ಉತ್ತರಾಖಂಡ: ಶವಾಗಾರದಲ್ಲಿರಿಸಿದ್ದ ವ್ಯಕ್ತಿಯ ಗುರುತೇ ಸಿಗದಂತೆ ದೇಹವನ್ನು ಕಚ್ಚಿ ತಿಂದ ಇಲಿಗಳು
ಮರಣೋತ್ತರ ಪರೀಕ್ಷೆ ಬಳಿಕ ಶವಾಗಾರದಲ್ಲಿ ಇರಿಸಲಾಗಿದ್ದ ವ್ಯಕ್ತಿಯ ದೇಹವನ್ನು ಗುರುತೇ ಸಿಗದ ರೀತಿಯಲ್ಲಿ ಇಲಿಗಳು ತಿಂದಿರುವ ಘಟನೆ ವರದಿಯಾಗಿದೆ. ಉತ್ತರಾಖಂಡ್‌ನ ಪೌರಿಯಲ್ಲಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ, ಕ್ತಿಯೊಬ್ಬರ ದೇಹವು ಇಲಿಗಳಿಂದ ಭಾಗಶಃ ವಿರೂಪಗೊಂಡ ಸ್ಥಿತಿಯಲ್ಲಿ ಇತ್ತೀಚೆಗೆ ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ಶವಾಗಾರದಲ್ಲಿ ಇರಿಸಲಾಗಿದ್ದ ವ್ಯಕ್ತಿಯ ದೇಹವನ್ನು ಗುರುತೇ ಸಿಗದ ರೀತಿಯಲ್ಲಿ ಇಲಿಗಳು ತಿಂದಿರುವ ಘಟನೆ ವರದಿಯಾಗಿದೆ. ಉತ್ತರಾಖಂಡ್‌ನ ಪೌರಿಯಲ್ಲಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ, ಕ್ತಿಯೊಬ್ಬರ ದೇಹವು ಇಲಿಗಳಿಂದ ಭಾಗಶಃ ವಿರೂಪಗೊಂಡ ಸ್ಥಿತಿಯಲ್ಲಿ ಇತ್ತೀಚೆಗೆ ಪತ್ತೆಯಾಗಿದೆ.
ಆಸ್ಪತ್ರೆ ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಅಧಿಕಾರಿಯಾಗಿದ್ದ ವ್ಯಕ್ತಿ ಶುಕ್ರವಾರದಂದು ಅಸ್ವಸ್ಥತೆಯಿಂದ ಮೃತಪಟ್ಟಿದ್ದಾರೆ. ಅವರ ಕುಟುಂಬದವರು ಶವಪರೀಕ್ಷೆಗೆ ಮನವಿ ಮಾಡಿದ್ದರು.
ಶವವನ್ನು ಇರಿಸಲಾಗಿದ್ದ ಫ್ರೀಜರ್‌ನ ಬೀಗ ಮುರಿದಿತ್ತು ಎಂದು ವ್ಯಕ್ತಿಯ ಸಹೋದರ ನಿತಿನ್ ಉಪ್ರೇತಿ ಹೇಳಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ, ದೇಹವು ಸುರಕ್ಷಿತವಾಗಿರುತ್ತದೆ ಎಂದು ಅವರು ಭರವಸೆ ನೀಡಿದರು.
ಮತ್ತಷ್ಟು ಓದಿ: ಉತ್ತರ ಪ್ರದೇಶ: ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಮಹಿಳೆಯ ದೇಹವನ್ನು ಕಚ್ಚಿ ತಿಂದ ಇಲಿಗಳು
ಮರಣೋತ್ತರ ಪರೀಕ್ಷೆ ಮಾಡಿದ್ದ ಕೊಠಡಿ ಬಾಗಿಲು ಸ್ವಲ್ಪ ಸಮಯದವರೆಗೆ ತೆರೆದಿತ್ತು ಆ ಸಂದರ್ಭದಲ್ಲಿಯೇ ಇಲಿಗಳು ಒಳಗೆ ಪ್ರವೇಶಿಸಿರಬಹುದು ಎನ್ನಲಾಗಿದೆ. ಇಂತಹ ಭೀಕರ ಘಟನೆ ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ. ಬಾಗಿಲುಗಳನ್ನು ಸರಿಪಡಿಸಲು ಶ್ರೀನಗರದಿಂದ ಬಡಗಿಗಳನ್ನು ಕರೆಸಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲೂ ಇಂಥದ್ದೇ ಘಟನೆ ನಡೆದಿತ್ತು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಮಹಿಳೆಯ ದೇಹವನ್ನು ಇಲಿಗಳು ಕಚ್ಚಿ ತಿಂದಿರುವ ಘಟನೆ ಉತ್ತರ ಪ್ರದೇಶದ ಲಲಿತ್ಪುರದಲ್ಲಿ ನಡೆದಿದೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಡಿಸೆಂಬರ್ 2 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಆಕೆಯ ದೇಹವನ್ನು ಅದೇ ದಿನ ರಾತ್ರಿ ಪೊಲೀಸರು ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ (CMO) ಡಾ. ಇಮ್ತಿಯಾಜ್ ಅಹ್ಮದ್ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ