ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಆರೋಪಿ ಸಚಿನ್ ಬಿಷ್ಣೋಯಿ ಅಜರ್‌ಬೈಜಾನ್‌ನಿಂದ ಭಾರತಕ್ಕೆ ಹಸ್ತಾಂತರ
ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಆರೋಪಿ ಸಚಿನ್ ಬಿಷ್ಣೋಯಿನ್ನು ಅಜರ್‌ಬೈಜಾನ್‌ನಿಂದ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆದುಕೊಂಡು ಬರಲಾಗಿದೆ.
ದೆಹಲಿ, ಆ.1: ಸಿಧು ಮೂಸೆ ವಾಲಾ (Sidhu Moosewala) ಹತ್ಯೆ ಪ್ರಕರಣದ ಆರೋಪಿ ಸಚಿನ್ ಬಿಷ್ಣೋಯಿನ್ನು ಇಂದು (ಆ.1) ಅಜರ್‌ಬೈಜಾನ್‌ನಿಂದ ವಿಶೇಷ ವಿಮಾನದ ಮೂಲಕ ದೆಹಲಿ ಪೊಲೀಸರು ಭಾರತಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಸಾವಿಗೆ ಕಾರಣವಾಗಿದ್ದ ಪ್ರಮುಖ ಸಂಚುಕೋರರಲ್ಲಿ ಒಬ್ಬರಾದ ಸಚಿನ್ ಬಿಷ್ಣೋಯ್ ನ್ನು ಮರಳಿ ಭಾರತಕ್ಕೆ ಕರೆತರಲು ದೆಹಲಿ ಪೊಲೀಸರ ವಿಶೇಷ ತಂಡವು ಅಜರ್‌ಬೈಜಾನ್‌ಗೆ ತೆರಳಿತ್ತು. ಇದೀಗ ಆತನನ್ನು ಭಾರತದ ಪೊಲೀಸರಿಗೆ ಹಸ್ತಾಂತರ ಮಾಡಲು ಅಜರ್‌ಬೈಜಾನ್‌ನ ಸರ್ಕಾರ ಒಪ್ಪಿಕೊಂಡಿದ್ದು, ದೆಹಲಿ ಪೊಲೀಸ್ರು ಭಾರತಕ್ಕೆ ಕರೆದುಕೊಂಡು ಬರುತ್ತಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಯೊಂದು ಕಂಡಿದೆ. ಆರೋಪಿ ಸಚಿನ್ ಬಿಷ್ಣೋಯ್ ಅವರನ್ನು ಮಂಗಳವಾರ ಅಜರ್‌ಬೈಜಾನ್‌ನ ಬಾಕುದಿಂದ ಭಾರತಕ್ಕೆ ಕೆರದುಕೊಂಡು ಬರಲಾಗಿದೆ, ಇದೀಗ ರಾಷ್ಟ್ರ ರಾಜಧಾನಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣಕ್ಕೆ ಕರೆತರಲಾಗುವುದು ಎಂದು ಹೇಳಿದ್ದಾರೆ.
Accused in the Sidhu Moosewala murder case Sachin Bishnoi alias Sachin Thapan extradited to India from Baku, Azerbaijan by Delhi Police Special Cell. pic.twitter.com/bWOu24Q9PH
— ANI (@ANI) August 1, 2023
ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಅವರ ಸೋದರಳಿಯ ಸಚಿನ್ (25) ಕಳೆದ ವರ್ಷ ಮೇ ತಿಂಗಳಲ್ಲಿ ಮೂಸ್ ವಾಲಾ ಹತ್ಯೆ ನಂತರ ತಿಲಕ್ ರಾಜ್ ತುತೇಜಾ ಎಂಬ ಹೆಸರನ್ನು ಇಟ್ಟುಕೊಂಡು ನಕಲಿ ಪಾಸ್‌ಪೋರ್ಟ್‌ನಲ್ಲಿ ದುಬೈಗೆ ಪರಾರಿಯಾಗಿದ್ದ ಎಂದು ದೆಹಲಿ ಪೋಲಿಸರ ಮೂಲಗಳು ತಿಳಿಸಿವೆ. ಈ ಪಾಸ್‌ಪೋರ್ಟ್‌ನಲ್ಲಿ ದೆಹಲಿ ವಿಳಾಸ ನೀಡಿದ್ದು, ಮೇ 1ಕ್ಕೆ ದುಬೈಗೆ ತೆರಳಿದ್ದಾರೆ, ನಂತರ ಅಲ್ಲಿಂದ ಅಜರ್‌ಬೈಜಾನ್‌ನ ಬಾಕು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Published On - 12:10 pm, Tue, 1 August 23