ಬಹಿರ್ದೆಸೆಗೆ ಹೋಗಿದ್ದಾಗ ‘ಆ’ ಜಾಗದ ಮೂಲಕ ದೇಹ ಸೇರಿತಂತೆ ಹಾವು! ಉತ್ತರ ಪ್ರದೇಶದ ವ್ಯಕ್ತಿಯೊಬ್ಬನ ಮಾತಿಗೆ ವೈದ್ಯರೇ ಬೇಸ್ತು

| Updated By: ಗಂಗಾಧರ​ ಬ. ಸಾಬೋಜಿ

Updated on: Apr 07, 2023 | 7:31 PM

ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗದ ಮೂಲಕ ಹಾವೊಂದು ದೇಹ ಪ್ರವೇಶಿಸಿದೆ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಬಹಿರ್ದೆಸೆಗೆ ಹೋಗಿದ್ದಾಗ ‘ಆ’ ಜಾಗದ ಮೂಲಕ ದೇಹ ಸೇರಿತಂತೆ ಹಾವು! ಉತ್ತರ ಪ್ರದೇಶದ ವ್ಯಕ್ತಿಯೊಬ್ಬನ ಮಾತಿಗೆ ವೈದ್ಯರೇ ಬೇಸ್ತು
ಪ್ರಾತಿನಿಧಿಕ ಚಿತ್ರ
Image Credit source: indiatoday.in
Follow us on

ಉತ್ತರ ಪ್ರದೇಶ: ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಈ ರೀತಿಯ ಸುದ್ದಿಗಳು ಕೆಲವೊಮ್ಮೆ ಜನರನ್ನುಗೊಂದಲಕ್ಕೀಡು ಮಾಡುತ್ತವೆ. ಸದ್ಯ ಅಂತಹದ್ದೇ ಒಂದು ವಿಚಿತ್ರ ಘಟನೆ ಒಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ (Uttar Pradesh) ಹರ್ದೋಯ್​ ಎಂಬ ಗ್ರಾಮದ ವ್ಯಕ್ತಿಯೊಬ್ಬರು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ತೆರಳಿದ್ದಾರೆ. ವೈದ್ಯರು ಪ್ರಶ್ನಿಸಿದಾಗ ಬಯಲಿನಲ್ಲಿ ಮಲವಿಸರ್ಜನೆ ಮಾಡುವಾಗ ಖಾಸಗಿ ಭಾಗದ ಮೂಲಕ ಹಾವು ದೇಹವನ್ನು ಪ್ರವೇಶಿಸಿದೆ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಖಾಸಗಿ ಅಂಗದ ಮೂಲಕ ಹಾವು ದೇಹ ಪ್ರವೇಶಿಸಿದೆ ಎಂಬ ಹೇಳಿಕೆ ನೀಡಿರುವ ವ್ಯಕ್ತಿವನ್ನು ಮಹೇಂದ್ರ ಎಂದು ಗುರುತಿಸಲಾಗಿದೆ. ಹರ್ದೋಯ್ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಮಹೇಂದ್ರ ರಾತ್ರೋರಾತ್ರಿ ಆಗಮಿಸಿದ್ದಾರೆ. ವಿಚಾರ ತಿಳಿದ ವೈದ್ಯಕೀಯ ಸಿಬ್ಬಂದಿಗಳು ಮಹೇಂದ್ರನನ್ನು  ಕೂಲಂಕಷವಾಗಿ ಪರೀಕ್ಷಿಸಿದ್ದಾರೆ. ಆದರೆ ದೇಹದಲ್ಲಿ ಯಾವುದೇ ಹಾವು ಕಡಿತದ ಪುರಾವೆಗಳು ಸಿಕ್ಕಿಲ್ಲ.

ವೈದ್ಯಕೀಯ ಸಿಬ್ಬಂದಿಗಳು ಪರೀಕ್ಷಿಸಿದ ಮೇಲೂ ಮಹೇಂದ್ರ ಅವರ ಕುಟುಂಬಸ್ಥರು ಮತ್ತೊಂದು ಭಾರಿ ಪರೀಕ್ಷಿಸುವಂತೆ ಕೇಳಿ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲು ಒತ್ತಾಯಿಸಿದ್ದಾರೆ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಪರೀಕ್ಷಿಸಿದ ನಂತರ, ಮಹೇಂದ್ರ ಮಾದಕವಸ್ತುಗಳ ಪ್ರಭಾವಕ್ಕೆ ಒಳಗಾಗಿದ್ದು, ಹಾಗಾಗಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಮರುದಿನ ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ವೈದ್ಯರು ಇಂಡಿಯಾ ಟುಡೇಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Sudha murthy: ಅತ್ತೆಗೆ ಪದ್ಮಭೂಷಣ ಪ್ರಶಸ್ತಿ, ಸಂತಸ ವ್ಯಕ್ತಪಡಿಸಿದ ಬ್ರಿಟನ್​ ಪ್ರಧಾನಿ ರಿಷಿ ಸುನಕ್

ಮಹೇಂದ್ರನನ್ನು ಪರೀಕ್ಷಿಸಿದ ವೈದ್ಯ ಶೇರ್ ಸಿಂಗ್ ಅವರ ಪ್ರಕಾರ, ಆ ವ್ಯಕ್ತಿಯು ಮಾದಕವಸ್ತುಗಳ ಪ್ರಭಾವಕ್ಕೆ ಒಳಗಾಗಿರುವಂತೆ ಕಾಣುತ್ತಿದ್ದನು. ಆಗಾಗ ಹೊಟ್ಟೆ ನೋವಿನ ಬಗ್ಗೆ ದೂರು ನೀಡುತ್ತಿದ್ದ. ಇದು ಮಾದಕವಸ್ತುಗಳ ಬಳಕೆಯಿಂದ ಹೀಗಾಗುತ್ತದೆ ಎಂದು ಹೇಳಿದರು. ಆ ವ್ಯಕ್ತಿಯು ತನ್ನ ಕಳವಳಗಳನ್ನು  ಕುಟುಂಬಸ್ಥರೊಂದಿಗೆ ಹಂಚಿಕೊಂಡಿದ್ದು, ಅವರು ಗಾಬರಿಗೊಂಡು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಪ್ರಕರಣ ಉಲ್ಬಣ: ಜಾಗರೂಕರಾಗಿರಿ, ನಿರ್ವಹಣೆಗೆ ಸಿದ್ಧರಾಗಿರಿ ಎಂದು ರಾಜ್ಯಗಳಿಗೆ ಕೇಂದ್ರ ಸೂಚನೆ

ಮರುದಿನ ಬೆಳಿಗ್ಗೆ, ಯುವಕನನ್ನು ಸಿಟಿ ಸ್ಕ್ಯಾನ್​ಗೆ ಒಳಪಡಿಸಲಾಗಿದ್ದು, ಎಲ್ಲವೂ ಅಸಹಜತೆಯಿಂದಿರುವುದು ಕಂಡುಬಂದಿದೆ. ಬಳಿಕ ಅವರ ಕುಟುಂಬ ಸದಸ್ಯರು ಅವರನ್ನು ಹೆಚ್ಚಿನ ಪರೀಕ್ಷೆಗೆ ಬೇರೆಡೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತೇವೆ ಎಂದು ವಿನಂತಿಸಿದ್ದು, ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:29 pm, Fri, 7 April 23