ಬೆಂಗಳೂರು: ನಗರದ ಹವ್ಯಾಸಿ ಛಾಯಾಗ್ರಾಹಕ ಶ್ರವಣ್ ಅಯ್ಯರ್ ಕ್ಲಿಕ್ಕಿಸಿದ ಫೋಟೊಗೆ ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (WMO) ನೀಡುವ 2021ರ ಸಾಲಿನ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಇವರು ಆಫ್ರಿಕಾದ ಮಡಗಾಸ್ಕರ್ನ ಮೊರೊಂಡವದಲ್ಲಿ ಹವಾಮಾನದ ನಾಟಕೀಯ ವಿದ್ಯಮಾನವನ್ನು ಇವರು ಕ್ಲಿಕ್ಕಿಸಿದ್ದರು.
‘ಮಡಗಾಸ್ಕರ್ನ ಮಳೆಗಾಲದ ಸಮಯ’ ಎನ್ನುವ ಶೀರ್ಷಿಕೆ ಬರಹದೊಂದಿಗೆ ಈ ಫೋಟೋ ಪ್ರಕಟಗೊಂಡಿತ್ತು. 13 ವಿಜೇತ ಫೋಟೋಗಳಲ್ಲಿ ಇದು ಕೂಡ ಒಂದಾಗಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ 2021ರ ಕ್ಯಾಲೆಂಡರ್ನಲ್ಲಿ ಈ ಫೋಟೊ ಪ್ರಕಟವಾಗಲಿದೆ.
ವಿಶ್ವದ ನಾನಾ ಕಡೆಗಳಿಂದ ಒಟ್ಟೂ 1100 ಫೋಟೋಗಳು ಸ್ಪರ್ಧೆಯಲ್ಲಿದ್ದವು. ಈ ಪೈಕಿ 70 ಚಿತ್ರಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿತ್ತು. ಈ ಪೈಕಿ WMOನ ಜ್ಯೂರಿಗಳು 13 ಫೋಟೊಗಳನ್ನು ಆಯ್ಕೆ ಮಾಡಿದ್ದರು. ಇದರಲ್ಲಿ ಶ್ರವಣ್ ಅಯ್ಯರ್ ಕ್ಲಿಕ್ಕಿಸಿದ ಫೋಟೊ ಕೂಡ ಇದೆ.
ಆಫ್ರಿಕಾದ ದ್ವೀಪ ರಾಷ್ಟ್ರ ಮಡಗಾಸ್ಕರ್ನ ಮಳೆಗಾಲದ ಸಮಯದಲ್ಲಿ ನಾನು ಈ ಫೋಟೊ ಕ್ಲಿಕ್ ಮಾಡಿದ್ದೇನೆ. ಈ ಭಾಗದಲ್ಲಿ ಇತ್ತೀಚೆಗೆ ತಾಪಮಾನ ಹೆಚ್ಚುತ್ತಿದೆ. ಈ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ ಶರವಣ್.
ಮಡಗಾಸ್ಕರ್ ಅಲ್ಲದೆ, ಭೂತಾನ್, ಕಪಾನ್ನ ಪೂರ್ವ ಕರಾವಳಿ, ಸಿಂಗಾಪುರ, ಮಲೇಷಿಯಾ, ಥೈಲೆಂಡ್, ಶ್ರೀಲಂಕಾ ಭಾರತ ಹಾಗೂ ಅಮೆರಿಕದಲ್ಲೂ ಇವರು ಫೋಟೋಗ್ರಫಿ ಮಾಡಿದ್ದಾರೆ.
Forbes ವಿಜ್ಞಾನ ಪ್ರಶಸ್ತಿ 2020: ವಾಣಿಜ್ಯ ಬಾಹ್ಯಾಕಾಶ ಉದ್ಯಮದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಗರಿ
Published On - 3:28 pm, Mon, 4 January 21