ದೆಹಲಿ ವಿಮಾನ ನಿಲ್ದಾಣದಲ್ಲಿ ನಕಲಿ ಪೈಲಟ್​ನ ಬಂಧನ

|

Updated on: Apr 28, 2024 | 10:39 AM

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಪೈಲಟ್​ ಸಂಗೀತ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊರಳಲ್ಲಿ ಗುರುತಿನ ಚೀಟಿಯನ್ನೂ ಹಾಕಿಕೊಂಡಿದ್ದ. ಆದರೆ, ಸಿಐಎಸ್‌ಎಫ್ ಸಿಬ್ಬಂದಿಗೆ ಈ ವ್ಯಕ್ತಿಯ ಮೇಲೆ ಅನುಮಾನ ಬಂದಿದ್ದು, ವಿಚಾರಣೆ ವೇಳೆ ಆತ ಪೈಲಟ್ ಅಲ್ಲ ಎಂಬುದು ಬೆಳಕಿಗೆ ಬಂದಿದೆ

ದೆಹಲಿ ವಿಮಾನ ನಿಲ್ದಾಣದಲ್ಲಿ ನಕಲಿ ಪೈಲಟ್​ನ ಬಂಧನ
Follow us on

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಪೈಲಟ್‌ನನ್ನು ಬಂಧಿಸಲಾಗಿದೆ. ಸಂಗೀತ್ ಸಿಂಗ್ ಎಂಬ ವ್ಯಕ್ತಿ ಪೈಲಟ್ ಸಮವಸ್ತ್ರವನ್ನು ಧರಿಸಿದ್ದರು. ತಾನು ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಪೈಲಟ್ ಆಗಿದ್ದೇನೆ ಎಂದು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್) ಸಿಬ್ಬಂದಿಗೆ ತಿಳಿಸಿದ್ದ.

ಕೊರಳಲ್ಲಿ ಗುರುತಿನ ಚೀಟಿಯನ್ನೂ ಹಾಕಿಕೊಂಡಿದ್ದ. ಆದರೆ, ಸಿಐಎಸ್‌ಎಫ್ ಸಿಬ್ಬಂದಿಗೆ ಈ ವ್ಯಕ್ತಿಯ ಮೇಲೆ ಅನುಮಾನ ಬಂದಿದ್ದು, ವಿಚಾರಣೆ ವೇಳೆ ಆತ ಪೈಲಟ್ ಅಲ್ಲ ಎಂಬುದು ಬೆಳಕಿಗೆ ಬಂದಿದೆ. ಇದರ ನಂತರ, ಸಿಐಎಸ್ಎಫ್ ಈ ನಕಲಿ ಪೈಲಟ್ ಅನ್ನು ಹಿಡಿದು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿತು.

ಇಂಡಿಯಾ ಟುಡೆಯ ಹಿಮಾಂಶು ಮಿಶ್ರಾ ವರದಿಯ ಪ್ರಕಾರ, ಘಟನೆ ಏಪ್ರಿಲ್ 25 ರಂದು ನಡೆದಿದೆ. ಮೆಟ್ರೋ ಸ್ಕೈವಾಕ್ ಪ್ರದೇಶದಲ್ಲಿ ಪೈಲಟ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬರು ತಿರುಗಾಡುತ್ತಿರುವುದನ್ನು ಸಿಐಎಸ್‌ಎಫ್ ಸಿಬ್ಬಂದಿ ನೋಡಿದ್ದರು. ಈ ವ್ಯಕ್ತಿ ತನ್ನನ್ನು ಏರ್‌ಲೈನ್ಸ್ ಕಂಪನಿಯ ಪೈಲಟ್ ಎಂದು ಹೇಳಿಕೊಂಡಿದ್ದ.

ಮತ್ತಷ್ಟು ಓದಿ: Dhruva Sarja: ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ, ‘ಮಾರ್ಟಿನ್’ ತಂಡ

ಆರೋಪಿ ಸಂಗೀತ್ ಸಿಂಗ್ ಏವಿಯೇಷನ್ ​​ಹಾಸ್ಪಿಟಾಲಿಟಿಯಲ್ಲಿ ಒಂದು ವರ್ಷದ ಕೋರ್ಸ್ ಮಾಡಿದ್ದಾರೆ. ಆರೋಪಿಗಳು 2020ರಲ್ಲಿ ಈ ಕೋರ್ಸ್ ಮಾಡಿದ್ದ. ಆದರೆ ತಾನು ಪೈಲಟ್ ಎಂದು ಮನೆಯವರಿಗೆ ಸುಳ್ಳು ಹೇಳಿದ್ದಾನೆ. ಈ ಮೂಲಕ ಆರೋಪಿಯು ಪೈಲಟ್ ಕೆಲಸ ಮಾಡುವುದಾಗಿ ಹೇಳಿಕೊಂಡು ತನ್ನ ಸ್ನೇಹಿತರು ಮತ್ತು ಕುಟುಂಬದವರನ್ನು ದಾರಿ ತಪ್ಪಿಸುತ್ತಿದ್ದ.

ಸಂಗೀತ್ ಸಿಂಗ್ ನನ್ನು ಬಂಧಿಸಲಾಗಿದೆ. ಆತನ ವಿರುದ್ಧ ವಂಚನೆ, ಫೋರ್ಜರಿ ಮತ್ತು ನಕಲಿ ದಾಖಲೆಗಳ ಬಳಕೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೆಹಲಿ ಪೊಲೀಸರು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.

ಸಂದೀಪ್ ಸಿಂಗ್ ಮೇಲೆ ನಿಗಾ ಇರಿಸಿದ್ದ ಸಿಐಎಸ್​ಎಫ್​ ವಿಮಾನ ನಿಲ್ದಾಣದ ಒಂದೇ ದಾರಿಯಲ್ಲಿ ಹಲವು ಬಾರಿ ಅಡ್ಡಾಡುವುದನ್ನು ಗಮನಿಸಿ, ತೀವ್ರ ವಿಚಾರಣೆಗೊಳಪಡಿಸಿದಾಗ ನಕಲಿ ಪೈಲಟ್ ಎನ್ನುವ ವಿಚಾರ ಹೊರಗೆ ಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ