Smriti Irani: ಕಾರು ತಗೋಳಿ ಮೇಡಂ, ನಾನೇ ಕಾರಲ್ಲಿ ಬರ್ತೀನಿ, ನೀವು ಆಟೋದಲ್ಲಿ ಬರೋದಂದ್ರೆ: ಮೇಕಪ್ ಮ್ಯಾನ್ ಮಾತುಗಳ ಮೆಲುಕು ಹಾಕಿದ ಸ್ಮೃತಿ ಇರಾನಿ

|

Updated on: Mar 27, 2023 | 11:20 AM

ಸ್ಮೃತಿ ಇರಾನಿ ಕ್ಯೂಂಕಿ ಸಾಬ್​ ಭಿ ಕಭಿ ಬಹೂ ಥಿ ಧಾರಾವಾಹಿಯಿಂದ ಮನೆಮಾತಾಗಿದ್ದರು. ಸಧ್ಯಕ್ಕೆ ಅವರು ಈ ಬಣ್ಣದ ಲೋಕದಿಂದ ದೂರವಾಗಿದ್ದು, ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

Smriti Irani: ಕಾರು ತಗೋಳಿ ಮೇಡಂ, ನಾನೇ ಕಾರಲ್ಲಿ ಬರ್ತೀನಿ, ನೀವು ಆಟೋದಲ್ಲಿ ಬರೋದಂದ್ರೆ: ಮೇಕಪ್ ಮ್ಯಾನ್ ಮಾತುಗಳ ಮೆಲುಕು ಹಾಕಿದ ಸ್ಮೃತಿ ಇರಾನಿ
ಸ್ಮೃತಿ ಇರಾನಿ
Image Credit source: Navbharat Times
Follow us on

ಸ್ಮೃತಿ ಇರಾನಿ ಕ್ಯೂಂಕಿ ಸಾಬ್​ ಭಿ ಕಭಿ ಬಹೂ ಥಿ ಧಾರಾವಾಹಿಯಿಂದ ಮನೆಮಾತಾಗಿದ್ದರು. ಸಧ್ಯಕ್ಕೆ ಅವರು ಈ ಬಣ್ಣದ ಲೋಕದಿಂದ ದೂರವಾಗಿದ್ದು, ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ಮೃತಿ ತಮ್ಮ ಜೀವನದ ಆಗುಹೋಗುಗಳ ಬಗ್ಗೆ ಮಾತನಾಡಿದ್ದಾರೆ. ಸ್ಮೃತಿ ತಮ್ಮ ಮೊದಲ ಗಳಿಕೆಯ ಬಗ್ಗೆ ಹೇಳಿದ್ದಾರೆ, ಅಂದು ದಿನಕ್ಕೆ 18,00 ರೂ ಗಳಿಸುತ್ತಿದ್ದೆ. ಮೇಕಪ್​ ಮ್ಯಾನ್​ ನೀಲೇಶ್ ಎಂಬುವವರು, ಮೇಡಂ ನಾನೇ ಕಾರಿನಲ್ಲಿ ಬರ್ತೀನಿ, ನೀವು ಆಟೋದಲ್ಲಿ ಬರೋದಂದ್ರೆ, ನೀವು ಕೂಡ ಕಾರು ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದನ್ನು ನೆನಪಿಸಿಕೊಂಡರು.

ಹಾಗೆಯೇ ತಮ್ಮ ಶೂಟಿಂಗ್ ಬಗ್ಗೆಯೂ ಮಾತನಾಡಿರುವ ಅವರು, ಪೀಠೋಪಕರಣಗಳಿಗೆ ಹಾನಿಯಾಗುವ ಭಯದಿಂದ ಸೆಟ್​​ನಲ್ಲಿ ಆಹಾರವನ್ನು ಸೇವಿಸುವಂತಿರಲಿಲ್ಲ, ತಂತ್ರಜ್ಞರು ಮತ್ತು ಸಿಬ್ಬಂದಿ ಸದಸ್ಯರು ಇಲ್ಲದಿದ್ದಾಗ ನಟರಿಗೆ ಸೆಟ್‌ನಲ್ಲಿ ಆಹಾರ ಸೇವಿಸಲು ಅವಕಾಶ ನೀಡಿರುವುದನ್ನು ನೋಡಿ ತಾವು ಹೇಗೆ ಕೋಪಗೊಂಡರು ಎಂಬುದನ್ನು ನೆನಪಿಸಿಕೊಂಡರು.

ಮತ್ತಷ್ಟು ಓದಿ: ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಮೃತಿ ಇರಾನಿ ರ‍್ಯಾಂಪ್ ವಾಕ್ ; 25 ವರ್ಷಗಳ ಹಿಂದಿನ ವಿಡಿಯೊ ವೈರಲ್

ಜುಬೀನ್ ಅವರನ್ನು ಮದುವೆಯಾದಾಗ ಅವರ ಬಳಿ ಕೇವಲ 30 ಸಾವಿರವಿತ್ತು. ಸ್ಮೃತಿ ಗರ್ಭಿಣಿಯಾಗಿದ್ದ ಕಾರಣ ಧಾರಾವಾಹಿ ಸೆಟ್​ನಿಂದ ಹಠಾತ್​ ಆಗಿ ತೆಗೆದುಹಾಕಿದ್ದರು. ಹೆರಿಗೆಯಾಗುವ ಸ್ವಲ್ಪ ಸಮಯದವರೆಗೂ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು, ಒಂದು ತಿಗಳ ಬಳಿಕ ಹಿಂದಿರುಗಿದಾಗ ನಿನ್ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದರು.

ಮರುದಿನ ಮಿತಾ ವಶಿಷ್ಠ ನನ್ನ ಜಾಗಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಬಂದಿತ್ತು ಎಂದು ಕಿರುತೆರೆಯ ದಿನಗಳನ್ನು ಮೆಲುಕು ಹಾಕಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:13 am, Mon, 27 March 23