ಜೆಇಇ, ನೀಟ್​ 2021 ಪ್ರವೇಶ ಪರೀಕ್ಷೆಗಳು ಯಾವಾಗ ನಡೆಯಲಿವೆ? -ಇಲ್ಲಿದೆ ನೋಡಿ ಪ್ರಮುಖ ಮಾಹಿತಿ

| Updated By: Lakshmi Hegde

Updated on: Jul 06, 2021 | 10:43 AM

JEE Main, NEET-2021: ನೀಟ್​ 2021 (NEET-2021) ಪ್ರವೇಶ ಪರೀಕ್ಷೆ ಅಪ್ಲಿಕೇಶನ್​ ಬಿಡುಗಡೆಯಾದ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆಯನ್ನು ನ್ಯಾಶನಲ್​ ಟೆಸ್ಟಿಂಗ್​ ಏಜೆನ್ಸಿ ಹೊರಡಿಸಿಲ್ಲ. ಆದರೆ ಪ್ರವೇಶ ಪರೀಕ್ಷೆಯ ಅಪ್ಲಿಕೇಶನ್​ ಫಾರ್ಮ್​​ಗಳು ಇದೇ ವಾರದಲ್ಲಿಯೇ ಬಿಡುಗಡೆಯಾಗಲಿವೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಜೆಇಇ, ನೀಟ್​ 2021 ಪ್ರವೇಶ ಪರೀಕ್ಷೆಗಳು ಯಾವಾಗ ನಡೆಯಲಿವೆ? -ಇಲ್ಲಿದೆ ನೋಡಿ ಪ್ರಮುಖ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಕೊವಿಡ್​ 19 ಸಾಂಕ್ರಾಮಿಕ ರೋಗ ಶೈಕ್ಷಣಿಕ ಕ್ಷೇತ್ರದ ಮೇಲೆ ತುಂಬ ವ್ಯತಿರಿಕ್ತ ಪರಿಣಾಮ ಬೀರಿದೆ. ಅದೆಷ್ಟೋ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಹಲವು ಉನ್ನತ ಶಿಕ್ಷಣದ, ವಿವಿಧ ವೃತ್ತಿಗಳ ಪ್ರವೇಶ ಪರೀಕ್ಷೆಗಳೇ ರದ್ದಾಗಿವೆ. ಇನ್ನು ಎಂಜನಿಯರಿಂಗ್​ ಪ್ರವೇಶ ಪರೀಕ್ಷೆ ಜೆಇಇ ಮುಖ್ಯ ಪರೀಕ್ಷೆ-2021 ಮತ್ತು ನೀಟ್​​ -2021 ಪರೀಕ್ಷೆಗಳೂ ಮುಂದೂಡಲ್ಪಟ್ಟಿವೆ. ಲಕ್ಷಾಂತರ ವಿದ್ಯಾರ್ಥಿಗಳು ಈ ನೀಟ್​ ಮತ್ತು ಜೆಇಇ ಪ್ರವೇಶ ಪರೀಕ್ಷೆಗಳಿಗಾಗಿ ಕಾಯುತ್ತಿದ್ದಾರೆ.

ನ್ಯಾಶನಲ್​ ಟೆಸ್ಟಿಂಗ್​ ಏಜೆನ್ಸಿ (ಎನ್​ಟಿಎ) ಕೆಲವು ವಾರಗಳ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆ ನೀಟ್​ 2021 (NEET 2021) ಪ್ರವೇಶ ಪರೀಕ್ಷೆ ಆಗಸ್ಟ್​ 1ರಂದು ನಡೆಯಲಿದೆ. ಹಾಗೊಮ್ಮೆ ಈ ಪ್ರವೇಶ ಪರೀಕ್ಷೆ ಆಗಸ್ಟ್​ 1ರಂದು ನಡೆಯುವುದು ನಿಶ್ಚಿತವಾದರೆ ಪರೀಕ್ಷಾರ್ಥಿಗಳು ಅಪ್ಲಿಕೇಶನ್​ ಫಾರ್ಮ್​​​ಗಳನ್ನು ಎನ್​ಟಿಎಯ ಅಧಿಕೃತ ವೆಬ್​ಸೈಟ್​ neet.nta.nic.in.ನಲ್ಲಿ ಪಡೆಯಬಹುದು.

ನೀಟ್​ 2021 (NEET-2021) ಪ್ರವೇಶ ಪರೀಕ್ಷೆ ಅಪ್ಲಿಕೇಶನ್​ ಬಿಡುಗಡೆಯಾದ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆಯನ್ನು ನ್ಯಾಶನಲ್​ ಟೆಸ್ಟಿಂಗ್​ ಏಜೆನ್ಸಿ ಹೊರಡಿಸಿಲ್ಲ. ಆದರೆ ಪ್ರವೇಶ ಪರೀಕ್ಷೆಯ ಅಪ್ಲಿಕೇಶನ್​ ಫಾರ್ಮ್​​ಗಳು ಇದೇ ವಾರದಲ್ಲಿಯೇ ಬಿಡುಗಡೆಯಾಗಲಿವೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಾಗೇ, ಇನ್ನು ಕೆಲವೇ ದಿನಗಳಲ್ಲಿ ನೀಟ್​ ಪ್ರವೇಶ ಪರೀಕ್ಷೆಯ ದಿನಾಂಕ ಮತ್ತು ಅಪ್ಲಿಕೇಶನ್​ ಫಾರ್ಮ್​ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಎನ್​ಟಿಎ ಘೋಷಿಸಬಹುದು ಎಂದು ಹೇಳಲಾಗಿದೆ.

ಇನ್ನು ಜೆಇಇ ಮುಖ್ಯಪರೀಕ್ಷೆಯ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಸದ್ಯ ಜೆಇಇ ಮುಖ್ಯ ಪರೀಕ್ಷೆಯ ಫೆಬ್ರವರಿ ಮತ್ತು ಮಾರ್ಚ್​ ತಿಂಗಳ ಸೆಷನ್ಸ್​​ಗಳು ಮುಗಿದಿದ್ದು, ಏಪ್ರಿಲ್​ ಮತ್ತು ಮೇ ಸೆಷನ್ಸ್​ಗಳು ಮುಂದೂಡಲ್ಪಟ್ಟಿವೆ. ಅದನ್ನು ಯಾವಾಗ ನಡೆಸುವುದು ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಮಧ್ಯೆ ಜೆಇಇ 2021 ಮುಖ್ಯ ಪರೀಕ್ಷೆಯ ಏಪ್ರಿಲ್​-ಮೇ ಸೆಷನ್ಸ್​ಗಳ ಪರೀಕ್ಷೆ ಜುಲೈ ಮತ್ತು ಆಗಸ್ಟ್​​ನಲ್ಲಿ ನಡೆಯಲಿವೆ. ಅದೂ ಕೂಡ ಕೇವಲ 15 ದಿನಗಳ ಅಂತರದಲ್ಲಿ ನಡೆಯಲಿವೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Coronavirus cases in India: ದೇಶದಲ್ಲಿ 34,703 ಹೊಸ ಪ್ರಕರಣ ಪತ್ತೆ, 533 ಮಂದಿ ಸಾವು

Some Important Information about NTA NEET JEE Main 2021 Exams