ಧೆಮಾಜಿ: ಅಸ್ಸಾಂ ರಾಜ್ಯದ ಧೆಮಾಜಿ ಜಿಲ್ಲೆಯ ಸಿಲಾಪತ್ತರ್ನಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಿದ್ದಾರೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಸರ್ಕಾರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಧ್ಯೇಯದಿಂದ ಕೆಲಸ ಮಾಡುತ್ತಿದೆ. ಇಲ್ಲಿನ ಬೋಗಿಬೀಲ್ ಸೇತುವೆ ಮತ್ತು ನಾರ್ಥ್ ಬ್ಯಾಂಕ್ನಲ್ಲಿರುವ ಬ್ರಾಡ್ ಗೇಡ್ ರೈಲ್ವೆ ಹಳಿ ಕಾರ್ಯ ಪೂರ್ಣಗೊಂಡಿದ್ದು ನಮ್ಮ ಅಧಿಕಾರವಧಿಯಲ್ಲಿ ಎಂದಿದ್ದಾರೆ.
ಕೇಂದ್ರ ಮತ್ತು ಅಸ್ಸಾಂ ಸರ್ಕಾರ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗಾಗಿ ಜಂಟಿಯಾಗಿ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಉತ್ತಮ ಸಾಮರ್ಥ್ಯವಿದ್ದರೂ ಈ ಹಿಂದಿನ ಸರ್ಕಾರಗಳು ಮಲತಾಯಿ ಧೋರಣೆ ತಾಳಿದ್ದವು. 2014ರವರೆಗೆ 100 ಕುಟುಂಬಗಳ ಪೈಕಿ ಕೇವಲ 55 ಕುಟುಂಬಗಳಿಗೆ ಮಾತ್ರ ಎಲ್ಪಿಜಿ ಗ್ಯಾಸ್ ಸಂಪರ್ಕ ಇತ್ತು. ಅಸ್ಸಾಂನಲ್ಲಿ ಸಂಸ್ಕರಣಾ ಘಟಕ ಇದ್ದರೂ ಎಲ್ಪಿಜಿ ಗ್ಯಾಸ್ ಸಂಪರ್ಕ ಸಿಕ್ಕಿದ್ದು 40 ಕುಟುಂಬಗಳಿಗೆ ಮಾತ್ರ. ಉಜ್ವಲ ಯೋಜನೆಯಿಂದಾಗಿ ಇಂದು ಅಸ್ಸಾಂನಲ್ಲಿ ಬಹುತೇಕ ಕುಟುಂಬಗಳಿಗೆ ಎಲ್ ಪಿಜಿ ಸಂಪರ್ಕ ಲಭಿಸಿದೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಭಾಷಣದ ಮುಖ್ಯಾಂಶಗಳು
ನಾರ್ಥ್ ಬ್ಯಾಂಕ್ನಲ್ಲಿದ್ದ ಮೊದಲ ಎಂಜಿನಿಯರಿಂಗ್ ಕಾಲೇಜಾಗಿತ್ತು ಧೆಮೇಜಿ ಎಂಜಿನಿಯರಿಂಗ್ ಕಾಲೇಜು. ಇನ್ನು ಮೂರು ಕಾಲೇಜುಗಳನ್ನು ಸ್ಥಾಪಿಸಲಾಗುವುದು.ಅಸ್ಸಾಂ ಸರ್ಕಾರವು ಮಹಿಳಾ ಕಾಲೇಜು ಮತ್ತು ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸುವ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ.
Centre & Assam govt working collaboratively to develop State infrastructure. Despite the State having great potential, former govts gave it 'sautela' treatment by overlooking development in various sectors: PM Modi during various projects' launch in Silapathar, Dhemaji pic.twitter.com/FMA7gIOq07
— ANI (@ANI) February 22, 2021
ಅಸ್ಸಾಂ ಜನರಿಗೆ ಅಗತ್ಯವಾದುದು ಎಲ್ಲವುೂ ಅಸ್ಸಾಂನಲ್ಲಿದೆ. ಇಲ್ಲಿ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸುವ ಅಗತ್ಯವಿದೆ. ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಲಾಗುವುದು ಎಂದು ನಾನು ಭರವಸೆ ನೀಡುತ್ತೇವೆ.
Assam's tea, tourism, handloom and handicraft will strengthen the State's self-reliance: Prime Minister Narendra Modi at Silapathar, Dhemaji pic.twitter.com/QTKwQFT7Jv
— ANI (@ANI) February 22, 2021
ಅಸ್ಸಾಂ ಚಹಾ, ಪ್ರವಾಸೋದ್ಯಮ, ಕೈಮಗ್ಗ, ಕರಕುಶಲ ಕಲೆಯಿಂದಾಗಿ ಅಸ್ಸಾಂ ಸ್ವಾವಲಂಬಿಯಾಗಿದೆ.
ಎಲ್ಲರ ಜತೆಗೆ ಎಲ್ಲರ ಅಭಿವೃದ್ಧಿ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಸರ್ಕಾರವು ಹಲವಾರು ಯೋಜನೆಗಳಿಗೆ ಚಾಲನೆ ನೀಡಿದೆ. ಬೋಗಿಬೀಲ್ ಸೇತುವೆ ಪೂರ್ಣವಾಗಿದೆ. ಬ್ರಹ್ಮಪುತ್ರ ನದಿಗಿರುವ ಕಲಿಯಾಭೊಮೊರಾ ಸೇತುವೆ ಅಸ್ಸಾಂನಗಿರುವ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕೆಲಸ ಪ್ರಗತಿಯಲ್ಲಿದೆ.
ಅಸ್ಸಾಂನ ಆರ್ಥಿಕ ವ್ಯವಸ್ಥೆ ಸುಧಾರಣೆಯಲ್ಲಿ ಚಹಾ ತೋಟ ಪ್ರಮುಖ ಸ್ಥಾನವಹಿಸಿದೆ. ದಶಕಗಳ ಕಾಲ ದೇಶವನ್ನಾಳಿದವರು ದಿಸ್ ಪುರ್ ದಿಲ್ಲಿಯಿಂದ ದೂರ ಎಂದು ಭಾವಿಸಿದ್ದರು. ಈ ಭಾವನೆಯಿಂದಲೇ ಅಸ್ಸಾಂಗೆ ತುಂಬಾ ನಷ್ಟವಾಗಿದ್ದು, ಆದರೆ ಈಗ ದಿಲ್ಲಿ ದೂರವಿಲ್ಲ, ದಿಲ್ಲಿ ನಿಮ್ಮ ಬಾಗಿಲಲ್ಲೇ ನಿಂತಿದೆ.
Assam: Prime Minister Narendra Modi inaugurates and lays the foundation stone of various projects in Silapathar, Dhemaji pic.twitter.com/ooWMf1RATB
— ANI (@ANI) February 22, 2021
ಅಸ್ಸಾಂ ಸರ್ಕಾರದ ಪ್ರಯತ್ನದ ಫಲವಾಗಿ ರಾಜ್ಯದಲ್ಲಿ 20ಎಂಜಿನಿಯರಿಂಗ್ ಕಾಲೇಜುಗಳಿವೆ. ಶೀಘ್ರದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಲಿದ್ದು ಇದರಿಂದ ಚಹಾ ತೋಟದ ಕಾರ್ಮಿಕರ ಮಕ್ಕಳಿಗೆ ಮತ್ತು ಬುಡಕಟ್ಟು ಜನಾಂಗಕ್ಕೆ ಪ್ರಯೋಜನವಾಗಲಿದೆ.
ಇಲ್ಲಿನ ರೈತರ ಸಾಮರ್ಥ್ಯ ಹೆಚ್ಚಿಸಲು, ಕೃಷಿಗಾಗಿರುವ ಸೌಕರ್ಯ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜತೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮೀನು ಸಾಕಣೆಯಲ್ಲಿ ತೊಡಗಿರುವವರಿಗೆ ₹20 ಸಾವಿರ ಕೋಟಿ ಅನುದಾನ ನೀಡಲಾಗಿದ್ದು , ಇದು ಜನರಿಗೆ ತಲುಪಬೇಕಿದೆ.
ಸರಿಯಾದ ನೀತಿ, ಸರಿಯಾದ ಉದ್ದೇಶವಿದ್ದರೆ ವಿಧಿಯೂ ಬದಲಾಗುತ್ತದೆ. ಇಂದು ದೇಶದಲ್ಲಿ ಅನಿಲ ಪೈಪ್ಲೈನ್ನ ನೆಟ್ವರ್ಕ್ ಸಿದ್ಧವಾಗುತ್ತಿದೆ. ದೇಶದ ಪ್ರತಿ ಗ್ರಾಮಕ್ಕೆ ಆಪ್ಟಿಕಲ್ ಫೈಬರ್ ಸಂಪರ್ಕ ಇದೆ. ಎಲ್ಲ ಮನೆಗಳಿಗೆ ನೀರು ತಲುಪಿಸಲು ಪೈಪ್ ಇದೆ. ಇದು ಭಾರತ ಮಾತೆಯ ಹೊಸ ಭಾಗ್ಯ ರೇಖೆ.
ಇಷ್ಟೊಂದು ಅಭಿವೃದ್ಧಿ ಯೋಜನೆಗಳಿಗೆ, ಆತ್ಮನಿರ್ಭರ್ ಅಸ್ಸಾಂ ಮಾಡಿದ್ದಕ್ಕೆ, ಭಾರತದ ನಿರ್ಮಾಣಕ್ಕಾಗಿ ಅಸ್ಸಾಂನ ಹಾರಕ್ಕಾಗಿ ನಾನು ಮತ್ತೊಮ್ಮೆ ನಿಮಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಮೋದಿ ಮಾತು ಮುಗಿಸಿದ್ದಾರೆ.
Published On - 1:28 pm, Mon, 22 February 21