ರಾಜ್ಯೋತ್ಸವ ಸಂಭ್ರಮದ ಮಧ್ಯೆ ವಿಷಾದ, ಸಿಂಗರೇಣಿ ಘಟಕದಲ್ಲಿ ನಾಲ್ವರು ಕಾರ್ಮಿಕರ ಸಾವು

ಹೈದರಾಬಾದ್: ಇಡೀ ತೆಲಂಗಾಣ‌, ರಾಜ್ಯೋತ್ಸವ ಆಚರಣೆ ಸಂಭ್ರಮದಲ್ಲಿರುವಾಗ ಪೆದ್ದಪಲ್ಲಿ‌ ಜಿಲ್ಲೆಯಲ್ಲಿ‌ ದಾರುಣ ಘಟನೆಯೊಂದು ನಡೆದಿದೆ. ಸಿಂಗರೇಣಿ ಮೈನಿಂಗ್ ಕೇಂದ್ರದ ಓಪಿಸಿ ಘಟಕ 1ರಲ್ಲಿ ಬ್ಲಾಸ್ಟಿಂಗ್ ಮಾಡುವಾಗ ದುರ್ಘಟನೆ ಸಂಭವಿಸಿದ್ದು, ನಾಲ್ವರು ಗುತ್ತಿಗೆ ಕಾರ್ಮಿಕರು‌ ಸಾವಿಗೀಡಾಗಿದ್ದಾರೆ. ಘಟನೆಗೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಇನ್ನೂ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿದ್ದು, ಸ್ಥಳೀಯ (ಗೋದಾವರಿ) ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಕಾರ್ಮಿಕರನ್ನು ಬಂಡಾರಿ ಪ್ರವೀಣ, ರಾಜೇಶ ಕಮಂಪುರ, ಅಂಜಯ್ಯ, ರಾಕೇಶ ಎಂದು ಗುರುತಿಸಲಾಗಿದೆ.

ರಾಜ್ಯೋತ್ಸವ ಸಂಭ್ರಮದ ಮಧ್ಯೆ ವಿಷಾದ, ಸಿಂಗರೇಣಿ ಘಟಕದಲ್ಲಿ ನಾಲ್ವರು ಕಾರ್ಮಿಕರ ಸಾವು
Follow us
ಸಾಧು ಶ್ರೀನಾಥ್​
|

Updated on:Jun 02, 2020 | 1:45 PM

ಹೈದರಾಬಾದ್: ಇಡೀ ತೆಲಂಗಾಣ‌, ರಾಜ್ಯೋತ್ಸವ ಆಚರಣೆ ಸಂಭ್ರಮದಲ್ಲಿರುವಾಗ ಪೆದ್ದಪಲ್ಲಿ‌ ಜಿಲ್ಲೆಯಲ್ಲಿ‌ ದಾರುಣ ಘಟನೆಯೊಂದು ನಡೆದಿದೆ. ಸಿಂಗರೇಣಿ ಮೈನಿಂಗ್ ಕೇಂದ್ರದ ಓಪಿಸಿ ಘಟಕ 1ರಲ್ಲಿ ಬ್ಲಾಸ್ಟಿಂಗ್ ಮಾಡುವಾಗ ದುರ್ಘಟನೆ ಸಂಭವಿಸಿದ್ದು, ನಾಲ್ವರು ಗುತ್ತಿಗೆ ಕಾರ್ಮಿಕರು‌ ಸಾವಿಗೀಡಾಗಿದ್ದಾರೆ. ಘಟನೆಗೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಇನ್ನೂ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿದ್ದು, ಸ್ಥಳೀಯ (ಗೋದಾವರಿ) ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಕಾರ್ಮಿಕರನ್ನು ಬಂಡಾರಿ ಪ್ರವೀಣ, ರಾಜೇಶ ಕಮಂಪುರ, ಅಂಜಯ್ಯ, ರಾಕೇಶ ಎಂದು ಗುರುತಿಸಲಾಗಿದೆ.

Published On - 1:06 pm, Tue, 2 June 20