Farmers Protest | ವ್ಯಂಗ್ಯವಾಡಿದ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ ಮಿಯಾ ಖಲೀಫಾ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 04, 2021 | 2:30 PM

ಮಿಯಾ ಅವರು ಜನರ ಪರವಾಗಿ ನಿಂತಿದ್ದು ಇದೇ ಮೊದಲಬಾರಿ ಏನೂ ಅಲ್ಲ. ಆಗಸ್ಟ್ 2020ರಲ್ಲಿ ಲೆಬನಾನ್​ನಲ್ಲಿ ಸ್ಫೋಟ ಸಂಭವಿಸಿ ಸಾವಿರಾರು ಮಂದಿ ಸಾವಿಗೀಡಾದಾಗ ಈಕೆ ತನ್ನ ಕನ್ನಡಕವನ್ನು ಇಬೇಯಲ್ಲಿ ಹರಾಜಿಗಿಟ್ಟು ಲೆಬನಾನ್ ಜನರಿಗೆ ಸಹಾಯ ಮಾಡಿದ್ದರು.

Farmers Protest | ವ್ಯಂಗ್ಯವಾಡಿದ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ ಮಿಯಾ ಖಲೀಫಾ
ಮಿಯಾ ಖಲೀಫಾ
Follow us on

ದೆಹಲಿ: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಮೆರಿಕದ ಪಾಪ್ ತಾರೆ ರಿಹಾನ್ನಾ, ಸ್ವೀಡನ್​ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್​ಬರ್ಗ್ ಮತ್ತು ಮಾಜಿ ಪೋರ್ನ್ ತಾರೆ ಮಿಯಾ ಖಲೀಫಾ ಬೆಂಬಲ ಸೂಚಿಸಿದ್ದರು.

‘ಇವರು ಪೇಯ್ಡ್ ನಟರಾ? ಕಾಸ್ಟಿಂಗ್ ಡೈರೆಕ್ಟರ್ ಚೆನ್ನಾಗಿದ್ದಾರೆ. ಪ್ರಶಸ್ತಿ ವೇಳೆ ಅವರನ್ನು ಕಡೆಗಣಿಸುವುದಿಲ್ಲ ಎಂದು ಅಂದುಕೊಳ್ಳುವೆ. ನಾನು ರೈತರಿಗೆ ಬೆಂಬಲ ಸೂಚಿಸುತ್ತಿದ್ದೇನೆ’ ಎಂದು ಬುಧವಾರ ಟ್ವೀಟ್ ಮಾಡಿದ್ದರು.

ಈ ಟ್ವೀಟ್​ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರವಿರೋಧ ಚರ್ಚೆಗಳಾಗಿದ್ದು ಹಲವು ನೆಟ್ಟಿಗರು ಮಿಯಾಳನ್ನು ಲೇವಡಿ ಮಾಡಿದ್ದರು. ನೀಲಿ ಚಿತ್ರ ತಾರೆಯೂ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಹುಬ್ಬೇರಿಸಿದ ನೆಟ್ಟಿಗರು ಟ್ವಿಟರ್​ನಲ್ಲಿ ಸನ್ನಿ ಲಿಯೋನ್, ಜಾನಿ ಸಿನ್ಸ್ ಹೆಸರು ಟ್ರೆಂಡ್ ಮಾಡಿದ್ದರು. ಅಷ್ಟೇ ಅಲ್ಲದೆ ಮಿಯಾ ಖಲೀಫಾ ಬಗ್ಗೆ ಹಲವಾರು ಟ್ರೋಲ್, ಮೀಮ್​ಗಳನ್ನು ಹರಿಯಬಿಟ್ಟಿದ್ದರು.

ರೈತರಿಗೆ ಬೆಂಬಲ ಸೂಚಿಸಿದ್ದಕ್ಕಾಗಿ ಟ್ರೋಲ್​ಗೆ ಗುರಿಯಾಗಿದ್ದ ಮಿಯಾ ಅವರಲ್ಲಿ ಟ್ವೀಟಿಗರು ಕೆಲವು ಪ್ರಶ್ನೆಗಳನ್ನು ಕೇಳಿ ಕೆದಕಿದಾಗ ಈಕೆ ತಕ್ಕ ಉತ್ತರ ನೀಡಿ ಟ್ರೋಲಿಗರ ಬಾಯ್ಮುಚ್ಚಿಸಿದ್ದಾರೆ.

ಬುಧವಾರ ಶುಭಂ ಸಿಂಗ್ ಎಂಬ ಟ್ವೀಟಿಗರೊಬ್ಬರು ನಿಮ್ಮ ಬಗ್ಗೆ ನಿಮ್ಮ ಹಿರೀಕರು ಎಷ್ಟು ಹೆಮ್ಮೆ ಪಡುತ್ತಿರಬಹುದು ಎಂದು ವ್ಯಂಗ್ಯವಾಡಿದ್ದರು.

ಇದಕ್ಕೆ ಉತ್ತರಿಸಿದ ಮೀಯಾ,  ತನ್ನ ತಾಯ್ನಾಡಾದ ಲೆಬನಾನ್​ನ ರೆಡ್ ಕ್ರಾಸ್ ಸಂಸ್ಥೆಗೆ 5,000 ಡಾಲರ್ ಹಣ ದೇಣಿಗೆ ನೀಡಿರುವ ಸ್ಕ್ರೀನ್ ಶಾಟ್ ಲಗತ್ತಿಸಿ ಉತ್ತರ ನೀಡಿದ್ದಾರೆ. ನಾನು ನನ್ನ ತಾಯ್ನಾಡಿನ ರೆಡ್ ಕ್ರಾಸ್ ಸಂಸ್ಥೆಗೆ ಮತ್ತಷ್ಟು ಹಣ ದೇಣಿಗೆ ನೀಡಲಿದ್ದೇನೆ. ನನ್ನ ಹಿರೀಕರು ಇನ್ನು ಸ್ವಲ್ಪ ಆರಾಮವಾಗಿರಲಿ ಎಂದಿದ್ದಾರೆ.

ಮಿಯಾ ಅವರು ಜನರ ಪರವಾಗಿ ನಿಂತಿದ್ದು ಇದೇ ಮೊದಲಬಾರಿ ಏನೂ ಅಲ್ಲ. ಆಗಸ್ಟ್ 2020ರಲ್ಲಿ ಲೆಬನಾನ್​ನಲ್ಲಿ ಸ್ಫೋಟ ಸಂಭವಿಸಿ ಸಾವಿರಾರು ಮಂದಿ ಸಾವಿಗೀಡಾದಾಗ ಈಕೆ ತನ್ನ ಕನ್ನಡಕವನ್ನು ‘ಇ-ಬೇ’ಯಲ್ಲಿ ಹರಾಜಿಗಿಟ್ಟು ಲೆಬನಾನ್ ಜನರಿಗೆ ಸಹಾಯ ಮಾಡಿದ್ದರು.

ಮೂರು ತಿಂಗಳ ಕಾಲವಷ್ಟೇ  ಪೋರ್ನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದರು ಮೀಯಾ.  ನೀಲಿ ಚಿತ್ರಗಳಲ್ಲಿ ನಟನೆ ನಿಲ್ಲಿಸಿದ್ದ ಮಿಯಾ ಇತ್ತೀಚೆಗೆ ಹೋರಾಟಗಳಲ್ಲಿ ಸಕ್ರಿಯವಾಗಿದ್ದಾರೆ. ಕೆಲವು ದಿನಗಳ ಹಿಂದೆ ಹಾಲಿವುಡ್ ನಟಿ ಈವನ್ ರಾಚೆಲ್​ವುಡ್ ತನ್ನ ಮೇಲೆ ರಾಕ್ ಸ್ಟಾರ್ ಮೆರ್ಲಿನ್ ಮಾನ್ಸನ್ ದೌರ್ಜನ್ಯವೆಸಗಿದ್ದಾರೆ ಎಂದು ಹೇಳಿ ಮುಂದೆ ಬಂದಾಗ, ಮಿಯಾ ಈವಾನ್ ಪರ ನಿಂತು ದೌರ್ಜನ್ಯದ ವಿರುದ್ಧ ದನಿಯೆತ್ತಿದ್ದರು.

ಮಿಯಾ ಖಲೀಫಾ ಮಾಡಿದ್ದ ಟ್ವೀಟ್

ಖಲೀಫಾ ಟ್ವೀಟ್​ ಟ್ರೋಲ್ ಆದ ಬಗೆ

ಟ್ರೋಲಿಗರಿಗೆ ಮಿಯಾ ಖಲೀಫಾ ಉತ್ತರ

India Together ಹ್ಯಾಷ್​ಟ್ಯಾಗ್​ನೊಂದಿಗೆ ದೇಶ ಮೊದಲು ಎಂದ ಸಚಿನ್, ಕರಣ್, ಅಕ್ಷಯ್

ಟ್ವೀಟ್ ವಾರ್: ದಿಲ್ಜಿತ್ ಹಾಡು ರಿಹಾನ್ನಾಗೆ ಅರ್ಪಣೆ, ದೇಶಪ್ರೇಮ ಸಾಬೀತಿಗೆ ಕಂಗನಾ ಸವಾಲು