AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್​​ನಲ್ಲಿ ಪ್ರಧಾನಿ ಮೋದಿ ಮಾಡಿದ್ದು ಸಾಮಾನ್ಯ ಭಾಷಣ, ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿಲ್ಲ: ಮಲ್ಲಿಕಾರ್ಜುನ ಖರ್ಗೆ

Mallikarjun Kharge ಸಂಸತ್ತಿನ ಉಭಯ ಸದನಗಳಲ್ಲಿ ಪ್ರಧಾನ ಮಂತ್ರಿಯವರ(PM Modi) ಭಾಷಣವನ್ನು ಸಾಮಾನ್ಯ ಭಾಷಣ ಎಂದ ಖರ್ಗೆ, ಸರ್ಕಾರ "ದುರಹಂಕಾರ"ದಿಂದ ವರ್ತಿಸುತ್ತಿದೆ. ಅದು ಹಣದುಬ್ಬರ, ನಿರುದ್ಯೋಗ ಅಥವಾ ಅದಾನಿ ವಿವಾದ ಬಗ್ಗೆ ಕೇಳಿದ ಪ್ರಮುಖ ಪ್ರಶ್ನೆಗಳಿಂದ ನುಣುಚಿಕೊಳ್ಳುತ್ತಿದೆ ಎಂದಿದ್ದಾರೆ

ಸಂಸತ್​​ನಲ್ಲಿ ಪ್ರಧಾನಿ ಮೋದಿ ಮಾಡಿದ್ದು ಸಾಮಾನ್ಯ ಭಾಷಣ, ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿಲ್ಲ: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ರಶ್ಮಿ ಕಲ್ಲಕಟ್ಟ
|

Updated on: Feb 10, 2023 | 4:58 PM

Share

ಸಂಸತ್ತಿನ ಉಭಯ ಸದನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾಡಿದ ಭಾಷಣ “ಸಾಮಾನ್ಯ ಭಾಷಣ”. ಈ ಭಾಷಣದಲ್ಲಿ ಅವರು ಪ್ರತಿಪಕ್ಷಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಶುಕ್ರವಾರ ಹೇಳಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ಪ್ರಧಾನ ಮಂತ್ರಿಯವರ(PM Modi) ಭಾಷಣವನ್ನು ಸಾಮಾನ್ಯ ಭಾಷಣ ಎಂದ ಖರ್ಗೆ, ಸರ್ಕಾರ ದುರಹಂಕಾರದಿಂದ ವರ್ತಿಸುತ್ತಿದೆ. ಅದು ಹಣದುಬ್ಬರ, ನಿರುದ್ಯೋಗ ಅಥವಾ ಅದಾನಿ ವಿವಾದ ಬಗ್ಗೆ ಕೇಳಿದ ಪ್ರಮುಖ ಪ್ರಶ್ನೆಗಳಿಂದ ನುಣುಚಿಕೊಳ್ಳುತ್ತಿದೆ ಎಂದಿದ್ದಾರೆ. ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ, 71,000 ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುತ್ತಿದೆ, ದೇಶದಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ, ಇದಕ್ಕೆ ಪ್ರಧಾನಿ ಉತ್ತರ ನೀಡುತ್ತಿಲ್ಲ. ನಾನು ಮಾತ್ರ ಈ ದೇಶವನ್ನು ಉಳಿಸಬಲ್ಲೆ ಎಂದು ಮೋದಿ ಹೇಳಿದ್ದಾರೆ, ಇದು ದುರಹಂಕಾರ” ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ ಹೇಳಿದ್ದಾರೆ.

ನಿನ್ನೆ ಸಂಸತ್ತಿನ ಮೇಲ್ಮನೆಯಲ್ಲಿ, ಪಿಎಂ ಮೋದಿ ಅವರು ನೆಹರು-ಗಾಂಧಿ ಕುಟುಂಬದ ಸದಸ್ಯರ ಹೆಸರಿನ ಅನೇಕ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದು ಅವರು “ನೆಹರು ಸರ್​​ನೇಮ್​​ನ್ನು ಇರಿಸಿಕೊಳ್ಳಲು ಏಕೆ ಹೆದರುತ್ತಾರೆ” ಎಂದು ಕೇಳಿದರು.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮಾಡಿದ ಕಾರ್ಯದ ಮಹತ್ವವನ್ನು ಅಳಿಸಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂಡೆನ್‌ಬರ್ಗ್-ಅದಾನಿ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಇದನ್ನೂ ಓದಿ: BBC Documentary Row: ಬಿಬಿಸಿ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

600ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳಿಗೆ ನೆಹರೂ-ಗಾಂಧಿ ಕುಟುಂಬದ ಹೆಸರಿಡಲಾಗಿದೆ ಎಂದು ಎಲ್ಲೋ ಓದಿದ್ದೇನೆ.”ಕೆಲವರಿಗೆ ಸರ್ಕಾರದ ಯೋಜನೆಗಳ ಹೆಸರುಗಳು ಮತ್ತು ಸಂಸ್ಕೃತ ಪದಗಳ ಹೆಸರುಗಳಲ್ಲಿ ಸಮಸ್ಯೆಗಳಿದ್ದವು. 600 ಸರ್ಕಾರಿ ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂದು ನಾನು ವರದಿಯಲ್ಲಿ ಓದಿದ್ದೇನೆ. ಅವರ ತಲೆಮಾರಿನ ಜನರು ನೆಹರೂ ಅನ್ನು ತಮ್ಮ ಉಪನಾಮವಾಗಿ ಏಕೆ ಇಟ್ಟುಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ, ಇದಕ್ಕೆ ಭಯ ಮತ್ತು ನಾಚಿಕೆ ಯಾಕೆ? ಎಂದು ಪ್ರಧಾನಿ ಮೋದಿ ಕೇಳಿದ್ದಾರೆ. ಕಾಂಗ್ರೆಸ್ ತನ್ನ ಆಡಳಿತದಲ್ಲಿ ರಾಜ್ಯ ಸರ್ಕಾರಗಳನ್ನು ಉರುಳಿಸಿತು ಎಂದು ಪ್ರಧಾನಿ ಆರೋಪಿಸಿದರು.

ಕೆಲವು ವಿರೋಧ ಪಕ್ಷಗಳು ಹಳೆಯ ಪಿಂಚಣಿ ಯೋಜನೆಯ ಮರುಸ್ಥಾಪನೆಗೆ ಒಲವು ತೋರುವುದರೊಂದಿಗೆ, ಪ್ರಧಾನಿ ಮೋದಿ ರಾಜ್ಯಗಳ ಆರ್ಥಿಕತೆಯ ವಿಷಯದ ಬಗ್ಗೆಯೂ ಪ್ರಸ್ತಾಪಿಸಿದರು. ಪಕ್ಷಗಳ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ ಎಂದ ಅವರು, ದೇಶದ ಆರ್ಥಿಕ ಆರೋಗ್ಯದೊಂದಿಗೆ ಆಟವಾಡಬೇಡಿ ಎಂದು ಒತ್ತಾಯಿಸಿದರು.

“ನಾವು ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು ಮತ್ತು ಪಕ್ಷಗಳು ಪರಸ್ಪರರ ವಿರುದ್ಧ ಕೆಲವು ದೂರುಗಳನ್ನು ಹೊಂದಿರಬಹುದು, ಆದರೆ ದೇಶದ ಆರ್ಥಿಕ ಆರೋಗ್ಯದೊಂದಿಗೆ ಆಟವಾಡಬೇಡಿ. ನಿಮ್ಮ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಇಂತಹ ಪಾಪ ಮಾಡಬೇಡಿ ಎಂದಿದ್ದಾರೆ ಮೋದಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ