Siri Fort Secret Tunnel: ದೆಹಲಿಯ ಸಿರಿ ಕೋಟೆಯಲ್ಲಿ ಉತ್ಖನನದ ವೇಳೆ ಪತ್ತೆಯಾಯ್ತು ಖಿಲ್ಜಿ ರಾಜವಂಶದ ಸುರಂಗ

|

Updated on: Jun 08, 2023 | 12:38 PM

ದೆಹಲಿಯ ಸಿರಿ ಕೋಟೆಯಲ್ಲಿ ಉತ್ಖನನದ ವೇಳೆ ಖಿಲ್ಜಿ ರಾಜವಶದ ಸುರಂಗ(Tunnel) ಪತ್ತೆಯಾಗಿದೆ. ವಿಶೇಷ ಇತಿಹಾಸ ಹೊಂದಿರುವ ರಾಜಧಾನಿ ದೆಹಲಿಯಲ್ಲಿ ಇಂತಹ ಹಲವು ಕಟ್ಟಡಗಳಿವೆ.

Siri Fort Secret Tunnel: ದೆಹಲಿಯ ಸಿರಿ ಕೋಟೆಯಲ್ಲಿ ಉತ್ಖನನದ ವೇಳೆ ಪತ್ತೆಯಾಯ್ತು ಖಿಲ್ಜಿ ರಾಜವಂಶದ ಸುರಂಗ
ಸಿರಿ ಕೋಟೆ
Image Credit source: ABP Live
Follow us on

ದೆಹಲಿಯ ಸಿರಿ ಕೋಟೆ( Siri Fort) ಯಲ್ಲಿ ಉತ್ಖನನದ ವೇಳೆ ಖಿಲ್ಜಿ ರಾಜವಶದ ಸುರಂಗ(Tunnel)  ಪತ್ತೆಯಾಗಿದೆ. ವಿಶೇಷ ಇತಿಹಾಸ ಹೊಂದಿರುವ ರಾಜಧಾನಿ ದೆಹಲಿಯಲ್ಲಿ ಇಂತಹ ಹಲವು ಕಟ್ಟಡಗಳಿವೆ. ಈ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಈಗ ಭಾರತೀಯ ಪುರಾತತ್ವ ಸಮೀಕ್ಷೆ ಅಂದರೆ ASI ಐತಿಹಾಸಿಕ ಸುರಂಗವನ್ನು ಕಂಡುಹಿಡಿದಿದೆ, ಇದು ಖಿಲ್ಜಿ ರಾಜವಂಶಕ್ಕಿಂತ ಹಿಂದಿನದು ಎಂದು ಹೇಳಲಾಗಿದೆ. ದೆಹಲಿಯ ಸಿರಿ ಫೋರ್ಟ್ ಚಿಲ್ಡ್ರನ್ಸ್ ಮ್ಯೂಸಿಯಂ ಬಳಿ ಉತ್ಖನನದ ಸಮಯದಲ್ಲಿ ಕಂಡುಬಂದ ಈ ಸುರಂಗವನ್ನು 13 ಅಥವಾ 14 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈಗ ಮ್ಯೂಸಿಯಂಗೆ ಭೇಟಿ ನೀಡುವ ಜನರು ಈ ಸುರಂಗವನ್ನು ಸಹ ನೋಡಬಹುದಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ಸಿರಿ ಫೋರ್ಟ್ ಚಿಲ್ಡ್ರನ್ಸ್ ಮ್ಯೂಸಿಯಂಗೆ ಭೇಟಿ ನೀಡಲು ಬರುವ ಜನರಿಗೆ ಮಾರ್ಗವನ್ನು ಸಿದ್ಧಪಡಿಸಲಾಗುತ್ತಿದ್ದು, ಇದಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉತ್ಖನನ ಕಾರ್ಯವನ್ನು ಮಾಡುತ್ತಿದೆ. ಈ ಉತ್ಖನನದ ಸಮಯದಲ್ಲಿ 13 ನೇ ಶತಮಾನದ ಈ ಸುರಂಗವು ಕಾಣಿಸಿಕೊಂಡಿತು. ಸುರಂಗವನ್ನು ನೋಡಿದ ನಂತರ ಅದರ ಬಾಯಿಯನ್ನು ಸಂಪೂರ್ಣವಾಗಿ ತೆರೆಯಲಾಯಿತು ಮತ್ತು ಉತ್ಖನನವನ್ನು ಅಲ್ಲಿಯೇ ನಿಲ್ಲಿಸಲಾಯಿತು.

ಮತ್ತಷ್ಟು ಓದಿ: ಟಿಪ್ಪು ಸುಲ್ತಾನ್ ನಿರ್ಮಿಸಿದ ನಕ್ಷಾತ್ರಾಕಾರದ ಕೋಟೆ ಎಲ್ಲಿದೆ? ತಲುಪುವುದು ಹೇಗೆ?

ಸದ್ಯಕ್ಕೆ ಉತ್ಖನನ ನಿಲ್ಲಿಸಲಾಗಿದೆ
ಎಎಸ್‌ಐ ಅಧಿಕಾರಿಗಳ ಪ್ರಕಾರ, ಈ ಸುರಂಗವನ್ನು ಮುಂದೆ ಅಗೆಯುವುದಿಲ್ಲ, ಅದನ್ನು ಹೀಗೆ ಇಡಲಾಗುತ್ತದೆ. ಪುರಾತತ್ವಶಾಸ್ತ್ರಜ್ಞ ಪ್ರವೀಣ್ ಸಿಂಗ್ ಮಾತನಾಡಿ, ನಾವು ಮುಂಭಾಗದ ಗೇಟ್‌ನಿಂದ ಮುಖ್ಯ ರಸ್ತೆಗೆ ನಾಲ್ಕು ಮೀಟರ್ ಅಗಲದ ಮಾರ್ಗವನ್ನು ನಿರ್ಮಿಸುತ್ತಿದ್ದೆವು. ಈ ಸಮಯದಲ್ಲಿ ಈ ಕಮಾನು ರೀತಿಯ ರಚನೆ ಕಾಣಿಸಿಕೊಂಡಿತು.

ಅಧಿಕಾರಿಯ ಪ್ರಕಾರ, ಸಿರಿ ಕೋಟೆಯ ಸುತ್ತಲಿನ ಎಲ್ಲಾ ರಚನೆಗಳು 13 ಮತ್ತು 14 ನೇ ಶತಮಾನದಲ್ಲಿ ದೆಹಲಿಯನ್ನು ಆಳಿದ ಖಿಲ್ಜಿ ರಾಜವಂಶದ ಹಿಂದಿನವುಗಳಾಗಿವೆ. ಈಗ ಇಲ್ಲಿ ಸುಮಾರು 6 ಅಡಿಯ ರಚನೆ ಪತ್ತೆಯಾಗಿದ್ದು, ಮಕ್ಕಳಿಗೆ ತೋರಿಸಲು ಹೀಗೆ ಇಡಲಾಗುವುದು. ಉತ್ಖನನದ ಸಮಯದಲ್ಲಿ ನೂರಾರು ವರ್ಷಗಳ ಹಳೆಯ ರಚನೆಗಳನ್ನು ಹೇಗೆ ಕಂಡುಹಿಡಿಯಲಾಗುತ್ತದೆ ಎಂಬುದನ್ನು ಮಕ್ಕಳಿಗೆ ವಿವರಿಸಲಾಗುವುದು.

ಸುರಂಗವನ್ನು ಮತ್ತಷ್ಟು ಅಗೆಯುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳಿಂದ ಸುಳಿವು ಸಿಕ್ಕಿದ್ದರೂ, ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು. ಈ ಸುರಂಗ ಎಷ್ಟು ದೂರ ಹೋಗುತ್ತದೆ ಎಂಬುದು ತಿಳಿದಿಲ್ಲ. ಉನ್ನತ ಅಧಿಕಾರಿಗಳಿಂದ ಸೂಚನೆ ಬಂದರೆ ಮಾತ್ರ ಮತ್ತಷ್ಟು ಅಗೆಯಲಾಗುವುದು ಎಂದಿದ್ದಾರೆ.

ಅಧಿಕಾರಿಗಳ ಪ್ರಕಾರ, ಸುರಂಗದಂತಹ ರಚನೆಯು ನೆಲದಿಂದ ಸುಮಾರು ಒಂದು ಮೀಟರ್ ಎತ್ತರದ ದಿಬ್ಬದಲ್ಲಿದೆ. ಈ ಸ್ಥಳದಿಂದ ಏನಾದರೂ ಪತ್ತೆಯಾಗಿರುವುದು ಇದೇ ಮೊದಲಲ್ಲವಾದರೂ, ಈ ಹಿಂದೆ ವಸ್ತುಸಂಗ್ರಹಾಲಯದ ನಿರ್ಮಾಣದ ಸಮಯದಲ್ಲಿ, ಖಿಲ್ಜಿ ರಾಜವಂಶದ ಅವಧಿಗೆ ಸೇರಿದ ಹಲವಾರು ಮಡಿಕೆಗಳು ಒಂದೇ ಸ್ಥಳದಲ್ಲಿ ಕಂಡುಬಂದಿವೆ. ಆ ಸಮಯದಲ್ಲಿ ಯುದ್ಧದ ಸಮಯದಲ್ಲಿ ತಪ್ಪಿಸಿಕೊಳ್ಳಲು ಸುರಂಗಗಳನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Thu, 8 June 23