‘ದೇಶ ಭಕ್ತರ ದಿನ’ವಾಗಿ ನೇತಾಜಿ ಜನ್ಮದಿನ ಆಚರಿಸೋಣ; ಅಂದು ರಾಷ್ಟ್ರೀಯ ರಜಾನೂ ಘೋಷಿಸಿ: ಕೇಂದ್ರಕ್ಕೆ ಮಮತೆಯ ಪತ್ರ!
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಬೆನ್ನಲ್ಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರು ಪ್ರಸ್ತಾಪವಾಗಿದೆ.
ಕೊಲ್ಕೊತಾ: ಸ್ವಾತಂತ್ರ್ಯಾನಂತರ ಸುಭಾಷ್ ಚಂದ್ರ ಬೋಸ್ ಅವರ ಸ್ಮರಣೆಗಾಗಿ ನಾವು ಏನನ್ನೂ ಮಾಡಿಲ್ಲ.. ಹೀಗಾಗಿ ನೇತಾಜಿಯವರ ನೆನಪಿಗಾಗಿ ಅವರ ಜನ್ಮದಿನವನ್ನು (ಜನವರಿ 23) ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಜನವರಿ 23ರಂದು ಪಶ್ಚಿಮ ಬಂಗಾಳದಲ್ಲಿ ‘ದೇಶ ನಾಯಕ್ ದಿವಸ್’ ಎಂದು ಆಚರಿಸುತ್ತೇವೆ. ಅಂತೆಯೇ, ಇಡೀ ದೇಶದಲ್ಲೂ ನೇತಾಜಿಯವರ ಜನ್ಮ ದಿನವನ್ನು ಆಚರಿಸುವಂತಾಗಬೇಕು. ಹೀಗಾಗಿ, ರಾಷ್ಟ್ರೀಯ ರಜಾ ದಿನ ಎಂದು ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದರು. ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದವರ ಬಳಿ ಶಂಖ ಮೊಳಗಿಸಲು ಅವರು ಕರೆ ಕೊಟ್ಟಿದ್ದಾರೆ.
ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ. ಈ ಕುರಿತು ಇತ್ತೀಚೆಗಷ್ಟೇ, ಸುಭಾಷ್ ಚಂದ್ರ ಬೋಸ್ರವರ ಸಂಬಂಧಿಕ ಚಂದ್ರ ಕುಮಾರ್ ಬೋಸ್, ಜನವರಿ 23ರಂದು ರಾಷ್ಟ್ರೀಯ ರಜಾ ದಿನವೆಂದು ಘೋಷಿಸುವ ಬದಲು, ‘ದೇಶ ಭಕ್ತರ ದಿನ’ವೆಂದು ಆಚರಿಸುವಂತೆ ಮನವಿ ಮಾಡಿದ್ದರು.
Published On - 4:58 pm, Mon, 4 January 21