಿಬ್ಬಂದಿಗೆ ಭೂಸೇನೆ, ವಾಯುಸೇನೆ, ನೌಕಾಸೇನೆಯಿಂದ ಗೌರವ ವಂದನೆ ನೆರವೇರಿದೆ.

ವಿಕ್ಟೋರಿಯ ಆಸ್ಪತ್ರೆಯಲ್ಲಿ ಹೂಮಳೆ:
ಬೆಂಗಳೂರಿನ ವಿಕ್ಟೋರಿಯ, ಕಮಾಂಡೋ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಮೇಲೆ ಸೇನಾಪಡೆಯಿಂದ ಪುಷ್ಪವೃಷ್ಟಿಯಾಗಿದೆ. ದೇಶದಿಂದ ಕೊರೊನಾ ಸೋಂಕನ್ನು ಹೊಡೆದೋಡಿಸಲು ಪಣ ತೊಟ್ಟು ನಿಂತ ಕೊರೊನಾ ವಾರಿಯರ್ಸ್ ಮೇಲೆ ದೇಶದ ಅನೇಕ ಭಾಗಗಳಲ್ಲಿ ಹೂವಿನ ಸುರಿಮಳೆ ಸುರಿಸುವ ಮೂಲಕ ಗೌರವ ಅರ್ಪಿಸಲಾಗುತ್ತಿದೆ. ಸೇನೆಯ ವಂದನೆಗೆ ವೈದ್ಯಕೀಯ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.


Published On - 11:01 am, Sun, 3 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us