ಅಪ್ಪ ಏಳನೇ ಬಾರಿ ಮದುವೆಯಾಗ್ತಿದ್ದಾರೆ ಯಾರಾದ್ರೂ ತಡೀರಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗ

ಅಪ್ಪ ಏಳನೇ ಮದುವೆ(Marriage)ಯಾಗುತ್ತಿರುವುದನ್ನು ತಡೆಯುವಂತೆ ಮಗ ಪೊಲೀಸರ ಬಳಿ ದೂರು ನೀಡಿರುವ ಘಟನೆ ಅಜಂಗಢದ ಅಹ್ರೌಲಾದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ವಿವಾಹ ಸಿದ್ಧತೆಗಳನ್ನು ತಡೆಯಲು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಪ್ಪನಿಗೆ ಎಷ್ಟೇ ಮನವಿ ಮಾಡಿದರೂ ಮತ್ತೊಂದು ಮದುವೆ ಆಗೇ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ, ನೀವಾದ್ರೂ ನಿಲ್ಲಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾನೆ.

ಅಪ್ಪ ಏಳನೇ ಬಾರಿ ಮದುವೆಯಾಗ್ತಿದ್ದಾರೆ ಯಾರಾದ್ರೂ ತಡೀರಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗ
ಮದುವೆ

Updated on: Mar 10, 2026 | 11:59 AM

ಅಹ್ರೌಲಾ, ಮಾರ್ಚ್​ 10: ಅಪ್ಪ ಏಳನೇ ಮದುವೆ(Marriage)ಯಾಗುತ್ತಿರುವುದನ್ನು ತಡೆಯುವಂತೆ ಮಗ ಪೊಲೀಸರ ಬಳಿ ದೂರು ನೀಡಿರುವ ಘಟನೆ ಅಜಂಗಢದ ಅಹ್ರೌಲಾದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ವಿವಾಹ ಸಿದ್ಧತೆಗಳನ್ನು ತಡೆಯಲು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಪ್ಪನಿಗೆ ಎಷ್ಟೇ ಮನವಿ ಮಾಡಿದರೂ ಮತ್ತೊಂದು ಮದುವೆ ಆಗೇ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ, ನೀವಾದ್ರೂ ನಿಲ್ಲಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾನೆ.

55 ವರ್ಷದ ವ್ಯಕ್ತಿಯೊಬ್ಬನ ಮೇಲೆ ಅವನ ಸ್ವಂತ ಮಗನೇ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾನೆ. ಮಗನ ಪ್ರಕಾರ, ಅವನ ತಂದೆ ಆರು ಬಾರಿ ಮದುವೆಯಾಗಿದ್ದಾರೆ. ದೂರು ಕೊಟ್ಟವನು ವ್ಯಕ್ತಿಯ ಮೂರನೇ ಹೆಂಡತಿಯ ಮಗ.

2024 ರಲ್ಲಿ ತನ್ನ ತಂದೆ ಆರನೇ ಬಾರಿಗೆ ವಿವಾಹವಾದರು, ಆದರೆ ಅವರ ಪತ್ನಿ ಕೆಲವೇ ದಿನಗಳಲ್ಲಿ ಕುಟುಂಬವನ್ನು ತೊರೆದು ಭೂಮಿ ಮತ್ತು ಆಭರಣಗಳಿಗೆ ಬೇಡಿಕೆ ಇಟ್ಟಿದ್ದರು. ತನ್ನ ಏಳನೇ ಮದುವೆಗೆ ಹಣ ಹೂಡಲು ಪೂರ್ವಜರ ಭೂಮಿಯನ್ನು ಮಾರಾಟ ಮಾಡಲು ಅವನು ದೃಢನಿಶ್ಚಯ ಮಾಡಿದ್ದಾರೆ. ಭೂಮಿಯನ್ನು ಮಾರಾಟ ಮಾಡಲು 50,000 ರೂಪಾಯಿಗಳ ಮುಂಗಡ ಹಣವನ್ನು ಸಹ ಪಡೆದಿದ್ದಾನೆ ಎಂದು ಮಗ ಹೇಳಿದ್ದಾರೆ. ತಂದೆ ಈಗಾಗಲೇ ಅರ್ಧದಷ್ಟು ಭೂಮಿಯನ್ನು ಅಡಮಾನ ಇಟ್ಟಿದ್ದಾರೆ.

ಮತ್ತಷ್ಟು ಓದಿ: ಮದುವೆ ಮಂಟಪಕ್ಕೇ ನುಗ್ಗಿ ಮಾಜಿ ಪ್ರಿಯಕರನಿಗೆ ಶಾಕ್​​ಕೊಟ್ಟ ಯುವತಿ: ಫುಲ್​​ ಹೈಡ್ರಾಮಾ

ಈ ವಿಷಯ ಪೊಲೀಸ್ ವರಿಷ್ಠಾಧಿಕಾರಿ ಚಿರಾಗ್ ಜೈನ್ ಅಲ್ಲಿಗೆ ತಲುಪಿದಾಗ, ಕಥೆ ಮತ್ತೊಂದು ತಿರುವು ಪಡೆದುಕೊಂಡಿತು. ಈ ಪ್ರಕರಣವು ಬಹು ವಿವಾಹಗಳನ್ನು ಮಾತ್ರವಲ್ಲದೆ, ಭೂಮಿ ಮತ್ತು ಆಸ್ತಿ ಪಾಲನ್ನೂ ಒಳಗೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಪ್ರಸ್ತುತ, ಪೊಲೀಸರು ವಿವಾಹ ದಾಖಲೆಗಳು ಮತ್ತು ಭೂ ವ್ಯವಹಾರವನ್ನು ಆಳವಾಗಿ ತನಿಖೆ ಮಾಡುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us