ದೆಹಲಿ: ಲಖ್‌ಬೀರ್ ಸಿಂಗ್ ಕೊಲೆ ಪ್ರಕರಣದಲ್ಲಿ (Lakhbir Singh murder case) ಶನಿವಾರ ಶರಣಾದ ಇಬ್ಬರು ಆರೋಪಿಗಳಾದ ಭಗವಂತ ಸಿಂಗ್ (20) ಮತ್ತು ಗೋವಿಂದ್ ಸಿಂಗ್ (25) ಜನವರಿ 26 ರಂದು ನಡೆದ ಹಿಂಸಾಚಾರದ ನಂತರ ನಿಹಾಂಗ್ (Nihang) ಗುಂಪಿನೊಂದಿಗೆ ದೆಹಲಿಯ ಸಿಂಘು ಗಡಿಗೆ ಬಂದಿದ್ದರು ಎಂದು ನಿಹಾಂಗ್ ಗುಂಪು ಹೇಳಿದೆ. ಪಂಜಾಬ್‌ನ ಫತೇಘರ್ ಸಾಹಿಬ್‌ನ ಮೊಯನ್ ಡಿ ಮಂಡಿಯ ಬಲ್ವಿಂದರ್ ಸಿಂಗ್ ನೇತೃತ್ವದ ನಿಹಾಂಗ್ ಸಂಸ್ಥೆಯ ಶಿಬಿರದಲ್ಲಿ ಗ್ರಂಥ ಅಪವಿತ್ರ ಮಾಡಿದ್ದಕ್ಕಾಗಿ ಶುಕ್ರವಾರ ಸಿಂಘು ಗಡಿಯಲ್ಲಿ ಲಖ್‌ಬೀರ್ ಸಿಂಗ್ ಎಂಬ ದಲಿತ ಸಿಖ್‌ನನ್ನು ಹತ್ಯೆ ಮಾಡಲಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಬಲ್ವಿಂದರ್ ಸಿಂಗ್, “ಲಖ್‌ಬೀರ್ ಕೆಲವು ದಿನಗಳಿಂದ ನಮ್ಮ ಶಿಬಿರಗಳನ್ನು ಸುತ್ತುತ್ತಿದ್ದ. ಅವರು ಧರ್ಮಕ್ಕಾಗಿ ತ್ಯಾಗ ಮಾಡುವ ಬಗ್ಗೆ ಮಾತನಾಡುತ್ತಿದ್ದರು. ಅವನು ನಮ್ಮೊಂದಿಗೆ ವಾಸಿಸುತ್ತಿರಲಿಲ್ಲ. ಆತ ನಮ್ಮೊಂದಿಗೆ ವಾಸಿಸುತ್ತಿದ್ದನೆಂಬುದು ಬರೀ ಪ್ರಚಾರ ಅಷ್ಟೇ. ಆದರೆ ಆತ ಸಿಂಘುವಿನಲ್ಲಿದ್ದ ಮತ್ತು ಈ ಘಟನೆಗೆ ಮುನ್ನ ಮೂರು ನಾಲ್ಕು ದಿನಗಳ ಕಾಲ ತಿರುಗಾಡುತ್ತಿದ್ದ ಎಂಬುದು ನಿಜ ಎಂದಿದ್ದಾರೆ.
“ನಾವು ಸಿಂಘುವಿನಲ್ಲಿ ಬಸ್ ನಿಲ್ಲಿಸಿ ಅಲ್ಲಿ ನಾವು ಗುರು ಗ್ರಂಥ ಸಾಹಿಬ್, ದಾಸಂ ಗ್ರಂಥ ಮತ್ತು ಸರಬ್ ಲೋಹ್ ಗ್ರಂಥ್ ಸೇರಿದಂತೆ ಎಲ್ಲಾ ಪವಿತ್ರ ಧಾರ್ಮಿಕ ಗ್ರಂಥಗಳನ್ನು ಸ್ಥಾಪಿಸಿದ್ದೇವೆ. ಲಖ್‌ಬೀರ್ ಶುಕ್ರವಾರ ಮುಂಜಾನೆ ನಮ್ಮ ಶಿಬಿರಕ್ಕೆ ಬಂದರು. ನಮ್ಮ ನಿಹಾಂಗ್ ಉಡುಪುಗಳು ಒಣಗಲು ಹಾಕಿದ್ದೆವು. ಅವನು ಅದರಲ್ಲಿ ಒಂದನ್ನು ಕದ್ದು ಧರಿಸಿದನು. ನಮ್ಮ ಅರ್ಚಕರು ಬೆಳಗಿನ ಸ್ನಾನಕ್ಕೆ ಹೋದಾಗ ಅವನು ಬಂದಿದ್ದು, ಬಸ್ ಹತ್ತಿರ ಯಾರೂ ಇರಲಿಲ್ಲ. ಅವರು ಬಸ್ಸಿನೊಳಗೆ ಬಂದು ಮತ್ತು ರುಮಾಲಾಗಳನ್ನು ತೆಗೆದುಹಾಕಿದ (ಪವಿತ್ರ ಗ್ರಂಥದ ಮೇಲಿನ ಬಟ್ಟೆ). ನಮ್ಮಲ್ಲಿ ವಿಡಿಯೊ ಇದೆ ಅದರಲ್ಲಿ ನಾವು ಬಸ್ಸಿನೊಳಗೆ ಬೆಂಕಿಪೊಟ್ಟಣ ಇರುವುದನ್ನು ನೋಡಿದ್ದೇವೆ . ಅವನು ಬೆಂಕಿಪೊಟ್ಟಣ ತಂದಿದ್ದದ್ದನು ಇತರ ವಸ್ತುಗಳು ಬಸ್ಸಿನಲ್ಲಿ ಹರಡಿಕೊಂಡಿತ್ತು. ”
ಲಖ್‌ಬೀರ್ ಸರಬ್ ಲೋಹ್ ಗ್ರಂಥವನ್ನು ದೂರಕ್ಕೆ ತೆಗೆದುಕೊಂಡು ಹೋಗಿ ಅದನ್ನು ಕೊಳಕಾದ ಸ್ಥಳದಲ್ಲಿ ಇರಿಸಿದರು. ಅರ್ಚಕರು ಹಿಂತಿರುಗಿ ಬಂದಾಗಲೇ ನಡೆದದ್ದು ಗೊತ್ತಾಗಿದ್ದು . ಏತನ್ಮಧ್ಯೆ, ಇತರ ಗುಂಪುಗಳ ನಿಹಾಂಗ್ ಲಖ್ಬೀರ್ನ ಅನುಮಾನಾಸ್ಪದ ನಡವಳಿಕೆಯನ್ನು ನೋಡಿದ್ದರು. ಲಖ್‌ಬೀರ್ ಕ್ಲೀನ್ ಶೇವ್ ಆಗಿದ್ದು, ನಿಹಾಂಗ್ ಉಡುಪನ್ನು ಧರಿಸಿದ್ದರಿಂದ ಅದು ಅನುಮಾನಗಳನ್ನು ಹುಟ್ಟುಹಾಕಿತು. ಅವನು ಸಿಕ್ಕಿಬಿದ್ದನ ನಂತರ ಏನಾಯಿತು ಎಂದು ನಮಗೆ ತಿಳಿದಿದೆ ಎಂದು ಬಲ್ವಿಂದರ್ ಹೇಳಿದ್ದಾರೆ.
“ಜನವರಿ 26 ರ ನಂತರ ನಮ್ಮ ಗುಂಪು ಸಿಂಘುಗೆ ಬಂದಿತ್ತು. ಜನವರಿ 26 ರ ನಂತರ ಸಿಂಘು ಗಡಿಯಲ್ಲಿ ರೈತ ಪ್ರತಿಭಟನಾಕಾರರ ಮೇಲೆ ಗುಂಪು ಹಲ್ಲೆ ಮಾಡಿದ ವಿಡಿಯೊಗಳನ್ನು ನಾವು ನೋಡಿದ್ದೇವೆ. ಸಿಖ್ ಜನರ ಮೇಲೆ ಸಿಂಘು ಗಡಿಯಲ್ಲಿ ದೆಹಲಿ ಪೊಲೀಸರು ಹೇಗೆ ಹೊಡೆದರು ಎಂಬ ಚಿತ್ರಗಳನ್ನು ನಾವು ನೋಡಿದ್ದೇವೆ. ಹಾಗಾಗಿ, ನಾವು ಪ್ರತಿಭಟನಾಕಾರರ ರಕ್ಷಣೆಗಾಗಿ ಇಲ್ಲಿಗೆ ಬರಲು ನಿರ್ಧರಿಸಿದೆವು. ನಾವು ಫೆಬ್ರವರಿ 2 ರಂದು ಸಿಂಘು ಗಡಿಗೆ ತಲುಪಿದ್ದೇವೆ “ಎಂದು ಅವರು ಹೇಳಿದರು.
ಭಗವಂತ ಸಿಂಗ್ ಮತ್ತು ಗೋವಿಂದ್ ಸಿಂಗ್ ಇಬ್ಬರೂ ಬಾಲ್ಯದಿಂದಲೂ ನನ್ನ ಜಾಥಾದೊಂದಿಗೆ ಇದ್ದರು. ಗೋವಿಂದ್ ಬ್ರಹ್ಮಚಾರಿಯಾಗಿ ಉಳಿಯಲು ನಿರ್ಧರಿಸಿದ್ದರು. ಭಾಗವತ್ ಇತ್ತೀಚೆಗೆ ನಮ್ಮ ಜಾಥಾದ ಸದಸ್ಯೆಯ ಸಹೋದರಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಇಬ್ಬರೂ ರಂಗ್ರೇತಾ ಸಿಖ್ಖರು. ಈ ಕೊಲೆಯಲ್ಲಿ ಯಾವುದೇ ಜಾತಿ ಕೋನವಿಲ್ಲ. ನಿಹಾಂಗ್‌ಗಳಿಗೆ ಯಾವುದೇ ಜಾತಿ ಇಲ್ಲ. ನೀವು ರಂಗ್ರೇತಾ ಸಿಖ್ಖರು ಎಂದು ನಾನು ನಿಮಗೆ ಹೇಳುತ್ತಿದ್ದೇನೆ ಏಕೆಂದರೆ ನೀವು ಪದೇ ಪದೇ ಕೇಳುತ್ತಿದ್ದೀರಿ “ಎಂದು ಬಲ್ವಿಂದರ್ ಹೇಳಿದರು.
ಮತ್ತೊಬ್ಬ ಆರೋಪಿ ಸರಬ್ ಜಿತ್ ಸಿಂಗ್, ಗುರುದಾಸ್ ಪುರ ಜಿಲ್ಲೆಯ ವಿಥ್ವಾನ್ ಗ್ರಾಮಕ್ಕೆ ಸೇರಿದವನು. ಅವರು ನಿಹಾಂಗ್ ಗುಂಪಿನ ಪಂಜವಾನ್ ತಖ್ತ್ ಬುಧಾ ದಳದವರು. ಅವನ ತಂದೆ ಕೂಲಿ ಕೆಲಸಗಾರ. ಸರಬ್ಜಿತ್ ತಾಯಿ ಕಾಶ್ಮೀರ ಕೌರ್, “ಅವರು ಹಜೂರ್ ಸಾಹಿಬ್ ನಿಂದ ದೀಕ್ಷೆ ಪಡೆದರು. ನನ್ನ ಒಬ್ಬ ವಿಶೇಷ ಚೇತನ. ನನ್ನ ಮೂವರು ಹೆಣ್ಣು ಮಕ್ಕಳಿಗೆ ಮದುವೆ ಆಗಿದೆ ಎಂದು ಹೇಳಿದ್ದಾರೆ.
ಅವರು ಸಮುದಾಯ ಮತ್ತು ಗುರುಗಳ ಸಲುವಾಗಿ ಮಾಡಿದ್ದರು ಅವರು ಉತ್ಸಾಹದಿಂದ ಇರುತ್ತಾರೆ ಎಂದು ನಾನು ಭಾವಿಸುತ್ತೇನೆ “ಎಂದು ಕೌರ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಸಿಂಘು ಗಡಿಯಲ್ಲಿ ಹತ್ಯೆ ಪ್ರಕರಣ: ಮೂವರು ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ