ಮುಂಬೈ: ಕೇಂದ್ರ ಸರ್ಕಾರದ ಸಾವರಿನ್ ಚಿನ್ನದ ಬಾಂಡ್ ಯೋಜನೆ 2020-21ರ 9 ನೇ ಸರಣಿ ಬಿಡುಗಡೆಯಾಗಿದೆ. ಡಿ.28ರಿಂದ ಜ.1ರವರೆಗೆ ಬಾಂಡ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಗೋಲ್ಡ್ ಬಾಂಡ್ನ ಈ ಸರಣಿಯಲ್ಲಿ ಚಿನ್ನದ ಪ್ರತಿ ಗ್ರಾಂಗೆ ₹ 5000 ನಿಗದಿಪಡಿಸಲಾದೆ. ಹಾಗೇ ಆನ್ಲೈನ್ ಹಣ ಪಾವತಿ ಮಾಡುವವರಿಗೂ ಸೇರಿ ಎಲ್ಲರಿಗೂ ಪ್ರತಿ ಗ್ರಾಂಗೆ ₹ 50 ರಿಯಾಯಿತಿ ನೀಡಲಾಗುವುದು ಎಂದು ಆರ್‌ಬಿಐ ತಿಳಿಸಿದೆ.
ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಕೇಂದ್ರ ಸರ್ಕಾರ 2015ರಲ್ಲಿ ಅನುಷ್ಠಾನಕ್ಕೆ ತಂದಿದ್ದು, ಸರ್ಕಾರದ ಪರವಾಗಿ ಆರ್‌ಬಿಐ ಗೋಲ್ಡ್ ಬಾಂಡ್ಗಳನ್ನು ವಿತರಿಸುತ್ತದೆ. ಈ ಬಾಂಡ್ಗಳನ್ನು ಎಸ್ಬಿಐ ಸೇರಿದಂತೆ ಹಲವು ಬ್ಯಾಂಕ್ಗಳಲ್ಲಿ, ಷೇರು ವಹಿವಾಟು ನಡೆಸುವ ಸೆಕ್ಯುರಿಟೀಸ್ಗಳಲ್ಲಿ, ನಿಗದಿತ ಅಂಚೆಕಚೇರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಗೋಲ್ಡ್ ಬಾಂಡ್ ಪಡೆಯಲು ವೋಟರ್ ಐಡಿ, ಆಧಾರ್ ನಂಬರ್, ಪಾನ್ ನಂಬರ್ ಕಡ್ಡಾಯವೆ. ಕೆಲ ವಾಣಿಜ್ಯ ಬ್ಯಾಂಕ್ಗಳ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿಯೇ ಅರ್ಜಿ ಸಲ್ಲಿಸಿ ಬಾಂಡ್ ಪಡೆಯಬಹುದು. ಕೆಲ ಬ್ಯಾಂಕ್ಗಳಲ್ಲಿ ಆನ್ಲೈನ್ ಖರೀದಿಗೆ ಹೆಚ್ಚುವರಿ ವಿನಾಯ್ತಿಯೂ ಲಭ್ಯ.
ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್ನ್ಯೂಸ್; ಜ.1ರಿಂದ ಎಲ್ಲ ಕರೆಗಳೂ ಉಚಿತ