Rail Roko Agitation: ರೈಲು ಹಳಿಗಳ ಮೇಲೆ ಪ್ರತಿಭಟನೆಗೆ ಕುಳಿತ ರೈತರು; 160ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯ
ರೈಲು ತಡೆ ಆಂದೋಲನ ನಡೆಯುತ್ತಿರುವ ರೈಲ್ವೆ ಸ್ಟೇಶನ್, ಹಳಿಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ರೈಲ್ವೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಬೆಳಗ್ಗೆಯಿಂದ ಇಲ್ಲಿಯವರೆಗೆ ಯಾವುದೇ ರೈಲು ಹಳಿಗಳ ಮೇಲೆ ಬೇರೇನೂ ಅವಘಡಗಳು ಆಗಿಲ್ಲ.
ದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ (Farm Laws)ಗಳ ವಿರುದ್ಧ 11 ತಿಂಗಳಿಂದಲೂ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಇಂದು ಬೇರೊಂದು ಕಾರಣಕ್ಕೆ ಆರು ತಾಸುಗಳ ರೈಲು ತಡೆ ಆಂದೋಲನ ಹಮ್ಮಿಕೊಂಡಿವೆ. ಉತ್ತರಪ್ರದೇಶದ ಲಖಿಂಪುರ ಖೇರಿ (Lakhimpur Kheri)ಯಲ್ಲಿ ನಡೆದ ಹಿಂಸಾಚಾರದಲ್ಲಿ ಆರೋಪಿ ಎನ್ನಿಸಿರುವ ಆಶಿಶ್ ಮಿಶ್ರಾ ತಂದೆ ಅಜಯ್ ಮಿಶ್ರಾ (Ajay Mishra)ರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂಬುದು ಈಗಿನ ಆಗ್ರಹ. ಇಂದು ದೇಶಾದ್ಯಂತ ರೈಲು ತಡೆ ಆಂದೋಲನ ನಡೆಸುವಂತೆ ಎಲ್ಲ ರೈತ ಸಂಘಟನೆಗಳಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದು, ಅದರ ಪ್ರಕಾರ ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿದೆ. ಈ ರೈಲು ತಡೆ ಆಂದೋಲನ ಬೆಳಗ್ಗೆಯಿಂದ ಎಲ್ಲೆಲ್ಲಿ ಏನಾಯಿತು? ಯಾವ ಸ್ವರೂಪದಲ್ಲಿ ನಡೆಯಿತು ಎಂಬಿತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ..
1. ಪಂಜಾಬ್, ಹರ್ಯಾಣಗಳಲ್ಲಿ ಈ ರೈಲು ತಡೆ ಆಂದೋಲನದಿಂದ ಪ್ರಯಾಣಿಕರಿಗೆ ತುಂಬ ಅನನುಕೂಲವಾಗಿದೆ. ಒಟ್ಟಾರೆಯಾಗಿ 184 ಪ್ರದೇಶಗಳ 160 ರೈಲುಗಳ ಮೇಲೆ ರೈಲು ತಡೆ ಆಂದೋಲನ ಪ್ರಭಾವ ಬೀರಿದೆ. ಬಹುತೇಕ ರೈತರು ರೈಲ್ವೆ ಹಳಿಗಳ ಮೇಲೆಯೇ ಪ್ರತಿಭಟನೆಗೆ ಕುಳಿತಿದ್ದಾರೆ. ಇದರಿಂದಾಗಿ ವಿವಿಧೆಡೆಯಿಂದ ಸಂಚಾರ ಮಾಡಬೇಕಿದ್ದ 43 ರೈಲುಗಳು ರದ್ದುಗೊಂಡಿವೆ. 50 ರೈಲುಗಳು ಭಾಗಶಃ ರದ್ದಾಗಿವೆ. ಇನ್ನು 63 ರೈಲುಗಳನ್ನು ಅವು ಹೋಗಬೇಕಿದ್ದ ಸ್ಥಳಕ್ಕೆ ಹೋಗುವ ಮೊದಲು ತಡೆಯಲಾಗಿದೆ ಎಂದು ಉತ್ತರ ರೈಲ್ವೆ ವಲಯದ ಸಿಪಿಆರ್ಒ ತಿಳಿಸಿದ್ದಾರೆ. ಈ ರೈಲುಗಳ ಮೂಲಕ ಪ್ರಯಾಣ ಮಾಡಬೇಕಿದ್ದ ಪ್ರಯಾಣಿಕರು ಸ್ಟೇಶನ್ಗಳಲ್ಲಿಯೇ ಪರದಾಡುವಂತಾಗಿದೆ. ಹಾಗೇ, ಚಳವಳಿ ನಿರತ ರೈತರಿಂದ ಕಾನೂನು ಸುವ್ಯವಸ್ಥೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಅಗತ್ಯವಿರುವಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಲುಧಿಯಾನಾ ಪೊಲೀಸ್ ಅಧಿಕಾರಿ ದೀಪಕ್ ಪರೀಕ್ ತಿಳಿಸಿದ್ದಾರೆ.
Punjab: Passengers face problems as train movement is affected due to farmers union call for ‘Rail Roko’ agitation; visuals from Ludhiana Railway station
We’ve deployed sufficient force here to handle the law and order situation: Ludhiana Joint CP/City, Deepak Pareek pic.twitter.com/MueGKW6vTd
— ANI (@ANI) October 18, 2021
2. ದೆಹಲಿಗೆ ಬರುವ ಹಲವು ರೈಲುಗಳ ಮೇಲೆ ಈ ರೈಲ್ ರುಕೋ (ರೈಲು ತಡೆ) ಆಂದೋಲನ ವ್ಯತಿರಿಕ್ತ ಪ್ರಭಾವ ಬೀರಿದೆ. ಇಲ್ಲಿಯವರೆಗೆ ಒಟ್ಟು 42 ರೈಲುಗಳು ತುಂಬ ತಡವಾಗಿ ಸಂಚಾರ ಮಾಡುತ್ತಿವೆ. ನಾವು ರೈಲುಗಳ ವೇಳಾಪಟ್ಟಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸದ್ಯಕ್ಕಂತೂ ಪ್ರಮುಖ ಮೂರು ಮಾರ್ಗಗಳಾದ ಪಾಲ್ವಾ, ಜಿಂದ್ ಮತ್ತು ಅಂಬಾಲಾ ಮಾರ್ಗಗಳನ್ನು ಮುಚ್ಚಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
3. ರೈಲು ತಡೆ ಆಂದೋಲನ ನಡೆಯುತ್ತಿರುವ ರೈಲ್ವೆ ಸ್ಟೇಶನ್, ಹಳಿಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ರೈಲ್ವೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಬೆಳಗ್ಗೆಯಿಂದ ಇಲ್ಲಿಯವರೆಗೆ ಯಾವುದೇ ರೈಲು ಹಳಿಗಳ ಮೇಲೆ ಬೇರೇನೂ ಅವಘಡಗಳು ಆಗಿಲ್ಲ. ಇನ್ನು ಚಂಡಿಗಡ್ನ ಎಸ್ಎಎಸ್ ನಗರ ಜಿಲ್ಲೆಯ ದಪ್ಪರ್ ರೈಲ್ವೆ ಸ್ಟೇಶನ್ನಲ್ಲಿ ರೈಲು ನಿಂತಿದ್ದು, ರೈತರ ಆಂದೋಲನದಿಂದಾಗಿ ಮುಂದಕ್ಕೆ ಹೋಗಲಾಗುತ್ತಿಲ್ಲ. ಇದರಿಂದ ಅದರಲ್ಲಿದ್ದ ಪ್ರಯಾಣಿಕರು ತುಂಬ ಕಷ್ಟಪಡುತ್ತಿದ್ದಾರೆ. ಇನ್ನು ಹರ್ಯಾಣದ ಬಹದ್ದೂರ್ಗಡ್ನಲ್ಲಿ ರೈಲ್ವೆ ಹಳಿಗಳನ್ನು ರೈತರು ನಿರ್ಬಂಧಿಸಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಮಯವನ್ನು ಮುಂದೂಡಲಾಗಿದೆ. ಇದರ ಹೊರತಾಗಿ ಓಡಿಶಾ, ರಾಜಸ್ಥಾನಗಳಲ್ಲೂ ರೈತರ ಪ್ರತಿಭಟನೆಯಿಂದಾಗಿ ರೈಲು ಸಂಚಾರಕ್ಕೆ ತೊಡಕಾಗಿದೆ.
Haryana | Protestors block railway tracks at Bahadurgarh in protest against Lakhimpur Kheri incident
Samyukta Kisan Morcha has called for nationwide ‘Rail roko’ in protest against the incident pic.twitter.com/Ucvmfq6PcM
— ANI (@ANI) October 18, 2021
#RailRoko: Agitating #farmers stop trains at Modi Nagar Railway Station. pic.twitter.com/hjdo2tfNIK
— IANS Tweets (@ians_india) October 18, 2021
ಇದನ್ನೂ ಓದಿ: ರಮೋಲಾರನ್ನು ರಂಬೋಲಾ ಎಂದು ಕರೆದ ಮಂಜು ಪಾವಗಡ; ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್ ಲೋಕೇಶ್
‘ಹೀಗಾದರೆ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ..’-ಮೇಘಾಲಯ ರಾಜ್ಯಪಾಲರಿಂದ ಎಚ್ಚರಿಕೆ
Published On - 3:45 pm, Mon, 18 October 21