Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುರೋಪ್​ನಿಂದ ಡಾರ್ಜಿಲಿಂಗ್​ಗೆ ಬಂದ ಸೈಬೀರಿಯನ್ ಹುಲಿಗಳು

ಇನ್ಮುಂದೆ ಡಾರ್ಜಿಲಿಂಗ್​ನಲ್ಲಿರುವ ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್‌ನಲ್ಲಿ ಸೈಬೀರಿಯನ್​ ಹುಲಿಗಳು ಕಾಣಸಿಗಲಿವೆ. ಯುರೋಪ್​ನಿಂದ ಒಂದು ಗಂಡು ಹಾಗೂ ಒಂದು ಹೆಣ್ಣು ಹುಲಿ ಡಾರ್ಜಿಲಿಂಗ್​ಗೆ ಬಂದಿವೆ. ಲಾರಾ ಮತ್ತು ಅಕಾಮಾಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಯುರೋಪ್​ನಿಂದ ಡಾರ್ಜಿಲಿಂಗ್​ಗೆ ಬಂದ ಸೈಬೀರಿಯನ್ ಹುಲಿಗಳು
ಹುಲಿಗಳು
Follow us
ನಯನಾ ರಾಜೀವ್
|

Updated on: Dec 12, 2023 | 9:03 AM

ಇನ್ಮುಂದೆ ಡಾರ್ಜಿಲಿಂಗ್​ನಲ್ಲಿರುವ ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್‌ನಲ್ಲಿ ಸೈಬೀರಿಯನ್​ ಹುಲಿಗಳು(Tigers) ಕಾಣಸಿಗಲಿವೆ. ಯುರೋಪ್​ನಿಂದ ಒಂದು ಗಂಡು ಹಾಗೂ ಒಂದು ಹೆಣ್ಣು ಹುಲಿ ಡಾರ್ಜಿಲಿಂಗ್​ಗೆ ಬಂದಿವೆ. ಲಾರಾ ಮತ್ತು ಅಕಾಮಾಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಅವುಗಳಿಗಾಗಿ ಎಂಟು ಪಶುವೈದ್ಯರು ಮತ್ತು ತಜ್ಞರ ತಂಡವನ್ನು ರಚಿಸಲಾಗಿದೆ. ಪ್ರಸ್ತುತ ಅವುಗಳನ್ನು ಮೃಗಾಲಯದ ರಾತ್ರಿ ಆಶ್ರಯದಲ್ಲಿ ಇರಿಸಲಾಗಿದೆ. ಮುಂದಿನ ಒಂದು ತಿಂಗಳ ಕಾಲ ಅವರು ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಇಬ್ಬರಿಗೂ ವಿಶೇಷ ಆಹಾರ ಪದ್ಧತಿ ಇದೆ. ವಿಟಮಿನ್ಸ್ ಮುಂದುವರಿಯುತ್ತದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ 1 ರಂದು ಪ್ರವಾಸಿಗರ ಕಣ್ಣಿಗೆ ಬೀಳಲಿವೆ. ಸೈಬೀರಿಯನ್ ಹುಲಿ ಬದಲು ಎರಡು ಕೆಂಪು ಪಾಂಡಾಗಳನ್ನು ಯುರೋಪ್ ಮೃಗಾಲಯಕ್ಕೆ ಕಳುಹಿಸಲಾಗಿದೆ. ಡಾರ್ಜಿಲಿಂಗ್ ಮೃಗಾಲಯದ ನಿರ್ದೇಶಕ ಬಸ್ಬ್ರಾಜ್ ಹೊಲೆಯಾಚಿ ಮಾತನಾಡಿ, ಲಾರಾ ಮತ್ತು ಅಕಾಮಾಸ್ ವಿಶೇಷ ವಿಮಾನದ ಮೂಲಕ ಶನಿವಾರ ಕೋಲ್ಕತ್ತಾ ತಲುಪಿವೆ. ಅಲ್ಲಿಂದ ಹವಾನಿಯಂತ್ರಿತ ಆಂಬುಲೆನ್ಸ್‌ನಲ್ಲಿ ಮೃಗಾಲಯಕ್ಕೆ ಕರೆತರಲಾಯಿತು ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಿ: Cheetah Death: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು, ನಾಲ್ಕು ತಿಂಗಳಲ್ಲಿ 8ನೇ ಘಟನೆ

ಮತ್ತೊಂದೆಡೆ, ಎರಡು ಸಿಂಹ ಡಿಸೆಂಬರ್‌ನಲ್ಲಿ ಬೆಂಗಾಲ್ ಸಫಾರಿ ಪಾರ್ಕ್‌ಗೆ ಬರಬೇಕಾಗಿತ್ತು, ಆದರೆ ಕಾರ್ಯವಿಧಾನದ ಕಾರಣಗಳಿಂದ ಅದು ಒಂದು ತಿಂಗಳು ವಿಳಂಬವಾಗಿದೆ. ಜನವರಿ ತಿಂಗಳಿನಲ್ಲಿ ಸಿಂಹದ ಜೋಡಿ ಬೆಂಗಾಲ್ ಸಫಾರಿ ಪಾರ್ಕ್‌ಗೆ ಆಗಮಿಸಲಿದೆ ಎಂದು ತಿಳಿದುಬಂದಿದೆ.

ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಚೀತಾಗಳನ್ನು ಕರೆತರಲಾಗಿತ್ತು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಚೀತಾಗಳನ್ನು ಬಿಡುಗಡೆ ಮಾಡಿದ್ದರು. ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದಿಂದ ಒಟ್ಟು 20 ಚೀತಾಗಳನ್ನು ಕರೆತರಲಾಗಿತ್ತು, ಅದರ ಪೈಕಿ ಈಗ 14 ಚೀತಾಗಳು ಮಾತ್ರ ಬದುಕುಳಿದಿವೆ. ಈ ಮಾರ್ಚ್​ನಿಂದ ಇಲ್ಲಿಯವರೆಗೆ 9 ಚೀತಾಗಳು ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ