ಖ್ಯಾತ ಗಾಯಕ SP ಬಾಲಸುಬ್ರಮಣ್ಯಂಗೆ ಸೋಂಕು, ಆಸ್ಪತ್ರೆಗೆ ದಾಖಲು

[lazy-load-videos-and-sticky-control id=”3lYkvFbB_Aw”] ಖ್ಯಾತ ಹಿನ್ನೆಲೆ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಸಂಬಂಧ ಅವರೇ ತಮಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ವಿಡಿಯೋ ಸಂದೇಶವನ್ನು ಸೋಷಿಯಲ್‌ ಮಿಡಿಯಾದಲ್ಲಿ ಹರಿಯ ಬಿಟ್ಟಿರುವ ಎಸ್‌ ಪಿ ಬಾಲಸುಬ್ರಮಣ್ಯಂ, ನನಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ವೈದ್ಯರು ನನಗೆ ಮನೆಯಲ್ಲಿಯೇ ಹೋಂ‌ ಕ್ವಾರಂಟೈನ್‌ ಆಗಲು ಹೇಳಿದ್ದರು. ಆದ್ರೂ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಇಷ್ಟವಿಲ್ಲದೇ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದಾರೆ. […]

ಖ್ಯಾತ ಗಾಯಕ SP ಬಾಲಸುಬ್ರಮಣ್ಯಂಗೆ ಸೋಂಕು, ಆಸ್ಪತ್ರೆಗೆ ದಾಖಲು
Updated By: ಆಯೇಷಾ ಬಾನು

Updated on: Aug 17, 2020 | 1:23 PM

[lazy-load-videos-and-sticky-control id=”3lYkvFbB_Aw”]

ಖ್ಯಾತ ಹಿನ್ನೆಲೆ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಸಂಬಂಧ ಅವರೇ ತಮಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ವಿಡಿಯೋ ಸಂದೇಶವನ್ನು ಸೋಷಿಯಲ್‌ ಮಿಡಿಯಾದಲ್ಲಿ ಹರಿಯ ಬಿಟ್ಟಿರುವ ಎಸ್‌ ಪಿ ಬಾಲಸುಬ್ರಮಣ್ಯಂ, ನನಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ವೈದ್ಯರು ನನಗೆ ಮನೆಯಲ್ಲಿಯೇ ಹೋಂ‌ ಕ್ವಾರಂಟೈನ್‌ ಆಗಲು ಹೇಳಿದ್ದರು. ಆದ್ರೂ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಇಷ್ಟವಿಲ್ಲದೇ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಈಗ ಆಸ್ಪತ್ರೆಯಲ್ಲಿರುವುದರಿಂದ ಯಾರೂ ನನ್ನ ಆರೋಗ್ಯ ವಿಚಾರಿಸಲು ಮೊಬೈಲ್‌ ಕರೆ ಮಾಡಿ ತೊಂದರೆ ಮಾಡಬೇಡಿ ಎಂದು ಕೂಡಾ ಅವರು ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಮನವಿ ಮಾಡಿದ್ದಾರೆ.

ಕನ್ನಡ, ಹಿಂದಿ, ತೆಲಗುಸ ತಮಿಳು ಭಾಷೆ ಸೇರಿದಂತೆ ಹಲವಾರು ಭಾರತೀಯ ಭಾಷೆಯ ಚಲನಚಿತ್ರಗಳಿಗೆ ಹಿನ್ನೆಲೆ ಗಾಯನ ಮಾಡಿರುವ ಎಸ್‌ ಪಿ ಬಾಲಸುಬ್ರಮಣ್ಯಂ, ತಮ್ಮ ಸುಮಧುರ ಕಂಠ ಸಿರಿಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Published On - 1:27 pm, Wed, 5 August 20