ರಾಯ್‌ಪುರದ ಉಕ್ಕಿನ ಸ್ಥಾವರದ ಕಟ್ಟಡ ಕುಸಿದು 6 ಜನ ಸಾವು, ಹಲವರಿಗೆ ಗಾಯ

ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಖಾಸಗಿ ಉಕ್ಕಿನ ಸ್ಥಾವರದಲ್ಲಿ ಇಂದು ಕಟ್ಟಡ ಕುಸಿದು 6 ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿ ಇನ್ನೂ ಹಲವು ಜನ ಸಿಲುಕಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಸಿಲ್ತಾರಾ ಕೈಗಾರಿಕಾ ಪ್ರದೇಶದಲ್ಲಿರುವ ಗೋದಾವರಿ ಇಸ್ಪಾತ್ ಲಿಮಿಟೆಡ್ ಸ್ಥಾವರದಲ್ಲಿ ಈ ಘಟನೆ ನಡೆದಿದೆ.

ರಾಯ್‌ಪುರದ ಉಕ್ಕಿನ ಸ್ಥಾವರದ ಕಟ್ಟಡ ಕುಸಿದು 6 ಜನ ಸಾವು, ಹಲವರಿಗೆ ಗಾಯ
Raipur Steel Plant

Updated on: Sep 26, 2025 | 8:09 PM

ಛತ್ತೀಸ್​ಗಢ, ಸೆಪ್ಟೆಂಬರ್ 26: ಛತ್ತೀಸ್‌ಗಢದ (Chhattisgarh) ರಾಯ್‌ಪುರದ ಉಕ್ಕಿನ ಸ್ಥಾವರದಲ್ಲಿ ಇಂದು ಒಂದು ಕಟ್ಟಡ ಕುಸಿದು 6 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಐದಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ. ರಾಜಧಾನಿ ನಗರದ ಹೊರವಲಯದಲ್ಲಿರುವ ಗೋದಾವರಿ ಇಸ್ಪಾತ್ ಲಿಮಿಟೆಡ್‌ನ ಸಿಲ್ತಾರಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದ ಕೂಡಲೆ ಪೊಲೀಸ್ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಈ ಪ್ರದೇಶದಲ್ಲಿ ಸಮಗ್ರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. “ಗೋದಾವರಿ ಇಸ್ಪ್ಯಾಟ್ ಬಳಿ ಛಾವಣಿ ಕುಸಿದು ಕೆಲವು ಜನರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು. ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು. ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. 6 ಮೃತ ದೇಹಗಳನ್ನು ಹೊರತೆಗೆಯಲಾಗಿದೆ ಮತ್ತು 6 ಗಾಯಗೊಂಡ ಜನರನ್ನು ಇಲ್ಲಿಯವರೆಗೆ ರಕ್ಷಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ಎಸ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಎರಡೂವರೆ ಲಕ್ಷ ಕಲ್ಲಿದ್ದಲು ಕಾರ್ಮಿಕರಿಗೆ 1 ಲಕ್ಷ ರೂ. ಉಡುಗೊರೆ; ಸಚಿವ ಕಿಶನ್ ರೆಡ್ಡಿ ಘೋಷಣೆ


ಈ ಘಟನೆಯ ಬಗ್ಗೆ ಸಿಎಂ ವಿಷ್ಣು ದೇವ್ ಸಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಈ ಬಗ್ಗೆ ನನಗೆ ಮಾಹಿತಿ ಬಂದಿದೆ, ಈ ಘಟನೆಯಿಂದ ನನಗೆ ತುಂಬಾ ದುಃಖವಾಗಿದೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ