ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಇತ್ತೀಚಿಗಷ್ಟೇ ಡಿಜಿಟಲ್ ಕೇಂದ್ರ ಬಜೆಟ್ 2021-22ನ್ನು ಸಂಸತ್ತಿನಲ್ಲಿ ಮಂಡನೆ ಮಾಡಿದ್ದು, ಆ ಮೂಲಕ ಇದೇ ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡನೆಗೆ ಸಾಕ್ಷಿಯಾಗಿದ್ದಾರೆ. ಆರು ಸ್ತಂಭಗಳಲ್ಲಿ ವಿಂಗಡಿಸಲಾದ ಕೇಂದ್ರ ಬಜೆಟ್ 2021-22ರಲ್ಲಿ ಅನೇಕ ಹೊಸ ಯೋಜನೆಗಳನ್ನು ಮತ್ತು ಸುಧಾರಣೆಗಳನ್ನು ಸೇರಿಸಿದ್ದಾರೆ. ನಿರ್ಮಲಾ ಸೀತರಾಮನ್ ಬಜೆಟ್ 2021-22ರ ಭಾಷಣದಲ್ಲಿ ಈ ವರ್ಷದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಹೆಚ್ಚುವರಿ 1 ಕೋಟಿ ಜನರನ್ನು ಒಳಗೊಳ್ಳುವುದಾಗಿ ಘೋಷಿಸಿದ್ದಾರೆ. ಆದ್ದರಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (Ujjwala Yojana 2021) ಅಡಿ ಲಾಭ ಪಡೆಯಲು ಬಯಸುವವರಿಗೆ ಇದು ನಿಜಕ್ಕೂ ಒಂದು ಉತ್ತಮ ಅವಕಾಶವಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂದರೆ ಏನು? ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸಮಾಜ ಕಲ್ಯಾಣ ಯೋಜನೆಯಾಗಿದ್ದು, 2016ರ ಮೇ 1ರಂದು ಉತ್ತರ ಪ್ರದೇಶದ ಬಲ್ಲಿಯಾದಿಂದ ಮೊದಲ ಬಾರಿಗೆ ಈ ಯೋಜನೆ ಪ್ರಾರಂಭವಾಯಿತು. ಪ್ರಧಾನಿಯ ಉಜ್ವಲ ಯೋಜನೆ ಅಡಿಯಲ್ಲಿ ದೇಶದ ಬಿಪಿಎಲ್ ಕಾರ್ಡ್ ಹೊಂದಿರುವ ಮನೆಗಳಿಗೆ ಎಲ್ಪಿಜಿ ಸಂಪರ್ಕವನ್ನು ಉಚಿತವಾಗಿ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಗ್ರಾಮೀಣ ಭಾರತದಲ್ಲಿ ಹೆಚ್ಚಾಗಿ ಬಳಸುವ ಅಶುದ್ಧ ಅಡುಗೆ ಇಂಧನಗಳನ್ನು ಸ್ವಚ್ಛ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ಎಲ್ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ)ಯನ್ನು ಮನೆಗಳಿಗೆ ತಲುಪಿಸುವಲ್ಲಿ ಈ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದೆ. ಉಜ್ವಲ ಯೋಜನೆಯಡಿ ಪ್ರತೀ ಬಡ ಕುಟುಂಬಕ್ಕೆ ಉಚಿತ ಎಲ್ಪಿಜಿ ಸಂಪರ್ಕ ಒದಗಿಸುವ ಸರ್ಕಾರಿ ಸ್ವಾಮ್ಯದ ಇಂಧನ ಕಂಪೆನಿಗಳಿಗೆ ಸರ್ಕಾರವು ಪ್ರತೀ ಸಿಲಿಂಡರ್ಗೆ 1600ರೂಪಾಯಿ ಸಬ್ಸಿಡಿ ನೀಡುತ್ತದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ದೇಶದಾದ್ಯಂತ ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ)ಕಾರ್ಡ್ ಹೊಂದಿರುವ ಮನೆಗಳಲ್ಲಿನ ಮಹಿಳೆಯರ ಹೆಸರಿನಲ್ಲಿ 5 ಕೋಟಿ ಎಲ್ಪಿಜಿ ಸಂಪರ್ಕವನ್ನು ನೀಡುವ ಗುರಿಯನ್ನು ಹೊಂದಲು ಸರ್ಕಾರ ನಿರ್ಧಾರ ಮಾಡಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗಿರುವ ಅರ್ಹತಾ ಮಾನದಂಡಗಳು:
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವ ಹಂತಗಳು: ಬಿಪಿಎಲ್ ಕುಟುಂಬದ ಅರ್ಹ ಮಹಿಳೆಯು ಉಜ್ವಲ ಯೋಜನೆಯ ಅರ್ಜಿ (Ujjwala Yojana application form)ಯನ್ನು ಭರ್ತಿ ಮಾಡುವ ಮೂಲಕ ಯೋಜನೆಗೆ ಅರ್ಜಿಸಲ್ಲಿಸಬಹುದಾಗಿದೆ.
(KYC Application forms for Ujjwala Yojana ) ಆನ್ಲೈನ್ ಅರ್ಜಿಯ ನಮೂನೆಯನ್ನು ಡೌನ್ಲೋಡ್ ಮಾಡಿ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಎಲ್ಪಿಜಿ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಲ್ಲಾ ದಾಖಲೆಗಳ ಪರಿಶೀಲನೆಯ ನಂತರ ಅರ್ಜಿದಾರರಿಗೆ ಎಲ್ಪಿಜಿ ಗ್ಯಾಸ್ ನೀಡಲಾಗುತ್ತದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಯೋಜನೆಗೆ ಸಂಬಂಧಿಸಿದಂತೆ ಅಧಿಕೃತ ವೆಬ್ಸೈಟ್ pmujjwalayojana.com ಭೇಟಿ ನೀಡಿ ನೊಂದಾಯಿಸಿಕೊಳ್ಳಬೇಕು.
ಆಸಕ್ತರು 2 ಪುಟಗಳ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಅಗತ್ಯವಿರುವ ದಾಖಲೆಗಳನ್ನು ಫಾರ್ಮ್ನೊಂದಿಗೆ ಲಗತ್ತಿಸಬೇಕು. ಅರ್ಜಿಯನ್ನು ಭರ್ತಿ ಮಾಡಲು ಮೂಲ ವಿವರಗಳಾದ ಹೆಸರು, ದಿನಾಂಕ, ಸ್ಥಳ, ಸಂಪರ್ಕ ವಿವರಗಳು, ಜನಧನ್ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಇತ್ಯಾದಿ ಅಗತ್ಯವಿದೆ.
ಅರ್ಜಿದಾರರು ತಮ್ಮ ಸಿಲಿಂಡರ್ ಪ್ರಕಾರದ ಅವಶ್ಯಕತೆಯನ್ನು ನಮೂದಿಸಬೇಕಾಗಿದೆ ಅಂದರೆ ಈ ಯೋಜನೆಯಲ್ಲಿ 14.2 ಕೆ.ಜಿ. ಸಿಲಿಂಡರ್ ಅಥವಾ 5 ಕೆ.ಜಿ ಸಿಲಿಂಡರ್ ಎಂಬ 2 ವಿಭಾಗಗಳಿವೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಎಷ್ಟು ಕೆ.ಜಿ ಸಿಲಿಂಡರ್ನ ಅಗತ್ಯವಿದೆ ಎಂದು ತಿಳಿಸಬೇಕು. ಒಂದು ವೇಳೆ ಗ್ರಾಹಕರು ಈ 3 ತಿಂಗಳುಗಳ ಅವಧಿಯಲ್ಲಿ ರೀಫಿಲ್ ಸಿಲಿಂಡರ್ ಪಡೆಯದಿದ್ದಲ್ಲಿ, ಮುಂಗಡ ಹಣವನ್ನು 2021ರ ಮಾರ್ಚ್ ವರೆಗೆ ಸಿಲಿಂಡರ್ ಪಡೆಯಲು ಬಳಸಬಹುದು.
ಭಾರತದಲ್ಲಿನ ಎಲ್ಪಿಜಿ ವಿತರಣೆಯ ಪ್ರಸ್ತುತ ಸ್ಥಿತಿ: ಭಾರತವು 24 ಕೋಟಿಗೂ ಹೆಚ್ಚು ಕುಟುಂಬಗಳಿಗೆ ನೆಲೆಯಾಗಿದ್ದು, ಅದರಲ್ಲಿ ಸುಮಾರು 10 ಕೋಟಿ ಕುಟುಂಬಗಳು ಇನ್ನೂ ಕೂಡ ಎಲ್ಪಿಜಿ ಅಡುಗೆ ಇಂಧನದಿಂದ ವಂಚಿತರಾಗಿದ್ದಾರೆ ಹಾಗೂ ಅಡುಗೆಯ ಪ್ರಾಥಮಿಕ ಮೂಲವಾಗಿ ಉರುವಲು, ಕಲ್ಲಿದ್ದಲು, ಸಗಣಿ ರೊಟ್ಟಿ ಇತ್ಯಾದಿಗಳನ್ನು ಅವಲಂಬಿಸಿದ್ದಾರೆ.
ಗೃಹಿಣಿಯರಿಗೆ ಗುಡ್ ನ್ಯೂಸ್: LPG ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗುವ ಲೆಕ್ಕಾಚಾರವಿದೆ!