ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿ ದುರಹಂಕಾರಿ, ಒಂದು ಚೂರು ಪಶ್ಚಾತಾಪವಿಲ್ಲ: ಪೂರ್ಣೇಶ್ ಮೋದಿ
‘ಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆ’ ಎಂಬ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸುವ ಬದಲು ದುರಹಂಕಾರ ತೋರಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ದೂರುದಾರ ಬಿಜೆಪಿ ನಾಯಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಈ ಕುರಿತು ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ.

ಗಾಂಧಿಯವರು ತಮ್ಮ ಅಜಾಗರೂಕ ಮತ್ತು ದುರುದ್ದೇಶಪೂರಿತ ಮಾತುಗಳಿಂದ ಸಂಪೂರ್ಣವಾಗಿ ನಿಷ್ಕಳಂಕ ವರ್ಗದ ವ್ಯಕ್ತಿಗಳನ್ನು ಕೆಣಕಿದ್ದಾರೆ, ಮೋದಿ ಉಪನಾಮ ಟೀಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಶಿಕ್ಷೆ ವಿಧಿಸುವುದನ್ನು ತಡೆಯಬೇಕೆಂದು ಗಾಂಧಿಯವರು ಮಾಡಿದ ಮನವಿಯ ವಿರುದ್ಧ ವಾದಿಸುವಾಗ ದೂರುದಾರರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಮತ್ತಷ್ಟು ಓದಿ: ಮೋದಿ ಉಪನಾಮ ಪ್ರಕರಣದಲ್ಲಿ ಸಾವರ್ಕರ್ ವಿಷಯ ಪ್ರಸ್ತಾಪಿಸಿದ ಗುಜರಾತ್ ಹೈಕೋರ್ಟ್; ಕಾಂಗ್ರೆಸ್ ಕಿಡಿ
ವಿಚಾರಣಾ ನ್ಯಾಯಾಲಯದ ಮುಂದೆ ಶಿಕ್ಷೆ ವಿಧಿಸುವ ಸಮಯದಲ್ಲಿ ಅರ್ಜಿದಾರರಲ್ಲಿ ಯಾವುದೇ ಪಶ್ಚಾತಾಪ ಕಾಣಲಿಲ್ಲ, ಅದರ ಬದಲು ದುರಹಂಕಾರ ಪ್ರದರ್ಶಿಸಿದ್ದರು.
ಬಿಜೆಪಿ ಶಾಸಕ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು, ಅದರಲ್ಲಿ ಅವರು ದೋಷಿ ಎಂದು ಸಾಬೀತಾಯಿತು, ಇದು ಲೋಕಸಭಾ ಸಂಸದರಾಗಿ ಅನರ್ಹತೆಗೆ ಕಾರಣವಾಯಿತು.
2019ರ ಲೋಕಸಭಾ ಚುನಾವಣೆಯ ವೇಳೆ ಕೋಲಾರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ರಾಹುಲ್ ಗಾಂಧಿ ಮಾತನಾಡಿ ‘ನನಗೊಂದು ಪ್ರಶ್ನೆ ಇದೆ, ನೀರವ್ ಮೋದಿಯಾಗಲಿ, ಲಲಿತ್ ಮೋದಿಯಾಗಲಿ, ನರೇಂದ್ರ ಮೋದಿಯಾಗಲಿ ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಉಪನಾಮ ಏಕಿದೆ’ ಎಂದು ಪ್ರಶ್ನಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ