ಇನ್ಮುಂದೆ ಹೇರ್ ಕಟಿಂಗ್, ಬ್ಯೂಟಿ ಪಾರ್ಲರ್ಗೂ ಆಧಾರ್ ಕಡ್ಡಾಯ!
ಚೆನ್ನೈ: ಕೊರೊನಾ ಕ್ರಿಮಿಯಿಂದ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿತ್ತು. ಸುಮಾರು 3 ತಿಂಗಳ ಬಳಿಕ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ಎಲ್ಲ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. ಆದ್ರೆ ಸಲೂನ್ ಅಂಗಡಿಗಳಲ್ಲಿ ಹೇರ್ಕಟ್ ಮಾಡಿಸಿಕೊಳ್ಳಬೇಕೆಂದರೆ ನೀವು ಆಧಾರ್ ಕಾರ್ಡ್ ನೀಡಲೇಬೇಕು. ಹೌದು, ಕೊರೊನಾ ಸಾಂಕ್ರಾಮಿಕ ರೋಗವಾಗಿರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತೆ. ಹೀಗಾಗಿ ಸಲೂನ್ ಅಂಗಡಿಗಳಿಗೆ ನಿತ್ಯ ನೂರಾರು ಜನ ಬರ್ತಾರೆ. ಅದರಲ್ಲಿ ಒಬ್ಬರಿಗೆ ಕೊರೊನಾ ಬಂದ್ರೂ ಬೇರೆಯವರನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಹೀಗಾಗಿ ಸಲೂನ್ಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ತಮಿಳುನಾಡು ಸರ್ಕಾರ ಆದೇಶಿಸಿದೆ. […]
ಚೆನ್ನೈ: ಕೊರೊನಾ ಕ್ರಿಮಿಯಿಂದ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿತ್ತು. ಸುಮಾರು 3 ತಿಂಗಳ ಬಳಿಕ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ಎಲ್ಲ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. ಆದ್ರೆ ಸಲೂನ್ ಅಂಗಡಿಗಳಲ್ಲಿ ಹೇರ್ಕಟ್ ಮಾಡಿಸಿಕೊಳ್ಳಬೇಕೆಂದರೆ ನೀವು ಆಧಾರ್ ಕಾರ್ಡ್ ನೀಡಲೇಬೇಕು. ಹೌದು, ಕೊರೊನಾ ಸಾಂಕ್ರಾಮಿಕ ರೋಗವಾಗಿರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತೆ. ಹೀಗಾಗಿ ಸಲೂನ್ ಅಂಗಡಿಗಳಿಗೆ ನಿತ್ಯ ನೂರಾರು ಜನ ಬರ್ತಾರೆ.
ಅದರಲ್ಲಿ ಒಬ್ಬರಿಗೆ ಕೊರೊನಾ ಬಂದ್ರೂ ಬೇರೆಯವರನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಹೀಗಾಗಿ ಸಲೂನ್ಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ತಮಿಳುನಾಡು ಸರ್ಕಾರ ಆದೇಶಿಸಿದೆ. ಇನ್ಮುಂದೆ ಚೆನ್ನೈನಲ್ಲಿ ಹೇರ್ ಕಟ್ ಮಾಡಿಸಿಕೊಳ್ಳುವ ಮೊದಲೇ ಆಧಾರ್ ಕಾರ್ಡ್ ನೀಡಬೇಕಿದೆ. ಹೆಸರು, ಮೊಬೈಲ್ ನಂಬರ್, ವಿಳಾಸ ಬರೆದು ಕಟಿಂಗ್ ಮಾಡಿಸಿಕೊಳ್ಳಬೇಕು.
ಸಲೂನ್ ಹಾಗೂ ಬ್ಯೂಟಿ ಪಾರ್ಲರ್ಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಲ್ಲಿ ಜನ ಇರುವಂತಿಲ್ಲ. ಕಟ್ಟಕಡೆಯದಾಗಿ ಕಾಡುವ ಪ್ರಶ್ನೆಯೆಂದರೆ ಆಧಾರ್ ಕಾರ್ಡ್ ಇಲ್ಲದವರು ಬ್ಯೂಟಿ ಪಾರ್ಲರ್ ಹಾಗೂ ಕಟಿಂಗ್, ಶೇವಿಂಗ್ ಹೇಗೆ ಮಾಡಿಸಬೇಕು?
Published On - 11:31 am, Tue, 2 June 20