ಬೆಂಗಳೂರಿನ ಸಾಫ್ಟ್​ವೇರ್​ ಇಂಜಿನಿಯರ್​ ಪತ್ನಿ ನಿಗೂಢ ಸಾವು

| Updated By: KUSHAL V

Updated on: Sep 13, 2020 | 3:25 PM

ಹೈದರಾಬಾದ್: ಆತ ಬೆಂಗಳೂರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಕೆಲಸ, ಸಂಬಳ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಲಾಕ್‌ಡೌನ್‌ನಿಂದಾಗಿ ವರ್ಕ್ ಫ್ರಮ್ ಹೋಮ್ ಅಂತಾ ಹೆಂಡತಿ ಜೊತೆ ಊರು ಸೇರಿದ್ದ. ಆದರೆ, ಅಲ್ಲಿ ಏನಾಯ್ತೋ ಏನೋ ಗೊತ್ತಿಲ್ಲ. ಇದೀಗ ಪತ್ನಿ ಸಾವಿನ ಮನೆ ಸೇರಿದ್ದಾಳೆ. ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದಳಾ? ಈಕೆ ಮೌನಿಕ. ವಯಸ್ಸು ಇನ್ನು 30ರ ಅಸುಪಾಸು. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ವೀರಂಕಿಲಾಕುವಿನ ನಿವಾಸಿ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಇಂಜನಿಯರ್ ಆಗಿದ್ದ ಅನಿಲ್‌ ಎಂಬಾತನಿಗೆ […]

ಬೆಂಗಳೂರಿನ ಸಾಫ್ಟ್​ವೇರ್​ ಇಂಜಿನಿಯರ್​ ಪತ್ನಿ ನಿಗೂಢ ಸಾವು
Follow us on

ಹೈದರಾಬಾದ್: ಆತ ಬೆಂಗಳೂರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಕೆಲಸ, ಸಂಬಳ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಲಾಕ್‌ಡೌನ್‌ನಿಂದಾಗಿ ವರ್ಕ್ ಫ್ರಮ್ ಹೋಮ್ ಅಂತಾ ಹೆಂಡತಿ ಜೊತೆ ಊರು ಸೇರಿದ್ದ. ಆದರೆ, ಅಲ್ಲಿ ಏನಾಯ್ತೋ ಏನೋ ಗೊತ್ತಿಲ್ಲ. ಇದೀಗ ಪತ್ನಿ ಸಾವಿನ ಮನೆ ಸೇರಿದ್ದಾಳೆ.

ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದಳಾ?
ಈಕೆ ಮೌನಿಕ. ವಯಸ್ಸು ಇನ್ನು 30ರ ಅಸುಪಾಸು. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ವೀರಂಕಿಲಾಕುವಿನ ನಿವಾಸಿ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಇಂಜನಿಯರ್ ಆಗಿದ್ದ ಅನಿಲ್‌ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು.

ಇಬ್ಬರು ಸುಖವಾಗಿ ಜೀವನ ನಡೆಸುತ್ತಿದ್ರು. ಆದ್ರೆ ಕೊರೊನಾ ಹಾವಳಿಯಿಂದಾಗಿ ದಂಪತಿ ಬೆಂಗಳೂರು ಬಿಟ್ಟು ಸ್ವಗ್ರಾಮಕ್ಕೆ ತೆರಳಿದ್ದರು. ಲಾಕ್‌ಡೌನ್ ಆರಂಭದಿಂದಲೂ ಗಂಡ ಹೆಂಡತಿ ಅಲ್ಲೇ ವಾಸ ಮಾಡ್ತಾಯಿದ್ರು. ಅಲ್ಲೂ ಕೂಡ ಜೀವನ ಚೆನ್ನಾಗಿಯೇ ಇತ್ತು. ಆದ್ರೆ, ಪತಿ ಮನೆಯಲ್ಲಿ ಏನಾಯ್ತೋ ಏನೋ ಗೊತ್ತಿಲ್ಲ. ಇದೀಗ ಮೌನಿಕ ಶವವಾಗಿ ಪತ್ತೆಯಾಗಿದ್ದಾಳೆ.

ಪೊಲೀಸರ ವಿರುದ್ಧ ಸಿಡಿದೆದ್ದ ಸಂಬಂಧಿಕರು
ಗಂಡನ ಮನೆಯಲ್ಲಿ ಮೌನಿಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವರದಕ್ಷಿಣೆಗಾಗಿ ಪತಿ ಹಾಗೂ ಅತ್ತೆ ಮಾವ ಕಿರುಕುಳ‌ ನೀಡಿದ್ದಾರೆ. ಆಕೆಯ ಸಾವಿಗೆ ಪತಿಯ  ಕುಟುಂಬಸ್ಥರೇ ಕಾರಣ ಎಂದು ಮೌನಿಕ ಸಂಬಂಧಿಕರು ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ರು. ಶವಗಾರದ ಬಳಿ ಕುಳಿತು ಪೊಲೀಸರು ಹಾಗೂ ವೈದ್ಯರು ವಿರುದ್ಧ ಘೋಷಣೆ ಕೂಗಿದ್ರು.

ಪತಿ ಮತ್ತು ಆತನ ಕುಟುಂಬಸ್ಥರು ಖಾಕಿ ವಶಕ್ಕೆ 
ಪ್ರತಿಭಟನೆ ಜೋರಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪತಿ ಅನಿಲ‌್ ಹಾಗೂ ಆತನ ಪೋಷಕರನ್ನು ವಶಕ್ಕೆ‌ ತೆಗೆದುಕೊಂಡಿದ್ದಾರೆ. ಸದ್ಯ ಅನಿಲ್ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೌನಿಕ ಸಾವು ಕುರಿತಂತೆ ತನಿಖೆ ಆರಂಭಿಸಿದ್ದಾರೆ.