Murder: ಉತ್ತರ ಪ್ರದೇಶದಲ್ಲಿ ಕೋರ್ಟ್​ ಒಳಗೇ ವಕೀಲನಿಗೆ ಗುಂಡು ಹಾರಿಸಿ ಬರ್ಬರ ಹತ್ಯೆ

Crime News: ಕೋರ್ಟ್ ಆವರಣದೊಳಗೆ  ನಿಂತಿದ್ದ ಭೂಪೇಂದ್ರ ಸಿಂಗ್ ಎಂಬ ವಕೀಲ ಬೇರೊಬ್ಬರೊಂದಿಗೆ ಮಾತನಾಡುತ್ತಿದ್ದಾಗ ಅಪರಿಚಿತನೊಬ್ಬ ಶೂಟ್ ಮಾಡಿ ಕೊಲೆ ಮಾಡಿದ್ದಾನೆ.

Murder: ಉತ್ತರ ಪ್ರದೇಶದಲ್ಲಿ ಕೋರ್ಟ್​ ಒಳಗೇ ವಕೀಲನಿಗೆ ಗುಂಡು ಹಾರಿಸಿ ಬರ್ಬರ ಹತ್ಯೆ
ಸಾಂಕೇತಿಕ ಚಿತ್ರ

ಶಹಜಹಾನ್​ಪುರ: ಉತ್ತರ ಪ್ರದೇಶದ ಶಹಜಹಾನ್​ಪುರದ ಜಿಲ್ಲಾ ಕೋರ್ಟ್​ನ ಆವರಣದಲ್ಲಿ ವಕೀಲರೊಬ್ಬರಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಇಂದು ಬೆಳಗ್ಗೆ 11.30ರ ವೇಳೆಗೆ ಈ ಘಟನೆ ನಡೆದಿದೆ. ಕೋರ್ಟ್ ಆವರಣದೊಳಗೆ  ನಿಂತಿದ್ದ ಭೂಪೇಂದ್ರ ಸಿಂಗ್ ಎಂಬ ವಕೀಲ ಬೇರೊಬ್ಬರೊಂದಿಗೆ ಮಾತನಾಡುತ್ತಿದ್ದಾಗ ಅಪರಿಚಿತನೊಬ್ಬ ಶೂಟ್ ಮಾಡಿ ಕೊಲೆ ಮಾಡಿದ್ದಾನೆ.

ವಕೀಲನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವುದರ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪರಾರಿಯಾಗಿರುವ ಶೂಟ್ ಮಾಡಿದ ವ್ಯಕ್ತಿಗಾಗಿ ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಈ ಕೃತ್ಯ ನಡೆದಾಗ ಆರೋಪಿ ಏಕಾಂಗಿಯಾಗಿ ಬಂದು ಈ ಕೊಲೆ ಮಾಡಿದ್ದಾನೆ.

ಮೃತಪಟ್ಟಿರುವ ವಕೀಲರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದೇ ರೀತಿಯ ಘಟನೆ ಇತ್ತೀಚೆಗೆ ದೆಹಲಿಯಲ್ಲೂ ನಡೆದಿತ್ತು. ದೆಹಲಿಯರೋಹಿಣಿ ಕೋರ್ಟ್​ನಲ್ಲಿ ಗ್ಯಾಂಗ್​ಸ್ಟರ್ ಜಿತೇಂದ್ರ ಗೋಗಿ ಅವರಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ವಕೀಲರ ಡ್ರೆಸ್ ಧರಿಸಿ ಬಂದಿದ್ದ ಆರೋಪಿಗಳು ಶೂಟ್ ಮಾಡಿದ ಬಳಿಕ ಪರಾರಿಯಾಗಿದ್ದರು. ಆ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: Crime News: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ನದಿಯಲ್ಲಿ ಮುಳುಗಿ ಐವರು ಭಕ್ತರು ಸಾವು

Singhu Border Murder ಸಿಂಘು ಗಡಿಯಲ್ಲಿ ರೈತನ ಬರ್ಬರ ಹತ್ಯೆ, ಕೈ ಕಾಲು ಕತ್ತರಿಸಿ ಬ್ಯಾರಿಕೇಡ್​​ಗೆ ಕಟ್ಟಿಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

Click on your DTH Provider to Add TV9 Kannada