ಗಾಯಕ ಸಿಧು ಮೂಸೆವಾಲಾ(Sidhu Moosewala) ಹಂತಕರಿಗೆ ಸಹಾಯ ಮಾಡಿದ್ದ ಆರೋಪದ ಮೇಲೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಆಪ್ತನನ್ನು ಪಂಜಾಬ್ನಲ್ಲಿ ಬಂಧಿಸಲಾಗಿದೆ. ಮಣಿಮಜ್ರಾದ ಗೋಬಿಂದಪುರ ಮೊಹಲ್ಲಾದ ಜತೀಂದರ್ ಸಿಂಗ್ ಎಂಬಾತನೊಂದಿಗೆ ಮನದೀಪ್ ಸಿಂಗ್ ಅಲಿಯಾಸ್ ಛೋಟಾ ಮಣಿಯನ್ನು ಬಂಧಿಸಲಾಗಿದೆ. ಅವರಿಂದ ಎರಡು ಪಿಸ್ತೂಲ್‌ಗಳು ಮತ್ತು 12 ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.
ಜಿರಾಕ್‌ಪುರ ಪ್ರದೇಶದಲ್ಲಿ ಛೋಟಾ ಮಣಿ ಇರುವಿಕೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಪಡೆದು , ಪಂಜಾಬ್ ಪೊಲೀಸರ ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ ತಂಡಗಳು ಅವನನ್ನು ಪತ್ತೆಹಚ್ಚಿ ಸಹಚರನೊಂದಿಗೆ ಬಂಧಿಸಿವೆ ಎಂದು ಅವರು ಹೇಳಿದರು.
ಇಬ್ಬರೂ ಆರೋಪಿಗಳು ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ಗಳಿಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಕ್ರಿಮಿನಲ್ ಇತಿಹಾಸವನ್ನು ಹೊಂದಿದ್ದಾರೆ. ಕೊಲೆ ಯತ್ನ, ಸುಲಿಗೆ, ದರೋಡೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಅವರ ವಿರುದ್ಧ ಚಂಡೀಗಢ ಮತ್ತು ಹರಿಯಾಣದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಆರೋಪಿ ಸಚಿನ್ ಬಿಷ್ಣೋಯಿ ಅಜರ್‌ಬೈಜಾನ್‌ನಿಂದ ಭಾರತಕ್ಕೆ ಹಸ್ತಾಂತರ
ಆರೋಪಿಗಳು ವಿದೇಶದಲ್ಲಿ ನೆಲೆಸಿರುವ ಅವರ ಹ್ಯಾಂಡ್ಲರ್‌ಗಳಿಂದ ಪ್ರತಿಸ್ಪರ್ಧಿ ದರೋಡೆಕೋರರ ಉದ್ದೇಶಿತ ಹತ್ಯೆಗಳನ್ನು ನಡೆಸುವ ಕಾರ್ಯವನ್ನು ನಿರ್ವಹಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಜಿಪಿ ಹೇಳಿದರು.
ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜನರಲ್ ಸಂದೀಪ್ ಗೋಯೆಲ್ ಅವರು ಚೋಟ್ಟಾ ಮಣಿಗೆ ವಿದೇಶದಲ್ಲಿ ನೆಲೆಸಲು ಸಹಾಯ ಮಾಡಲು ಬಯಸಿದ್ದರು ಮತ್ತು ಯುರೋಪ್‌ಗೆ ಸುರಕ್ಷಿತವಾಗಿ ಪ್ರವೇಶಿಸಲು ಅವರನ್ನು ಮೂರು ಬಾರಿ ದುಬೈಗೆ ಕಳುಹಿಸಿದರು. ಆದಾಗ್ಯೂ, ಛೋಟಾ ಮಣಿ ಯುರೋಪ್‌ಗೆ ಪ್ರವೇಶಿಸಲು ವಿಫಲರಾದರು ಮತ್ತು ಭಾರತಕ್ಕೆ ಮರಳಬೇಕಾಯಿತು ಎಂದು ಅಧಿಕಾರಿ ಹೇಳಿದರು.
ಮತ್ತೊಂದು ಘಟನೆ
ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಗ್ಯಾಂಗ್ಸ್ಟರ್ಗೆ ಶಸ್ತ್ರಾಸ್ತ್ರ ಪೂರೈಸಿದ್ದ ವ್ಯಕ್ತಿಯ ಬಂಧನ
ಪಂಜಾಬ್‌ನ ಖ್ಯಾತ ಗಾಯಕ ಸಿಧು ಮೂಸೆವಾಲಾ(Sidhu Moose Wala )ಹತ್ಯೆ ಪ್ರಕರಣದಲ್ಲಿ ಇದೀಗ ವಾಂಟೆಡ್ ಶಸ್ತ್ರಾಸ್ತ್ರ ವ್ಯಾಪಾರಿಯನ್ನು ಬಂಧಿಸಲಾಗಿದ್ದು, ಮೂಸೆವಾಲಾ ಹತ್ಯೆಗೆ ಆತನೇ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಶಸ್ತ್ರಾಸ್ತ್ರ ವ್ಯಾಪಾರಿಯನ್ನು ಅಮೆರಿಕದಲ್ಲಿ ಪೊಲೀಸರು ಬಂಧಿಸಿದ್ದರು.
ಧರ್ಮಂಜೋತ್ ಸಿಂಗ್ ಕಹ್ಲೋನ್ ಎಂಬ ದೊಡ್ಡ ಶಸ್ತ್ರಾಸ್ತ್ರ ವ್ಯಾಪಾರಿಯನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ, ಈತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರಿಗೆ ತುಂಬಾ ನಿಕಟವಾಗಿದ್ದ ಎಂದು ಹೇಳಲಾಗಿದೆ. ಆತನ ಸೂಚನೆಯ ಮೇರೆಗೆ ಮೂಸೇವಾಲ ಅವರನ್ನು ಹತ್ಯೆ ಮಾಡಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಕಳೆದ ಹಲವಾರು ವರ್ಷಗಳಿಂದ ಜೈಲಿನಲ್ಲಿದ್ದ, ಅಲ್ಲಿಂದ ಅವರು ತಮ್ಮ ಗ್ಯಾಂಗ್‌ನೊಂದಿಗೆ ಸಂಪರ್ಕದಲ್ಲಿದ್ದ.
ಅಮೆರಿಕದಲ್ಲಿ ಬಂಧನಕ್ಕೊಳಗಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ ಕಹ್ಲೋನ್, ಸಿಧು ಮುಸೆವಾಲಾ ಅವರನ್ನು ಕೊಂದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ. ಶೀಘ್ರದಲ್ಲೇ ಭಾರತೀಯ ಏಜೆನ್ಸಿಗಳು ಎಫ್‌ಬಿಐ ಅನ್ನು ಸಂಪರ್ಕಿಸಲಿವೆ ಎಂದು ಹೇಳಲಾಗುತ್ತಿದೆ, ನಂತರ ಕಹ್ಲೋನ್ ಅನ್ನು ಭಾರತಕ್ಕೆ ಕರೆತರಲು ಸಿದ್ಧತೆಗಳು ಪ್ರಾರಂಭವಾಗುತ್ತವೆ.
ಪಂಜಾಬ್‌ನ ಅಮೃತಸರದಲ್ಲಿ ವಾಸಿಸುತ್ತಿರುವ ಈ ಶಸ್ತ್ರಾಸ್ತ್ರ ವ್ಯಾಪಾರಿ ಎಕೆ-47 ರೈಫಲ್‌ಗಳು ಮತ್ತು ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿದ ಆರೋಪ ಹೊತ್ತಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ