ಕೊರೊನಾ ಸಂಕಷ್ಟ ಕಾಲದಲ್ಲಿ ಅಂಬಾನಿ ಜಿಯೋಗೆ ಸುಗ್ಗಿಯೋ ಸುಗ್ಗಿ

ಮುಂಬೈ: ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಅರ್ಥಿಕತೆ ತತ್ತರಿಸುತ್ತಿದೆ. ಈ ಮಧ್ಯೆ, ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ರಿಲಯನ್ಸ್​ಗೆ ಕನಕವೃಷ್ಟಿಯಾಗತೊಡಗಿದೆ. ಒಟ್ಟಿನಲ್ಲಿ ಭಾರತದ ಕಂಪನಿಗಳಲ್ಲಿ ಹಣ ಹೂಡಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ಮೊನ್ನೆಯಷ್ಟೇ ಫೇಸ್​ಬುಕ್​ನ ಮತ್ತೊಬ್ಬ ಬಲಿಷ್ಠ ಕೋಟ್ಯಧಿಪತಿ ಮಾರ್ಕ್​ ಝುಕರ್​ಬರ್ಗ್​ ಒಂದೇ ಏಟಿಗೆ ಕೋಟಿ ಮೊತ್ತವನ್ನು ಅಂಬಾನಿ ಒಡೆತನದ ಜಿಯೋ ರಿಲಯನ್ಸ್ ಹಣ ಸುರಿದರು. ಈಗ ಕನಕವೃಷ್ಟಿ ಸರಿಸತೊಡಗಿದೆ. ಅಮೆರಿಕದ ಸಿಲ್ವರ್ ಲೇಕ್ ಕಂಪನಿ ಕೂಡಾ ಜಿಯೋದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ. ಜಿಯೋ ಕಂಪನಿಯಲ್ಲಿ […]

ಕೊರೊನಾ ಸಂಕಷ್ಟ ಕಾಲದಲ್ಲಿ ಅಂಬಾನಿ ಜಿಯೋಗೆ ಸುಗ್ಗಿಯೋ ಸುಗ್ಗಿ
ಸಾಧು ಶ್ರೀನಾಥ್​

Updated on: May 04, 2020 | 11:57 AM

ಮುಂಬೈ: ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಅರ್ಥಿಕತೆ ತತ್ತರಿಸುತ್ತಿದೆ. ಈ ಮಧ್ಯೆ, ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ರಿಲಯನ್ಸ್​ಗೆ ಕನಕವೃಷ್ಟಿಯಾಗತೊಡಗಿದೆ. ಒಟ್ಟಿನಲ್ಲಿ ಭಾರತದ ಕಂಪನಿಗಳಲ್ಲಿ ಹಣ ಹೂಡಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

ಮೊನ್ನೆಯಷ್ಟೇ ಫೇಸ್​ಬುಕ್​ನ ಮತ್ತೊಬ್ಬ ಬಲಿಷ್ಠ ಕೋಟ್ಯಧಿಪತಿ ಮಾರ್ಕ್​ ಝುಕರ್​ಬರ್ಗ್​ ಒಂದೇ ಏಟಿಗೆ ಕೋಟಿ ಮೊತ್ತವನ್ನು ಅಂಬಾನಿ ಒಡೆತನದ ಜಿಯೋ ರಿಲಯನ್ಸ್ ಹಣ ಸುರಿದರು. ಈಗ ಕನಕವೃಷ್ಟಿ ಸರಿಸತೊಡಗಿದೆ.

ಅಮೆರಿಕದ ಸಿಲ್ವರ್ ಲೇಕ್ ಕಂಪನಿ ಕೂಡಾ ಜಿಯೋದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ. ಜಿಯೋ ಕಂಪನಿಯಲ್ಲಿ ಶೇ. 1.15 ರಷ್ಟು ಪಾಲನ್ನು ಸಿಲ್ವರ್ ಲೇಕ್ ಕಂಪನಿ ಖರೀದಿಸಿದೆ. 5,655 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದೆ.

Published On - 11:54 am, Mon, 4 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us