ತಿರುಮಲ ಟಿಟಿಡಿಯಲ್ಲಿ ತುಪ್ಪ ಖರೀದಿ ವಿವಾದ -ಮಾರ್ಚ್‌ನಿಂದಲೇ ಕೆಎಂಎಫ್ ಟೆಂಡರ್ ಹಾಕಿಲ್ಲ ಎಂಬ ವಾದ ಮುಂದಿಟ್ಟ ಟಿಟಿಡಿ

TTD: ಮಾರ್ಚ್ 2021 ರಲ್ಲಿ ನಡೆದ ಟೆಂಡರ್‌ಗಳಲ್ಲಿ 1-3 ಶ್ರೇಣಿಯಲ್ಲಿದ್ದ ಕರ್ನಾಟಕ ಹಾಲು ಒಕ್ಕೂಟವು ಎಲ್ -1 ಮತ್ತು ಎಲ್ -2 ಅನುಮತಿಯೊಂದಿಗೆ ಟಿಟಿಡಿಗೆ 20 ಲಕ್ಷ ಕೆಜಿ ತುಪ್ಪದಲ್ಲಿ ಕೇವಲ ಶೇ. 20 ತುಪ್ಪ ಪೂರೈಸಿದೆ. ಆ ನಂತರ ಅದು ಟೆಂಡರ್ ಪ್ರಕ್ರಿಯೆಯಲ್ಲಿಯೇ ಭಾಗವಹಿಸಿಲ್ಲ - ಟಿಟಿಡಿ ಪ್ರತಿವಾದ

ತಿರುಮಲ ಟಿಟಿಡಿಯಲ್ಲಿ ತುಪ್ಪ ಖರೀದಿ ವಿವಾದ -ಮಾರ್ಚ್‌ನಿಂದಲೇ ಕೆಎಂಎಫ್ ಟೆಂಡರ್ ಹಾಕಿಲ್ಲ ಎಂಬ ವಾದ ಮುಂದಿಟ್ಟ ಟಿಟಿಡಿ
ಮಾರ್ಚ್‌ನಲ್ಲಿ ಕೆಎಂಎಫ್ ಟೆಂಡರ್ ಹಾಕಿಲ್ಲ ಎಂಬ ವಾದ ಮಂಡಿಸಿದ ಟಿಟಿಡಿ
Follow us
|

Updated on: Aug 01, 2023 | 1:05 PM

ತಿರುಮಲ ಶ್ರೀ ವೆಂಕಟೇಶ್ವರನ ನಿತ್ಯ ಅನ್ನದಾನ, ವಡೆ ಪ್ರಸಾದ ಮತ್ತು ಲಡ್ಡು ಪ್ರಸಾದ (Tirupati Laddu) ತಯಾರಿಸಲು ಬಳಸುವ ತುಪ್ಪದ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ಹಾಲು ಮಹಾಮಂಡಳದ ಆರೋಪ ತೀವ್ರ ಸಂಚಲನ ಮೂಡಿಸಿದೆ. ಕೆಎಂಎಫ್ ಅಧ್ಯಕ್ಷರ ಹೇಳಿಕೆಗೆ ಟಿಟಿಡಿ (TTD) ಕೌಂಟರ್ ನೀಡಿದೆ. ಎರಡು ವರ್ಷಗಳಿಂದ ನಷ್ಟದಲ್ಲಿಯೇ ಟಿಟಿಡಿಗೆ ತುಪ್ಪ ಪೂರೈಕೆ ಮಾಡುತ್ತಿದ್ದೆವು. ಅದರಿಂದ ಕೊನೆಗೆ ತುಪ್ಪ ಸರಬರಾಜು ನಿಲ್ಲಿಸಿಬಿಟ್ಟೆವು ಎಂದು ಕೆಎಂಎಫ್ (KMF Ghee) ತಿಳಿಸಿದೆ. ಇದಕ್ಕೆ ಮಾರುತ್ತರ ನೀಡಿರುವ ಟಿಟಿಡಿ ಸಂಸ್ಥೆಯು, ಹೀಗೆ ದಿಢೀರನೆ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ ಕನಿಷ್ಠ ಟೆಂಡರ್ ಪ್ರಕ್ರಿಯೆಯಲ್ಲಿಯೂ ಕೆಎಂಎಫ್ ಭಾಗವಹಿಸಿಲ್ಲ ಎಂದಿದೆ.

ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಪ್ರಸಾದ ತಯಾರಿಸಲು ಟಿಟಿಡಿ ಪ್ರತಿ ವರ್ಷ 5 ಸಾವಿರ ಟನ್ ತುಪ್ಪವನ್ನು ಬಳಸುತ್ತದೆ. ಇತ್ತೀಚೆಗಷ್ಟೇ ಟಿಟಿಡಿ ಅಧಿಕೃತವಾಗಿ ಶ್ರೀವಾರಿ ಲಡ್ಡು ಮತ್ತು ಇತರ ಪ್ರಸಾದ ತಯಾರಿಕೆಗೆ ಸುಮಾರು 5 ಸಾವಿರ ಟನ್ ತುಪ್ಪವನ್ನು ಬಳಸಲಾಗುತ್ತದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ. ತನ್ನ ಮಾರುಕಟ್ಟೆ ವಿಭಾಗದ ಮೂಲಕ ಟಿಟಿಡಿ ತುಪ್ಪ ಖರೀದಿಸುತ್ತಿದೆ. ಆ ಮಟ್ಟಿಗೆ ಟಿಟಿಡಿ ಮಂಡಳಿ ಸಮಿತಿ ಸೇರಿದಂತೆ ಸಮಿತಿಯಿಂದ ಅಧಿಸೂಚನೆ ಹೊರಡಿಸಿ ನಂತರ ಆಡಳಿತ ಮಂಡಳಿಯ ತೀರ್ಮಾನ ಕೈಗೊಂಡು ತುಪ್ಪ ಖರೀದಿಸಲಾಗುತ್ತದೆ.

ತುಪ್ಪದ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳದೆ ಪರೀಕ್ಷಿಸಲು ಟಿಟಿಡಿ ತಿರುಮಲದಲ್ಲಿ ಅತ್ಯಾಧುನಿಕ ಪ್ರಯೋಗಾಲಯವನ್ನು ಸಹ ಸ್ಥಾಪಿಸಿದೆ. ಪ್ರತಿ 6 ತಿಂಗಳಿಗೊಮ್ಮೆ ಟೆಂಡರ್ ಕರೆದು ಇ-ಪ್ರೊಕ್ಯೂರ್‌ಮೆಂಟ್ ಮೂಲಕ ತುಪ್ಪವನ್ನು ಸಂಗ್ರಹಿಸುತ್ತದೆ. ಆ ಮಟ್ಟಿಗೆ ಪ್ರತಿ ವರ್ಷ ಎರಡು ಬಾರಿ ಟೆಂಡರ್ ಕರೆಯಲಾಗುತ್ತದೆ. ಟಿಟಿಡಿ ಮಾರ್ಚ್ 2023 ರಲ್ಲಿ 20 ಲಕ್ಷ ಕೆಜಿ ತುಪ್ಪವನ್ನು ಖರೀದಿಸಲು ಟೆಂಡರ್‌ಗಳನ್ನು ಆಹ್ವಾನಿಸಿತು ಮತ್ತು ಅದರಲ್ಲಿ ಭಾಗವಹಿಸಿದ್ದ ಆರು ಸಂಸ್ಥೆಗಳ ಪೈಕಿ ಎರಡನ್ನು ಆಯ್ಕೆ ಮಾಡಿದೆ.

ಉತ್ತರ ಪ್ರದೇಶದ 1-1 ಮತ್ತು 1-2 ಆಲ್ಫಾ ಕಂಪನಿಗಳ ಪ್ರೀಮಿಯರ್‌ ತುಪ್ಪವನ್ನು ಪೂರೈಸಲು ಅರ್ಹತೆ ಪಡೆದಿವೆ ಮತ್ತು ಒಂದು ಕೆಜಿ ತುಪ್ಪದ ಧಾರನೆ 424 ರೂಪಾಯಿಯಿದೆ. ಅದರಂತೆ ಟಿಟಿಡಿಗೆ ಸರಬರಾಜು ಮಾಡಲು ಒಪ್ಪಂದ ಮಾಡಿಕೊಂಡಿದೆ. ಎಲ್-1ರಿಂದ ಶೇ. 65ರಷ್ಟು ಮತ್ತು 1-2 ಶ್ರೇಣಿಯಲ್ಲಿ ಶೇ. 35ರಷ್ಟು ತುಪ್ಪವನ್ನು ಖರೀದಿಸುತ್ತಿರುವ ಟಿಟಿಡಿ, ಇನ್ನೂ 6 ತಿಂಗಳ ಕಾಲ 20 ಲಕ್ಷ ಕೆಜಿ ತುಪ್ಪ ಖರೀದಿಗೆ ಅಕ್ಟೋಬರ್ ತಿಂಗಳಲ್ಲಿ ಮತ್ತೆ ಟೆಂಡರ್ ಕರೆಯಲಿದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ: ತಿರುಪತಿ ಲಡ್ಡುಗೆ ನಂದಿನಿ ತು‍ಪ್ಪ ಸ್ಥಗಿತ, ಬಿಜೆಪಿ ಆರೋಪಗಳಿಗೆ ಕೆಎಂಎಫ್ ಅಧ್ಯಕ್ಷ ತಿರುಗೇಟು

ಆದಾಗ್ಯೂ, ಮಾರ್ಚ್ 2021 ರವರೆಗೆ, ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್ ತುಪ್ಪವನ್ನು ಟಿಟಿಡಿಗೆ ಸರಬರಾಜು ಮಾಡಲಾಗಿದೆ. ಮಾರ್ಚ್ 2021 ರಲ್ಲಿ ನಡೆದ ಟೆಂಡರ್‌ಗಳಲ್ಲಿ 1-3 ಶ್ರೇಣಿಯಲ್ಲಿದ್ದ ಕರ್ನಾಟಕ ಹಾಲು ಒಕ್ಕೂಟವು ಎಲ್ -1 ಮತ್ತು ಎಲ್ -2 ಅನುಮತಿಯೊಂದಿಗೆ ಟಿಟಿಡಿಗೆ 20 ಲಕ್ಷ ಕೆಜಿ ತುಪ್ಪದಲ್ಲಿ ಕೇವಲ 20 ಪ್ರತಿಶತವನ್ನು ಮಾತ್ರ ಪೂರೈಸಿದೆ. ಆ ನಂತರ ಟೆಂಡರ್ ಪ್ರಕ್ರಿಯೆಯಲ್ಲಿಯೇ ಭಾಗವಹಿಸದ ಕರ್ನಾಟಕ ಹಾಲು ಮಹಾಮಂಡಳ ಟಿಟಿಡಿಗೆ ಕಡಿಮೆ ಬೆಲೆಗೆ ತುಪ್ಪ ಪೂರೈಕೆ ಮಾಡಬೇಕಂತೆ, ಅದು ಸಾಧ್ಯವಾಗಿಲ್ಲ ಎಂಬ ಸಬೂಬು ಹೇಳಿದೆ ಎಂದು ಟಿಟಿಡಿ ಕಿಡಿಕಾರಿದೆ.

ಟಿಟಿಡಿಗೆ ತುಪ್ಪ ಪೂರೈಕೆಯಿಂದ ನಷ್ಟವಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷರು ಮಾಡಿರುವ ಆರೋಪದ ಬಗ್ಗೆಯೂ ಟಿಟಿಡಿ ಪ್ರತಿಕ್ರಿಯಿಸಿದೆ. ಶ್ರೀವಾರಿ ದೇವಸ್ಥಾನದಲ್ಲಿ ಪ್ರಸಾದ ತಯಾರಿಕೆಗೆ ವರ್ಷಕ್ಕೆ 5000 ಟನ್ ತುಪ್ಪವನ್ನು ಬಳಸುವ ಟಿಟಿಡಿ, ಇ-ಪ್ರೊಕ್ಯೂರ್‌ಮೆಂಟ್ ಮೂಲಕವಷ್ಟೇ ಎಲ್ಲಾ ತುಪ್ಪವನ್ನು ಖರೀದಿಸುವುದಾಗಿ ತಿಳಿಸಿದೆ. ತುಪ್ಪದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ದೇಶಾದ್ಯಂತ ಅರ್ಹ ಪೂರೈಕೆದಾರರಿಂದ ಮಾತ್ರವೇ ತುಪ್ಪವನ್ನು ಸಂಗ್ರಹಿಸುತ್ತದೆ ಎಂದು ಹೇಳಿದೆ. ಕರ್ನಾಟಕ ಹಾಲು ಮಹಾಮಂಡಳ 20 ವರ್ಷಗಳಿಂದ ಟಿಟಿಡಿಗೆ ತುಪ್ಪ ಪೂರೈಕೆ ಮಾಡುತ್ತಿದೆ ಎನ್ನುವುದು ಸರಿಯಲ್ಲ, ಕೇವಲ ಕಡಿಮೆ ಬೆಲೆ ನಮೂದಿಸಿದ ಎಲ್-1 ಗುತ್ತಿಗೆದಾರರಿಂದ ಮಾತ್ರವೇ ನಾವು ಸರಬರಾಜು ಪಡೆಯುತ್ತಿದ್ದೇವೆ ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಹಾಲು ಮಹಾಮಂಡಳವು 2023ರ ಮಾರ್ಚ್‌ನಲ್ಲಿ ತುಪ್ಪ ಖರೀದಿಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ. ಟಿಟಿಡಿ ಸರ್ಕಾರಿ ಸಂಸ್ಥೆಯಾಗಿರುವುದರಿಂದ ನಾಮನಿರ್ದೇಶನ ವಿಧಾನದ ಮೂಲಕ ಯಾರಿಂದಲೂ ನೇರವಾಗಿ ತುಪ್ಪ ಖರೀದಿಸಲು ಸಾಧ್ಯವಿಲ್ಲ ಎಂದು ಟಿಟಿಡಿ ಇಒ ಧರ್ಮ ರೆಡ್ಡಿ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ