ಮುಂಬೈನಿಂದ ರಾಜ್ಯಕ್ಕೆ ‘ಕೊರೊನಾ ಎಕ್ಸ್ಪ್ರೆಸ್’ ರಾಜಧಾನಿ ಬೆಂಗಳೂರಿಗೆ ಕಾದಿದೆ ಮಹಾಘಾತ!
ಬೆಂಗಳೂರು: ಕೊರೊನಾ ಹಾವಳಿಗೆ ಇಡೀ ರಾಜ್ಯಕ್ಕೆ ರಾಜ್ಯವೇ ಪತರಗುಟ್ಟಿ ಹೋಗಿದೆ. ರಾಜಧಾನಿ ಬೆಂಗಳೂರಂತೂ ಹಿಂಡಿ ಹಿಪ್ಪೆಯಾಗಿದೆ. ಕಂದಮ್ಮಗಳಿಂದ ಹಿಡಿದು ವೃದ್ಧರವರೆಗೆ ಎಲ್ರೂ ಮಹಾಮಾರಿಯ ಸುಳಿಗೆ ಸಿಲುಕಿ ನಲುಗಿ ಹೋಗ್ತಿದ್ದಾರೆ. ಎಷ್ಟೇ ಸರ್ಕಸ್ ಮಾಡಿದ್ರೂ ಕ್ರೂರಿಯ ನಾಗಲೋಟ ಮಾತ್ರ ನಿಲ್ತಾನೇ ಇಲ್ಲ. ಇಷ್ಟು ದಿನ ಕೊರೊನಾ ನಿಯಂತ್ರಿಸುವಲ್ಲಿ ಮಹಾರಾಷ್ಟ್ರ, ಗುಜರಾತ್ಗಿಂತ ನಾವ್ ಬೆಟರ್ ಅಂತಾ ಸರ್ಕಾರ ಬೆನ್ನು ತಟ್ಟಿಕೊಳ್ತಿತ್ತು. ಆದ್ರೆ ಇನ್ಮುಂದೆ ಈ ಚಾನ್ಸೇ ಇಲ್ಲ. ರಾಜ್ಯದಲ್ಲಿ ಕೂಡ ಕೊರೊನಾ ಹಳಿತಪ್ಪೋ ಟೈಂ ಎದುರಾಗೇ ಬಿಟ್ಟಿದೆ. ಮುಂಬೈನಿಂದ ರಾಜ್ಯಕ್ಕೆ […]
ಬೆಂಗಳೂರು: ಕೊರೊನಾ ಹಾವಳಿಗೆ ಇಡೀ ರಾಜ್ಯಕ್ಕೆ ರಾಜ್ಯವೇ ಪತರಗುಟ್ಟಿ ಹೋಗಿದೆ. ರಾಜಧಾನಿ ಬೆಂಗಳೂರಂತೂ ಹಿಂಡಿ ಹಿಪ್ಪೆಯಾಗಿದೆ. ಕಂದಮ್ಮಗಳಿಂದ ಹಿಡಿದು ವೃದ್ಧರವರೆಗೆ ಎಲ್ರೂ ಮಹಾಮಾರಿಯ ಸುಳಿಗೆ ಸಿಲುಕಿ ನಲುಗಿ ಹೋಗ್ತಿದ್ದಾರೆ. ಎಷ್ಟೇ ಸರ್ಕಸ್ ಮಾಡಿದ್ರೂ ಕ್ರೂರಿಯ ನಾಗಲೋಟ ಮಾತ್ರ ನಿಲ್ತಾನೇ ಇಲ್ಲ. ಇಷ್ಟು ದಿನ ಕೊರೊನಾ ನಿಯಂತ್ರಿಸುವಲ್ಲಿ ಮಹಾರಾಷ್ಟ್ರ, ಗುಜರಾತ್ಗಿಂತ ನಾವ್ ಬೆಟರ್ ಅಂತಾ ಸರ್ಕಾರ ಬೆನ್ನು ತಟ್ಟಿಕೊಳ್ತಿತ್ತು. ಆದ್ರೆ ಇನ್ಮುಂದೆ ಈ ಚಾನ್ಸೇ ಇಲ್ಲ. ರಾಜ್ಯದಲ್ಲಿ ಕೂಡ ಕೊರೊನಾ ಹಳಿತಪ್ಪೋ ಟೈಂ ಎದುರಾಗೇ ಬಿಟ್ಟಿದೆ.
ಮುಂಬೈನಿಂದ ರಾಜ್ಯಕ್ಕೆ ‘ಕೊರೊನಾ ಎಕ್ಸ್ಪ್ರೆಸ್’! ಅಂದ್ಹಾಗೇ, ಮುಂಬೈ ಕೊರೊನಾದ ಡೆಡ್ಲಿ ಸ್ಪಾಟ್. ಅದ್ರಲ್ಲೂ ಧಾರಾವಿ ಸ್ಲಂ ಅಂತೂ ಮತ್ತೊಂದು ವುಹಾನ್ ಆಗಿದೆ. ಕೊರೊನಾ ವಿಷಜಾಲಕ್ಕೆ ಇಲ್ಲಿ ಅದೆಷ್ಟು ಮಂದಿ ಬಲಿಯಾಗಿದ್ದಾರೋ ಲೆಕ್ಕಕ್ಕೇ ಸಿಕ್ತಾನೇ ಇಲ್ಲ. ಇಲ್ಲಿ ಸದ್ಯ ಸೋಂಕಿತರ ಸಂಖ್ಯೆ 70 ಸಾವಿರ ಗಡಿ ದಾಟಿದೆ. ಬರೋಬ್ಬರಿ 2360ಕ್ಕೂ ಹೆಚ್ಚು ಮಂದಿ ಕೊರೊನಾಗೆ ಕೊನೆಯುಸಿರೆಳೆದಿದ್ದಾರೆ. ಮುಂಬೈನಿಂದ ಬಂದವರೇ ರಾಜ್ಯಕ್ಕೂ ಕಂಟಕವಾಗಿದ್ದಾರೆ. ಇದ್ರ ಬೆನ್ನಲ್ಲೇ ಕೊರೊನಾ ಫ್ಯಾಕ್ಟರಿಯಾಗಿರೋ ಮುಂಬೈನಿಂದ ಬೆಂಗಳೂರಿಗಿಂದು ಉದ್ಯಾನ್ ಎಕ್ಸ್ಪ್ರೆಸ್ ಎಂಟ್ರಿಯಾಗ್ತಿದೆ. ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ನಿಂದ 1200ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನ ಹೊತ್ತು ಬರ್ತಿರೋ ರೈಲು ಬೆಳಗ್ಗೆ 8:50ಕ್ಕೆ ಸಂಗೊಳ್ಳಿ ರಾಯಣ್ಣ ನಿಲ್ದಾಣ ತಲುಪಲಿದೆ. ಇದ್ರಿಂದ ಬೆಂಗ್ಳೂರಲ್ಲಿ ವೈರಸ್ ಬಾಂಬ್ ದೊಡ್ಡ ಮಟ್ಟದಲ್ಲಿ ಸ್ಫೋಟವಾಗೋ ಭೀತಿ ಶುರುವಾಗಿದೆ.
ರಾಜ್ಯ ಸರ್ಕಾರಕ್ಕೆ ಮುಂಬೈನಿಂದ ಬರುವವರದ್ದೇ ಟೆನ್ಷನ್! ಇನ್ನು ಮುಂಬೈ ಅಷ್ಟೇ ಅಲ್ಲದೆ ಎಲ್ಲಾ ರಾಜ್ಯಗಳಿಂದಲೂ ರೈಲು ಸೇವೆ ಆರಂಭವಾಗಿದೆ. ಇದ್ರಿಂದ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ. ಸದ್ಯ ರಾಜ್ಯದಲ್ಲಿರೋ ಕೊರೊನಾ ಕೇಸ್ಗಳಲ್ಲಿ ಶೇ. 70ರಷ್ಟು ಮಂದಿ ಹೊರರಾಜ್ಯದ ಟ್ರಾವೆಲ್ ಹಿಸ್ಟರಿ ಇರೋರಿದ್ದಾರೆ. ಈ ಪೈಕಿ ಶೇ. 40ರಷ್ಟು ಮಂದಿ ಮಹಾರಾಷ್ಟ್ರದಿಂದ ಬಂದವರಿದ್ದಾರೆ. ಇಂಥ ಟೈಂ ಅಲ್ಲಿ ರೈಲು ಸೇವೆ ಆರಂಭಿಸಿರೋದು ಸರ್ಕಾರವನ್ನ ಅಡಕತ್ತರಿಗೆ ಸಿಲುಕಿಸಿದೆ. ಇದ್ರ ಜೊತೆಗೆ ಸರ್ಕಾರದ ಕೆಲ ನಿರ್ಧಾರಗಳೇ ಸೋಂಕು ಹೆಚ್ಚಾಗೋಕೆ ಕಾರಣವಾಗಿದೆ. ಏನ್ ಆ ಕಾರಣಗಳು ಅಂತಾ ನೋಡೋದಾದ್ರೆ
ಸರ್ಕಾರದ ‘ಮಹಾ’ ಎಡವಟ್ಟು..! ಅನುಮತಿಯಿಲ್ಲದೆ ಹೊರರಾಜ್ಯದ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಹೊರರಾಜ್ಯದಿಂದ ಬಂದವರ ಕ್ವಾರಂಟೈನ್ ಅವಧಿ ಸಡಿಲಿಕೆ ಮಾಡಲಾಗಿದೆ. ಅದ್ರಲ್ಲೂ ಮಹಾರಾಷ್ಟ್ರದಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ನಂತ್ರ 7 ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಸೂಚಿಸಲಾಗಿದೆ. ಇನ್ನು ಬೇರೆ ರಾಜ್ಯಗಳಿಂದ ಬಂದವರಿಗೆ ಕೇವಲ 7 ದಿನಗಳ ಹೋಂ ಕ್ವಾರಂಟೈನ್ ವಿಧಿಸಲಾಗಿದ್ದು, ಇದು ಸರ್ಕಾರದ ಮಹಾ ಎಡವಟ್ಟಾಗಿದೆ.
ಇನ್ನು ಮುಂಬೈನಿಂದ ಬೆಂಗಳೂರಿಗಷ್ಟೇ ಅಲ್ಲದೆ ಗದಗಿಗೂ ರೈಲು ಬರ್ತಿದೆ. ಒಂದೆಡೆ ರಾಜ್ಯ ಸರ್ಕಾರ ಮಹಾರಾಷ್ಟ್ರ& ಗುಜರಾತ್ನಿಂದ ರಸ್ತೆ ಸಂಚಾರ ನಿಷೇಧಿಸಿದೆ. ಆದ್ರೆ ಕೇಂದ್ರ ಸರ್ಕಾರ ರೈಲು ಸಂಚಾರಕ್ಕೆ ಅನುಮತಿ ಕೊಟ್ಟಿದ್ದು, ರಾಜ್ಯದ ಜನರನ್ನ ಚಿಂತೆಗೀಡು ಮಾಡಿದೆ.
Published On - 8:03 am, Tue, 2 June 20