ಸ್ವಕ್ಷೇತ್ರ ವಯನಾಡ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ

ದೇಶದ ಕೃಷಿ ವ್ಯವಸ್ಥೆಯನ್ನು ಸಂಪೂರ್ಣವಾಗ ಹಾಳುಗೆಡಹುವ ಉದ್ದೇಶದೊಂದಿಗೇ ರಚಿಸಲಾದ ಈ ಕಾಯ್ದೆಗಳು, ಪ್ರಧಾನಿ ನರೇಂದ್ರ ಮೋದಿಯವರ 2-3 ಗೆಳೆಯರ ಕೈಗೆ ದೇಶವನ್ನು ಒಪ್ಪಿಸಲಿವೆ ಎಂದು ರಾಹುಲ್ ಗಾಂಧಿ ಕೇರಳದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಸ್ವಕ್ಷೇತ್ರ ವಯನಾಡ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
ಕೇರಳದ ಕಾನ್ವೆಂಟ್ ಒಂದರ ಸಿಸ್ಟರ್​ಗಳ ಜತೆ ಸಂವಾದ ನಡೆಸಿದ ರಾಹುಲ್ ಗಾಂಧಿ
Follow us
guruganesh bhat
|

Updated on:Feb 22, 2021 | 3:45 PM

ವಯನಾಡ್: ಇಡೀ ವಿಶ್ವವೇ ಭಾರತದ ರೈತರು ಅನುಭವಿಸುತ್ತಿರುವ ಕಷ್ಟಗಳನ್ನು ಗಮನಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ರೈತರ ನೋವನ್ನು ಅರಿಯಲು ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಸ್ವಕ್ಷೇತ್ರ ಕೇರಳದ ವಯನಾಡ್​ನ ಪ್ರವಾಸದಲ್ಲಿ ನಿರತರಾಗಿರುವ ಅವರು, ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಪಾಲ್ಗೊಂಡು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರಕ್ಕೆ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಯಾವುದೇ ಆಸಕ್ತಿ ಇಲ್ಲ. ದೇಶದ ಕೃಷಿ ವ್ಯವಸ್ಥೆಯನ್ನು ಸಂಪೂರ್ಣವಾಗ ಹಾಳುಗೆಡಹುವ ಉದ್ದೇಶದೊಂದಿಗೇ ರಚಿಸಲಾದ ಈ ಕಾಯ್ದೆಗಳು, ಪ್ರಧಾನಿ ನರೇಂದ್ರ ಮೋದಿಯವರ 2-3 ಗೆಳೆಯರ ಕೈಗೆ ದೇಶವನ್ನು ಒಪ್ಪಿಸಲಿವೆ ಎಂದು ಅವರು ಕಿಡಿಕಾರಿದರು. ಕೃಷಿ ಮಾತ್ರವೇ ಭಾರತ ಮಾತೆಯ ಮಕ್ಕಳಿಗೆ ತಿಳಿದಿರುವ ವ್ಯವಹಾರವಾಗಿದ್ದು ಇನ್ನೆಲ್ಲ ವ್ಯವಹಾರಗಳೂ ಎರಡನೇ ಆದ್ಯತೆಯಾಗಿದೆ. ಇಂತಹ ಕೃಷಿ ವ್ಯವಸ್ಥೆಯನ್ನು ಸಂಪೂರ್ಣ ವಿನಾಶಕ್ಕೆ ತರಬಲ್ಲ ಸಾಮರ್ಥ್ಯವನ್ನು ಕೃಷಿ ಕಾಯ್ದೆಗಳು ಹೊಂದಿವೆ ಎಂದು ಅವರು ತಮ್ಮ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಂಸತ್​ನಲ್ಲಿ ತಾವು ಮಾಡಿದ ಭಾಷಣವನ್ನು ನೆನಸಿಕೊಂಡ ಅವರು, ಹಿಂದಿಯಲ್ಲಿ ಹಮ್ ದೋ ಹಮಾರಿ ದೋ ಎಂದಿದ್ದೆ. ಅದೇ ಮಾತಿನಂತೆ ಕೇಂದ್ರ ಸರ್ಕಾರದಲ್ಲಿನ ಇಬ್ಬರು ಸರ್ಕಾರದ ಹೊರಗಿನ ಇಬ್ಬರ ಜೊತೆ ಸಂಬಂಧ ಬೆಳೆಸಿಕೊಂಡಿವೆ ಎಂದು ಚಾಟಿ ಬೀಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ಅತ್ಯುತ್ಸಾಹದಿಂದ ಭಾಗವಹಿಸಿದರು.

ಲೋಕಸಭೆಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದ ರಾಹುಲ್ ಗಾಂಧಿ

ಇತ್ತೀಚಿಗೆ ಲೋಕಸಭೆಯಲ್ಲಿ  ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೃಷಿ ಕಾಯ್ದೆಗಳು ಮಂಡಿ ವ್ಯವಸ್ಥೆಯನ್ನು ನಾಶ ಮಾಡಲಿದೆ ಎಂದಿದ್ದರು. ಕೃಷಿ ಕಾಯ್ದೆಯಲ್ಲಿನ ಮೊದಲ ಅಂಶವೆಂದರೆ ದೇಶದ ಯಾವುದೇ ಭಾಗದಲ್ಲಿ ಯಾರಿಗೆ ಬೇಕಾದರೂ ಆಹಾರ ಧಾನ್ಯ, ಹಣ್ಣು ಮತ್ತು ತರಕಾರಿಗಳನ್ನು ಅನಿಯಮಿತವಾಗಿ ಖರೀದಿ ಮಾಡಬಹುದು. ಅನಿಯಮಿತವಾಗಿ ಖರೀದಿಗೆ ಸಾಧ್ಯವಾಗುವುದಾದರೆ ಮಂಡಿಗಳಿಗೆ ಹೋಗುವವರು ಯಾರು? ಕೃಷಿ ಕಾಯ್ದೆಯ ಮೊದಲನೇ ಅಂಶವೇ ಮಂಡಿಗಳನ್ನು ನಾಶಪಡಿಸುವುದಾಗಿದೆ ಎಂದು ಹೇಳಿದ್ದರು.

ರೈತ ಹೋರಾಟದಲ್ಲಿ ಸಾವನ್ನಪ್ಪಿದ ರೈತರಿಗೆ ಲೋಕಸಭೆಯಲ್ಲಿ ಎರಡು ನಿಮಿಷ ಮೌನಾಚರಣೆ ಮೂಲಕ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಸಿದೆ. ಶ್ರದ್ಧಾಂಜಲಿ ಸಲ್ಲಿಕೆಗೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದ್ದು ಸದನ‌ ನಡೆಸುವ ಜವಾಬ್ದಾರಿ ನನ್ನದು ಎಂದ ಸ್ಪೀಕರ್ ಓಂಬಿರ್ಲಾ ಹೇಳಿದ್ದರು.

ರಾಹುಲ್ ಕೃಷಿ ಕಾಯ್ದೆ ವಿಷಯ ಪ್ರಸ್ತಾಪ ಮಾಡಿದಾಗ ಸದನದಲ್ಲಿ ಗದ್ದಲವುಂಟಾಗಿತ್ತು. ಈ ನಡುವೆ ಕೃಷಿ ಕಾಯ್ದೆ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸಭಾಪತಿ ಹೇಳಿದಾಗ ನಾನು ಬಜೆಟ್ ಬಗ್ಗೆ ಮಾತನಾಡುವುದಿಲ್ಲ, ಕೃಷಿ ಕಾಯ್ದೆ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ರಾಹುಲ್  ಉತ್ತರಿಸಿದ್ದಾರೆ. ಇದು ರೈತರ ಪ್ರತಿಭಟನೆ ಮಾತ್ರ ಅಲ್ಲ , ದೇಶದ ಜನರ ಪ್ರತಿಭಟನೆ, ರೈತರು ದಾರಿ ತೋರಿಸುತ್ತಿದ್ದಾರೆ. ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲೇ ಬೇಕು ಎಂದು ಅವರು  ಒತ್ತಾಯಿಸಿದ್ದರು.

ಸೈಕಲ್ ತುಳಿದ ರಾಬರ್ಟ್ ವಾದ್ರಾ ಎರಡು ದಿನಗಳ ಹಿಂದಷ್ಟೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ತೈಲ ಬೆಲೆಗಳ ಏರಿಕೆ ವಿರುದ್ಧ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಬೆನ್ನಲ್ಲೇ ಸೋನಿಯಾ ಗಾಂಧಿ ಅಳಿಯ ರಾಬರ್ಟ್​ ವಾದ್ರಾ ದೆಹಲಿಯ ಖಾನ್ ಮಾರುಕಟ್ಟೆಯಿಂದ ತಮ್ಮ ಕಚೇರಿಗೆ ಸೈಕಲ್ ತುಳಿದಿದ್ದಾರೆ. ತೈಲ ಬೆಲೆ ಶತಕ ಮುಟ್ಟಿರುವುದನ್ನು ಟೀಕಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಏಸಿ ಕಾರಿನಿಂದ ಹೊರಗೆ ಬಂದು ಜನಸಾಮಾನ್ಯರ ಜನಜೀವನವನ್ನು ತಿಳಿಯಬೇಕು ಎಂದು ಟೀಕಿಸಿದ್ದಾರೆ.

ಮೇ 15ಕ್ಕೆ ರಾಹುಲ್ ಗಾಂಧಿ ವಿಚಾರಣೆ 2014ರ ಪ್ರಕರಣಕ್ಕೆ ಸಂಬಂಧಿಸಿ ಮೇ 15ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿಚಾರಣೆ ನಡೆಸುವುದಾಗಿ ಮಹಾರಾಷ್ಟ್ರದ ನ್ಯಾಯಾಲಯವೊಂದು ತಿಳಿಸಿದೆ. 2014 ರಲ್ಲಿ ಮಹಾರಾಷ್ಟ್ರದ ಠಾಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತ ‘ಮಹಾತ್ಮಾ ಗಾಂಧೀಜಿಯವರ ಹತ್ಯೆಯಲ್ಲಿ ಆರ್​ಎಸ್​ಎಸ್​ ಕೈವಾಡವಿದೆ ಎಂದು ಆರೋಪ ಮಾಡಿದ್ದರು’ ಇದೇ ಹೇಳಿಕೆಯ ಆಧಾರದ ಮೇಲೆ ಆರ್​ಎಸ್​ಎಸ್​ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಮೇ 15ರಂ ನಡೆಸುವುದಾಗಿ ಕೋರ್ಟ್ ತಿಳಿಸಿದೆ.

ಇದನ್ನೂ ಓದಿ: Greta Thunberg toolkit | ಕೇಂದ್ರ ಸರ್ಕಾರಕ್ಕೆ ಭಯ ಶುರುವಾಗಿದೆ; ದಿಶಾ ರವಿ ಬಂಧನ ಖಂಡಿಸಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ದಲಿತ ಯುವತಿಯನ್ನು ಮದುವೆಯಾಗಲಿ..ನಮ್ಮ ಇಲಾಖೆಯಿಂದ 2.5 ಲಕ್ಷ ರೂ. ಕೊಡುತ್ತೇನೆ: ರಾಮದಾಸ್​ ಅಠಾವಳೆ

Published On - 3:27 pm, Mon, 22 February 21

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ