ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್ನ್ಯೂಸ್; ಜ.1ರಿಂದ ಎಲ್ಲ ಕರೆಗಳೂ ಉಚಿತ
ಹೊಸವರ್ಷಕ್ಕೆ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಗುಡ್ನ್ಯೂಸ್ ಕೊಟ್ಟಿದೆ. ಜ.1ರಿಂದ ಜಿಯೋ ನೆಟ್ವರ್ಕ್ನಿಂದ ನೀವು ಉಳಿದ ಯಾವುದೇ ನೆಟ್ವರ್ಕ್ಗೆ ಅಂದರೆ ಏರ್ಟೆಲ್, ವೊಡಾಫೋನ್ ಇತ್ಯಾದಿಗೆ ಮಾಡುವ ಕರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.
ದೆಹಲಿ: ಹೊಸವರ್ಷಕ್ಕೆ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಗುಡ್ನ್ಯೂಸ್ ಕೊಟ್ಟಿದೆ. ಜ.1ರಿಂದ ಜಿಯೋ ನೆಟ್ವರ್ಕ್ನಿಂದ ನೀವು ಉಳಿದ ಯಾವುದೇ ನೆಟ್ವರ್ಕ್ಗೆ ಅಂದರೆ ಏರ್ಟೆಲ್, ವೊಡಾಫೋನ್ ಇತ್ಯಾದಿಗೆ ಮಾಡುವ ಕರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.
ಭಾರತೀಯ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ ( TRAI-ಟ್ರಾಯ್) ನಿರ್ದೇಶನದ ಹಿನ್ನೆಲೆಯಲ್ಲಿ ಜಿಯೋ ಬಿಲ್ ಆ್ಯಂಡ್ ಕೀಪ್ ಪದ್ಧತಿಯನ್ನು ಅಳವಡಿಸಿಕೊಳ್ಳಲಿದೆ. ಇದರಡಿಯಲ್ಲಿ ಜ.1ರಿಂದ ಅಂತರ್ ಸಂಪರ್ಕ ಬಳಕೆ ಶುಲ್ಕ (IUC) ವನ್ನು ರದ್ದುಗೊಳಿಸುತ್ತಿದ್ದು, ಎಲ್ಲ ದೇಶೀಯ ಕರೆಗಳೂ ಉಚಿತವಾಗಲಿದೆ ಎಂದು ರಿಲಯನ್ಸ್ ಜಿಯೋ ತಿಳಿಸಿದೆ. Bill and Keep ವ್ಯವಸ್ಥೆಯಡಿ ಎರಡು ಭಿನ್ನ ದೂರ ಸಂಪರ್ಕ ಜಾಲಗಳ ಅಂತರ್ ಸಂಪರ್ಕಕ್ಕೆ ಪರಸ್ಪರ ನೆಟ್ವರ್ಕ್ಗಳು ಶುಲ್ಕ ವಿಧಿಸುವುದಿಲ್ಲ.
ಜಿಯೋದಿಂದ ಜಿಯೋ ನೆಟ್ವರ್ಕ್ಗೆ ಹಿಂದಿನಿಂದಲೂ ಉಚಿತ ಕರೆಯನ್ನು ನಿಗದಿಪಡಿಸಿದ್ದ ಟೆಲಿಕಾಂ ಕಂಪನಿ, 2019ರಲ್ಲಿ ಜಿಯೋದಿಂದ ಉಳಿದ ನೆಟ್ವರ್ಕ್ಗಳಿಗೆ ಕರೆಯನ್ನು ಶುಲ್ಕ ಸಹಿತ ಮಾಡಿತ್ತು. ಅಲ್ಲದೆ, ಟ್ರಾಯ್ ಅಂತರ್ ಸಂಪರ್ಕ ಬಳಕೆ ಶುಲ್ಕವನ್ನು ರದ್ದುಗೊಳಿಸುವವರೆಗೆ ಜಿಯೋದಿಂದ ಉಳಿದ ನೆಟ್ವರ್ಕ್ಗಳಿಗೆ ಮಾಡುವ ಕರೆಗೆ ಶುಲ್ಕ ವಿಧಿಸಲಾಗುವುದು. ನಂತರ ಅದನ್ನು ರದ್ದುಗೊಳಿಸಲಾಗುವುದು ಎಂದಿತ್ತು. ಆ ಭರವಸೆಯಂತೆ ಈಗ ನಾಳೆಯಿಂದ ಜಿಯೋದಿಂದ ಬೇರೆ ನೆಟ್ವರ್ಕ್ಗಳಿಗೂ ಗ್ರಾಹಕರು ಉಚಿತ ಕರೆ ಮಾಡಬಹುದಾಗಿದೆ. ಏರ್ಟೆಲ್ ಷೇರು ಕುಸಿತ
ಜಿಯೋ ಈ ಘೋಷಣೆ ಮಾಡುತ್ತಿದ್ದಂತೆ, ಅದರ ಪ್ರತಿಸ್ಪರ್ಧಿ ಭಾರತಿ ಏರ್ಟೆಲ್ನ ಷೇರುಗಳು ಅಂತರ್ ದಿನ ವಹಿವಾಟಿನಲ್ಲಿ ಶೇ.2ರಷ್ಟು ಕುಸಿಯಿತು.